• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬರೀ ಸುಳ್ಳು, ಹಸಿ ಹಸಿ ಸುಳ್ಳು..! 2024ರ ಚುನಾವಣೆಗೆ ನಿಲ್ಲುವೆ ಎಂದ ಟ್ರಂಪ್..!

|

ಮಾತು ಆಡಿದ್ರೆ ಹೋಯ್ತು, ಮುತ್ತು ಹೊಡೆದ್ರೆ ಹೋಯ್ತು ಎಂಬ ಗಾದೆ ಮಾತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸರಿಯಾಗಿ ಅನ್ವಯಿಸುತ್ತೆ. ಏಕೆಂದರೆ ಟ್ರಂಪ್‌ರ ನಡೆ-ನುಡಿ ಎರಡೂ ಅಪಕ್ವ. ಉನ್ನತ ಹುದ್ದೆಯಲ್ಲೂ ತನ್ನ ಚಾಳಿ ಮುಂದುವರಿಸಿದ್ದ ಟ್ರಂಪ್, ಜಗತ್ತಿನಾದ್ಯಂತ ಟೀಕೆಗೆ ಗುರಿಯಾದ ವ್ಯಕ್ತಿ. ಅಮೆರಿಕದ ವಿವಾದಾತ್ಮಕ ಅಧ್ಯಕ್ಷ ಮತ್ತೆ ಸುಳ್ಳು ಹೇಳಿ ತಗ್ಲಾಕೊಂಡಿದ್ದಾರೆ.

'ಕನ್ಸರ್ವೇಟಿವ್ ಪೊಲಿಟಿಕಲ್ ಕಾನ್ಫರೆನ್ಸ್'ನಲ್ಲಿ ಮಾತನಾಡಿದ ಟ್ರಂಪ್ 2020 ನವೆಂಬರ್ 3ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮೋಸ ನಡೆದಿದೆ ಅಂತಾ ಮತ್ತೆ ಕ್ಯಾತೆ ತೆಗೆದರು. ಅಲ್ಲದೆ ತಾನೇ ಮುಂದಿನ ಬಾರಿಯೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಎನ್ನುವಂತೆ ಮಾತನಾಡಿ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಟ್ರಂಪ್‌ಗೆ ಇನ್ನೂ ಸಿಕ್ಕಿಲ್ಲ ರಿಲೀಫ್, ಮುಂದೆ ಕಾದಿದೆಯಾ ಮಾರಿ ಹಬ್ಬ..?ಟ್ರಂಪ್‌ಗೆ ಇನ್ನೂ ಸಿಕ್ಕಿಲ್ಲ ರಿಲೀಫ್, ಮುಂದೆ ಕಾದಿದೆಯಾ ಮಾರಿ ಹಬ್ಬ..?

ಇಡೀ ಅಮೆರಿಕದ ಇತಿಹಾಸದಲ್ಲೇ ಎರಡೆರಡು ಬಾರಿ ವಾಗ್ದಂಡನೆ ಪ್ರಕ್ರಿಯೆಗೆ ಗುರಿಯಾದ ಏಕೈಕ ಅಧ್ಯಕ್ಷ ಎಂಬ ಕುಖ್ಯಾತಿ ನಡುವೆ, ಟ್ರಂಪ್ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷರ ಖುರ್ಚಿ ಬಿಟ್ಟು, ಬೆಳ್ಳಂಬೆಳಗ್ಗೆ ವೈಟ್‌ಹೌಸ್‌ನಿಂದ ಹೋದ ನಂತರ ಟ್ರಂಪ್ ಇದೇ ಮೊದಲ ಬಾರಿಗೆ ಬಹಿರಂಗ ಭಾಷಣ ಮಾಡಿದ್ದಾರೆ.

ಮತ್ತೊಂದು ಪಕ್ಷ ಕಟ್ಟುವುದಿಲ್ಲ..!

ಮತ್ತೊಂದು ಪಕ್ಷ ಕಟ್ಟುವುದಿಲ್ಲ..!

ಟ್ರಂಪ್ ಹಾಗೂ ಟ್ರಂಪ್ ಫ್ಯಾಮಿಲಿ ರಿಪಬ್ಲಿಕನ್ ಪಕ್ಷದ ಮೇಲೆ ಬಿಗಿ ಹಿಡಿತ ಸಾಧಿಸಿದೆ ಎಂಬ ಆರೋಪ ಈ ಮೊದಲಿನಿಂದಲೂ ಇದೆ. ಆರೋಪಕ್ಕೆ ಬಲ ನೀಡುವಂತೆ ಟ್ರಂಪ್ ಕೂಡ ವರ್ತಿಸುತ್ತಿದ್ದಾರೆ. ‘ಕನ್ಸರ್ವೇಟಿವ್ ಪೊಲಿಟಿಕಲ್ ಕಾನ್ಫರೆನ್ಸ್'ನಲ್ಲಿ ರಿಪಬ್ಲಿಕನ್ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, ಮುಂದಿನ ಚುನಾವಣೆಗೂ ನಾನು ನಿಲ್ಲುವ ಸಾಧ್ಯತೆ ಇದೆ. ನಾನು ಮತ್ತೊಂದು ಪಕ್ಷವನ್ನು ಕಟ್ಟುವ ಉದ್ದೇಶ ಹೊಂದಿಲ್ಲ.

2024ರ ಚುನಾವಣೆಗೆ ನಾವು ಅಣಿಯಾಗಬೇಕಿದೆ ಎನ್ನುವ ಮೂಲಕ ಟ್ರಂಪ್ ಕಿಚ್ಚು ಹಚ್ಚಿದ್ದಾರೆ. ಇಲ್ಲಿ ಸೂಕ್ಷ್ಮ ವಿಚಾರವನ್ನೂ ಟ್ರಂಪ್ ಮನವರಿಕೆ ಮಾಡಿದ್ದು, ರಿಪಬ್ಲಿಕನ್ ಪಕ್ಷ ಕೈಬಿಟ್ಟರೆ ಬೇರೆ ಮಾರ್ಗ ಹುಡುಕುವುದು ಅನಿವಾರ್ಯ ಎಂಬ ಸಂದೇಶ ನೀಡಿದ್ದಾರೆ.

ಟ್ರಂಪ್‌ಗೆ ಟಿಕೆಟ್ ಸಿಗುವುದಾ..?

ಟ್ರಂಪ್‌ಗೆ ಟಿಕೆಟ್ ಸಿಗುವುದಾ..?

ಇಂತಹ ಪ್ರಶ್ನೆ ಸಾಕಷ್ಟು ಜನರನ್ನು ಕಾಡುತ್ತಿದೆ. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುವ ಬಗ್ಗೆ ‘ಕನ್ಸರ್ವೇಟಿವ್ ಪೊಲಿಟಿಕಲ್ ಕಾನ್ಫರೆನ್ಸ್'ನಲ್ಲಿ ಟ್ರಂಪ್ ಮಾಡಿದ್ದ ಭಾಷಣ ಇಂತಹ ಡೌಟ್ ಹುಟ್ಟುಹಾಕುವುದು ಸಾಮಾನ್ಯ. ಆದರೆ ಈ ಪ್ರಶ್ನೆಗೆ ಉತ್ತರ ಕೂಡ ತುಂಬಾ ಕಠಿಣ.

ಏಕೆಂದರೆ ಈಗಿನ ಮಟ್ಟಿಗೆ ರಿಪಬ್ಲಿಕನ್ ಪಕ್ಷದಲ್ಲಿ ಟ್ರಂಪ್ ಬೆಂಬಲಿಗರ ಪಡೆ ದೊಡ್ಡದಿದೆ. ಇನ್ನೂ ಚುನಾವಣೆ ಮುಗಿದು ಕೆಲವೇ ತಿಂಗಳು ಕಳೆದಿದೆ. ಹೀಗಾಗಿ ಸಹಜವಾಗಿ ಟ್ರಂಪ್ ಪರ ರಿಪಬ್ಲಿಕನ್ ಪಕ್ಷದಲ್ಲಿ ಒಲವು ಇದ್ದೇ ಇರುತ್ತದೆ. ಆದರೆ 2024ರ ಚುನಾವಣೆಗೆ ಇನ್ನೂ 4 ವರ್ಷ ಸಮಯ ಬಾಕಿ ಉಳಿದಿದೆ. ಈ ದೊಡ್ಡ ಗ್ಯಾಪ್‌ನಲ್ಲಿ ಬೇರೆ ನಾಯಕರ ಕಡೆಗೆ ರಿಪಬ್ಲಿಕನ್ ಪಕ್ಷದ ಸದಸ್ಯರ ಒಲವು ಮೂಡಿದರೂ ಮೂಡಬಹುದು.

ಚುನಾವಣೆ ವಿಚಾರಕ್ಕೆ ಕಿರಿಕ್..!

ಚುನಾವಣೆ ವಿಚಾರಕ್ಕೆ ಕಿರಿಕ್..!

2020ರ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಹೀನಾಯವಾಗಿ ಸೋತಿದ್ದರೂ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದರು. ಆದರೆ ಟ್ರಂಪ್ ಆರೋಪಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ. ಆದರೂ ತಾವು ಅಧಿಕಾರ ತ್ಯಜಿಸುವುದಿಲ್ಲ ಎಂದು ಟ್ರಂಪ್ ಹಠ ಹಿಡಿದಿದ್ದರು. ಈ ನಡುವೆ ವೈಟ್‌ಹೌಸ್ (ಅಧ್ಯಕ್ಷರ ನಿವಾಸ) ಎದುರು ಜನವರಿ 6ರಂದು ಬೆಂಬಲಿಗರ ಜೊತೆ ಬಹಿರಂಗ ಸಭೆ ನಡೆಸಿದ್ದ ಟ್ರಂಪ್, ಅವರನ್ನ ರೊಚ್ಚಿಗೆಬ್ಬಿಸುವ ಕೆಲಸ ಮಾಡಿದ್ದರು.

ಇನ್ನು ಟ್ರಂಪ್ ಮಾತು ಕೇಳಿ ಉನ್ಮಾದಕ್ಕೆ ಒಳಗಾದ ಟ್ರಂಪ್ ಬೆಂಬಲಿಗರು, ಅಮೆರಿಕದ ಸಂಸತ್ ಕಟ್ಟಡ ಇರುವ ಕ್ಯಾಪಿಟಲ್ ಹಿಲ್‌ಗೆ ನುಗ್ಗಿ ಹಿಂಸೆ ನಡೆಸಿದ್ದರು. ಇಷ್ಟಾದ ಮೇಲೂ ಸುಮ್ಮನಾಗದ ಟ್ರಂಪ್ ಮತ್ತೊಮ್ಮೆ 2020ರ ಚುನಾವಣೆ ಬಗ್ಗೆ ಆರೋಪ ಮಾಡುತ್ತಿದ್ದಾರೆ.

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಪಾರ್ಲಿಮೆಂಟ್ ಒಳಗೆ ಸಿಗರೇಟ್, ಸಿಗಾರ್..!

ಕ್ಯಾಪಿಟಲ್ ಹಿಲ್ ಕೇವಲ ಕಟ್ಟಡವಲ್ಲ. ಅದು ಅಮೆರಿಕ ಹಾಗೂ ಅಮೆರಿಕನ್ನರ ಪಾಲಿಗೆ ಗರ್ಭಗುಡಿ ಇದ್ದಂತೆ. ಇಂತಹ ಪವಿತ್ರ ಸ್ಥಳದ ಮೇಲೆ ಟ್ರಂಪ್ & ಗ್ಯಾಂಗ್ ಅಟ್ಯಾಕ್ ಮಾಡಿತ್ತು. ಕ್ಯಾಪಿಟಲ್ ಹಿಲ್ ಗಲಭೆಗೆ ಮುನ್ನ ಟ್ರಂಪ್ ನಡೆಸಿದ ಪ್ರಚೋದನಾಕಾರಿ ಭಾಷಣ, ಬೆಂಬಲಿಗರನ್ನು ಒಳಗೆ ನುಗ್ಗುವಂತೆ ಪ್ರೇರಿಪಿಸಿತ್ತು. ಆದರೆ ಹೀಗೆ ಸಂಸತ್ ಕಟ್ಟಡದ ಒಳಗೆ ನುಗ್ಗಿದ ಟ್ರಂಪ್ ಬೆಂಬಲಿಗರು ಕೈಯಲ್ಲಿ ದೊಣ್ಣೆ, ಗನ್ ಸೇರಿದಂತೆ ಮಾರಕಾಸ್ತ್ರಗಳನ್ನ ಹಿಡಿದಿದ್ದರು.

ಮಾತ್ರವಲ್ಲ ಸಂಸತ್ ಸದಸ್ಯರು ಕೂರುವ ಜಾಗದಲ್ಲಿ ಕೂತು ಸಿಗರೇಟ್ ಸೇದಿದ್ದಾರೆ, ಸಿಗಾರ್ ಹೊಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಅಸಹ್ಯಕರವಾಗಿ ವರ್ತಿಸಿ, ಅವರೆಷ್ಟು ಸೈಕೋಗಳು ಎಂಬುದನ್ನ ಸಾಬೀತು ಮಾಡಿದ್ದಾರೆ. ಅದರಲ್ಲೂ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕಚೇರಿ ಮೊದಲ ಟಾರ್ಗೆಟ್ ಆಗಿತ್ತು.

ಯುಎಸ್ ಮಾಜಿ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಂಡನೆ, ಹೇಗೆ? ಏನು? ಎತ್ತ?ಯುಎಸ್ ಮಾಜಿ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಂಡನೆ, ಹೇಗೆ? ಏನು? ಎತ್ತ?

English summary
Donald Trump spoke in Conservative Political Action Conference & He shows the confidence to contest in 2024 presidential election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X