• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾಭೀತಿ: ಯುಎಸ್‌ನಿಂದ ಭಾರತಕ್ಕೆ ಹೊರಡುವ ಮುನ್ನ ಓದಿ

|

ವಾಷಿಂಗ್ಟನ್, ಮಾರ್ಚ್ 13: ಸಾಂಕ್ರಾಮಿಕ ಪಿಡುಗು ಕೊರೊನಾವೈರಸ್ ನಿಯಂತ್ರಣಕ್ಕಾಗಿ ವಿಮಾನಯಾನ, ಪ್ರವಾಸಿಗರ ಮೇಲೆ ಭಾರತ ಸರ್ಕಾರ ನಿರ್ಬಂಧ ಹೇರಿದೆ. ಏಪ್ರಿಲ್ 15ರ ತನಕ ಎಲ್ಲಾ ಮಾದರಿಯ ಪ್ರವಾಸಿಗರ ವೀಸಾ ರದ್ದುಗೊಳಿಸಲಾಗಿದೆ. ಇದೇ ರೀತಿ ಅಮೆರಿಕ ಕೂಡಾ ಯುರೋಪ್ ಪ್ರವಾಸಿಗರನ್ನು ನಿರ್ಬಂಧಿಸಿದೆ. ಈ ನಡುವೆ ಯುಎಸ್‌ನಿಂದ ಭಾರತಕ್ಕೆ ಹೊರಟು ನಿಂತ ಪ್ರಯಾಣಿಕರಿಗೆ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸೂಚನೆಗಳನ್ನು ನೀಡಿದೆ.

ಭಾರತದಲ್ಲಿ ವಿಧಿಸಲಾಗಿರುವ ನಿರ್ಬಂಧ ಪ್ರಕಟಣೆಯಂತೆ, ಅನಿವಾಸಿ ಭಾರತೀಯರು OCI ಕಾರ್ಡ್ ಹೊಂದಿರುವವರಿಗೂ ಉಚಿತ ವೀಸಾ ಪ್ರಯಾಣ ಸೌಲಭ್ಯವನ್ನು ಏಪ್ರಿಲ್ 15ರ ತನಕ ನಿರ್ಬಂಧಿಸಲಾಗಿದೆ.

Infographics:ಕೊರೊನಾ ಎಂದರೆ ಭಯನಾ? ಈ ಸುದ್ದಿ ಓದಿ

ಬೇರೆ ದೇಶದ ನಾಗರಿಕರು ವೈದ್ಯಕೀಯ ವಿಷಯಕ್ಕಾಗಿ ತುರ್ತು ವೀಸಾ ಅಗತ್ಯವಿದ್ದರೆ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು. ಚೀನಾ, ಇಟಲಿ, ಇರಾನ್, ಕೊರಿಯಾ ರಿಪಬ್ಲಿಕ್, ಫ್ರಾನ್, ಸ್ಪೇನ್ ಹಾಗೂ ಜರ್ಮನಿಗೆ ಹೋಗಿ ಭಾರತಕ್ಕೆ ಬರುತ್ತಿರುವ ಎಲ್ಲಾ ಪ್ರಯಾಣಿಕರನ್ನು ಫೆಬ್ರವರಿ 15ರಿಂದ ಪ್ರತ್ಯೇಕಿಸಿ ಕೊರೊನಾವೈರಸ್ ಸೋಂಕಿನ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ.

24 ಗಂಟೆ ಕಾರ್ಯ ನಿರ್ವಹಿಸುವ ಸಹಾಯವಾಣಿ

24 ಗಂಟೆ ಕಾರ್ಯ ನಿರ್ವಹಿಸುವ ಸಹಾಯವಾಣಿ

ರಾಯಭಾರ ಕಚೇರಿಯಿಂದ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಸಹಾಯವಾಣಿಯನ್ನು ಪ್ರಕಟಿಸಲಾಗಿದೆ. ಅಮೆರಿಕದಲ್ಲಿರುವ ಭಾರತೀಯರು ಈ ಸಂಖ್ಯೆಗೆ ಕರೆ ಮಾಡಿ ಪ್ರಯಾಣದ ಬಗ್ಗೆ ಮಾಹಿತಿ ಪಡೆಯಬಹುದು. ಭಾರತ ಸರ್ಕಾರ ಹೊರಡಿರುವ ಪ್ರಯಾಣಿಕರಿಗೆ ಸೂಚನೆಯಂತೆ ಅಮೆರಿಕದಲ್ಲಿರುವ ರಾಯಭಾರ ಕಚೇರಿ ಸಲಹಾ ಕೇಂದ್ರ ಸ್ಥಾಪಿಸಿದೆ.

ಕೋವಿಡ್19: ಏಪ್ರಿಲ್ 15ರ ತನಕ ಪ್ರವಾಸಿಗರಿಗೆ ವೀಸಾ ಸಿಗಲ್ಲ

6 ಪ್ರದೇಶವಾರು ಇಮೇಲ್ ಹಾಗೂ ಸಹಾಯವಾಣಿ

ಬರ್ಮುಡಾ, ಡೆಲಾವೇರ್, ಡಿಸ್ಟ್ರೀಕ್ ಆಫ್ ಕೊಲಂಬಿಯಾ, ಕೆಂಟುಕಿ, ಮೇರಿಲ್ಯಾಂಡ್, ನಾರ್ಥ್ ಕರೊಲಿನಾ, ವರ್ಜಿನಿಯಾ ಪ್ರದೇಶದ ನಾಗರಿಕರು 202-213-1364 ಅಥವಾ 202-262-0375 ಸಂಖ್ಯೆಗೆ ಕರೆ ಮಾಡಬಹುದು ಅಥವಾ ಇಮೇಲ್ ಮಾಡಬಹುದು. ಇದೇ ರೀತಿ 6 ಪ್ರದೇಶವಾರು ಇಮೇಲ್ ಹಾಗೂ ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ.

ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗು' ಎಂದು ಘೋಷಿಸಲು ಕಾರಣವೇನು?

ಕೊರೊನಾ ವೈರಸ್ ಅಪ್ಡೇಟ್

ಕೊರೊನಾ ವೈರಸ್ ಅಪ್ಡೇಟ್

ಮಾರಣಾಂತಿಕ ಕೊರೊನಾ ವೈರಸ್ ಅಪ್ಡೇಟ್: ಅಂಕಿ-ಅಂಶಗಳ ಪ್ರಕಾರ 4,973ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. 114 ರಾಷ್ಟ್ರಗಳಲ್ಲಿ 1,34,681ಕ್ಕೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದೆ. ಕೊರೊನಾ ವೈರಸ್ ಹರಡಿಸಿದ ಚೀನಾದ ಹುಬೈ ಪ್ರದೇಶದಲ್ಲಿಯೇ 3,170 ಮಂದಿ ಸೋಂಕಿಗೆ ಬಲಿಯಾಗಿದ್ದರೆ, ಚೀನಾದಲ್ಲಿ ಒಟ್ಟು 80,797 ಜನರಿಗೆ ಸೋಂಕು ತಗಲಿರುವ ಬಗ್ಗೆ ವರದಿಯಾಗಿದೆ. ಯುಎಸ್ಎನಲಿ 1727 ಪ್ರಕರಣ ದಾಖಲಾಗಿದ್ದು, 41 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ವಿಶ್ವದೆಲ್ಲೆಡೆ ಸೇರಿ 69, 142 ಮಂದಿ ಗುಣಮುಖರಾಗಿದ್ದಾರೆ.

ಭಾರತದಲ್ಲಿ ಸಹಾಯವಾಣಿ ಸಂಖ್ಯೆ

ಭಾರತದಲ್ಲಿ ಸಹಾಯವಾಣಿ ಸಂಖ್ಯೆ

ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ. ಕೊರೊನಾ ವೈರಸ್ ಎನ್ನುವುದು ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಸೋಂಕಾಗಿದೆ. ಈಗ ಪ್ರಾಣಿಗಳಿಂದ ಮನುಷ್ಯನಿಗೂ ಈ ಸೋಂಕು ತಗುಲುತ್ತಿದೆ.

ಭಾರತದಲ್ಲಿ ಸಹಾಯವಾಣಿ ಸಂಖ್ಯೆ + 91-11-23978046ಗೆ ಕರೆ ಮಾಡಿ ನೊವೆಲ್ ಕೊರೊನಾ ವೈರಾಣು ಕುರಿತ ಮಾಹಿತಿ, ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. ಕರ್ನಾಟಕದಲ್ಲಿ ಇದೇ ಸಂಖ್ಯೆ ಅಥವಾ 104ಕ್ಕೆ ಕರೆ ಮಾಡಬಹುದು.

English summary
Indian Embassy in Washington DC: 24/7 Helplines of Indian Embassy/Consulates in USA for queries/clarifications regarding the recent travel advisory issued by the Govt. of India for travel to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X