• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಂಪ್‌ಗೆ ಮತ್ತೊಂದು ಹಿನ್ನಡೆ: ಟ್ವಿಟ್ಟರ್ ಖಾತೆ ಶಾಶ್ವತ ಸ್ಥಗಿತ

|

ವಾಷಿಂಗ್ಟನ್, ಜನವರಿ 9: ಈಗಾಗಲೇ ಸಾಮಾಜಿಕ ಜಾಲತಾಣ ಸಂಸ್ಥೆಗಳಿಂದ ನಿರ್ಬಂಧಕ್ಕೆ ಒಳಗಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ. ವಾಷಿಂಗ್ಟನ್ ಡಿಸಿಯಲ್ಲಿನ ಕ್ಯಾಪಿಟಲ್ ಹಿಲ್‌ಗೆ ನುಗ್ಗಿ ಟ್ರಂಪ್ ಬೆಂಬಲಿಗರು ಹಿಂಸಾಚಾರ ನಡೆಸಿದ ಎರಡು ದಿನಗಳ ಬಳಿಕ ಟ್ವಿಟ್ಟರ್ ಸಂಸ್ಥೆಯು ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದೆ. 'ಮತ್ತಷ್ಟು ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಅಪಾಯ ಇರುವುದರಿಂದ' ಈ ಕ್ರಮ ತೆಗೆದುಕೊಂಡಿರುವುದಾಗಿ ಅದು ತಿಳಿಸಿದೆ.

'ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಟ್ವೀಟ್‌ಗಳನ್ನು ಮತ್ತು ಅವುಗಳ ಸುತ್ತಲಿನ ಸಂದರ್ಭಗಳನ್ನು ಸೂಕ್ಷ್ಮವಾಗಿ ಪರಾಮರ್ಶಿಸಿದ ಬಳಿಕ, ಹಿಂಸಾಚಾರಕ್ಕೆ ಮತ್ತಷ್ಟು ಪ್ರಚೋದನೆ ನೀಡುವ ಅಪಾಯದ ಹಿನ್ನೆಲೆಯಲ್ಲಿ ನಾವು ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ್ದೇವೆ' ಎಂದು ಟ್ವಿಟ್ಟರ್ ಸಂಸ್ಥೆ ತಿಳಿಸಿದೆ.

ಕ್ಯಾಪಿಟಲ್ ಹಿಲ್ ಮೇಲೆ ಬೆಂಗಲಿಗರು ದಾಳಿ ಮಾಡಿದ ಬಳಿಕ ಟ್ರಂಪ್ ಅವರು ಅನೇಕ ಟ್ವೀಟ್‌ಗಳನ್ನು ಮಾಡಿದ್ದರು. ಅವುಗಳಲ್ಲಿ ಕೆಲವೊಂದು ಹಿಂಸಾಚಾರವನ್ನು ಕೆರಳಿಸುವ ಸ್ವರೂಪದಲ್ಲಿದ್ದ ಕಾರಣ ಟ್ವಿಟ್ಟರ್ ಅವುಗಳನ್ನು ಅಳಿಸಿಹಾಕಿತ್ತು. ಟ್ರಂಪ್‌ಗೆ 88 ಮಿಲಿಯನ್ ಹಿಂಬಾಲಕರಿದ್ದು, ಅವರ ಟ್ವೀಟ್‌ಗಳು ಜನರ ಮೇಲೆ ಪರಿಣಾಮ ಬೀರುವುದರಿಂದ ಅವರ ಖಾತೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಟ್ರಂಪ್ ಖಾತೆಯು ಮತ್ತೆ ನಿಯಮಗಳನ್ನು ಉಲ್ಲಂಘಿಸಿದರೆ ಶಾಶ್ವತ ಸ್ಥಗಿತಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.

ಗುರುವಾರ ಟ್ರಂಪ್ ಟ್ವಿಟ್ಟರ್ ಖಾತೆ ಸಕ್ರಿಯಗೊಂಡಿತ್ತು. ಇಲ್ಲಿ ನೀಡುವ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲಿದ್ದು, ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗುತ್ತದೆ. ಯಾವುದೇ ಪ್ರಮಾದ ನಡೆದರೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಟ್ವಿಟ್ಟರ್ ಹೇಳಿತ್ತು.

ಟ್ವಿಟ್ಟರ್‌ ಕ್ರಮ ಟ್ರಂಪ್ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ಏಕೆಂದರೆ ಟ್ರಂಪ್ ಅಧಿಕಾರ ಅವಧಿ ಮುಗಿಯುವವರೆಗೂ ಅವರ ಖಾತೆಯನ್ನು ಫೇಸ್‌ಬುಕ್ ಈಗಾಗಲೇ ಅಮಾನತುಗೊಳಿಸಿದೆ. ಇನ್‌ಸ್ಟಾಗ್ರಾಂ ಕೂಡ ಟ್ರಂಪ್ ಅವರನ್ನು ನಿರ್ಬಂಧಿಸಿದೆ. ದಶಕದಿಂದಲೂ ಟ್ವಿಟ್ಟರ್‌ ಅನ್ನು ನಿರಂತರವಾಗಿ ಬಳಸುತ್ತಿರುವ ಟ್ರಂಪ್ ಅವರಿಗೆ ತಮ್ಮ ಹತಾಶೆಯನ್ನು ವ್ಯಕ್ತಪಡಿಸಲು ಈಗ ಬೇರೆ ಯಾವುದೇ ಮಾಧ್ಯಮ ಇಲ್ಲ.

English summary
Twitter has permanently suspended US president Donald Trump's account due to the risk of further incitement of violence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X