ವುಹಾನ್‌ಗೆ ಹೋಗದೆಯೇ WHOನಿಂದ ಕೊರೊನಾ ಹುಟ್ಟು ಅಧ್ಯಯನ
ಬೀಜಿಂಗ್, ಆಗಸ್ಟ್ 28: ಕೊರೊನಾ ವೈರಸ್ ಹುಟ್ಟು ಕಂಡು ಹಿಡಿಯಲು ಹೋದ ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ವುಹಾನ್‌ಗೆ ಹೋಗದೆಯೇ ಹಿಂದಿರುಗಿದ್ದಾರೆ.
Recommended Video
ಈ ಕುರಿತು ತೀವ್ರ ವಿರೋಧ ವ್ಯಕ್ತವಾಗಿದೆ. ವುಹಾನ್‌ನಿಂದಲೇ ಕೊರೊನಾ ವೈರಸ್ ಹುಟ್ಟು ಆರಂಭವಾಗಿದೆ ಎನ್ನುವ ಆರೋಪವಿದೆ ಹೀಗಾಗಿಯೇ ಅದನ್ನು ಪತ್ತೆ ಹಚ್ಚಲು ತೆರಳಿದ್ದ ಅಧಿಕಾರಿಗಳು ಚೀನಾ ಸುತ್ತಾಡಿ ವಾಪಸಾಗಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ವಕ್ತಾರ ಮಾತನಾಡಿ, ಕೊರೊನಾ ಹುಟ್ಟು ಚೀನಾದಿಂದ ಆರಂಭವಾಗಿರುವುದಕ್ಕೆ ಚೀನಾಗೆ ಹೋಗಿ ಬಂದಿದೆ ಎಂದಿದ್ದಾರೆ. ಆದರೆ ಮೊದಲ ಪ್ರಕರಣ ಪತ್ತೆಯಾಗಿದ್ದ ವುಹಾನ್‌ಗೆ ಮಾತ್ರ ತೆರಳಿಲ್ಲ.

ವುಹಾನ್ ಪ್ರಯೋಗಾಲಯದಲ್ಲಿ ವೈರಸ್ ಹುಟ್ಟಿತೇ ಅಥವಾ ಸಮುದ್ರ ಆಹಾರ ಮಾರುಕಟ್ಟೆಯಲ್ಲಿ ಹುಟ್ಟಿತೇ ಎಂಬ ವಿಷಯದ ಕುರಿತು ಗೊಂದಲ ಉಂಟಾಗಿದೆ.
ಅಮೆರಿಕವು ಈ ಮೊದಲೇ ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ಮೇಲೆ ಮೃದು ಧೋರಣೆಯನ್ನು ತೋರುತ್ತಿದೆ ಎಂದು ಆರೋಪಿಸಿ ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಅನುದಾನವನ್ನು ಸ್ಥಗಿತಗೊಳಿಸಿತ್ತು.
ಎರಡನೇ ಬಾರಿ ವುಹಾನ್‌ನ ಸಮುದ್ರ ಆಹಾರ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು ಹೀಗಾಗಿ, ಮಾರುಕಟ್ಟೆಯನ್ನು ಬಂದ್ ಮಾಡಲಾಗಿತ್ತು. ಈ ಮಾರುಕಟ್ಟೆಯಿಂದಲೇ ಕೊರೊನಾ ಸೋಂಕು ಹುಟ್ಟಿಕೊಂಡಿರಬಹುದು ಎಂದು ಅಂದಾಜಿಸಲಾಗಿತ್ತು. ಅದಕ್ಕೂ ಮುನ್ನ ಬಾವುಲಿ ಸೂಪ್‌ನಿಂದಲೇ ಬಂದಿದೆ ಎನ್ನುವ ವಾದವಿತ್ತು.












Click it and Unblock the Notifications