ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಟೀಂ ನಮಗೆ ಸಹಕಾರ ನೀಡುತ್ತಿಲ್ಲ: ಜೋ ಬೈಡನ್ ಆರೋಪ

|
Google Oneindia Kannada News

ಇನ್ನೇನು ಕೆಲವೇ ದಿನಗಳಲ್ಲಿ ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕೃತವಾಗಿ ಅಧಿಕಾರವನ್ನು ಪಡೆಯಲಿದ್ದಾರೆ. ಆದರೆ ಈ ಹೊತ್ತಲ್ಲೇ ಹೊಸ ಬಿಕ್ಕಟ್ಟು ತಲೆದೋರಿದೆ. ಟ್ರಂಪ್ ಹಾಗೂ ತಂಡ ಅಧಿಕಾರ ಹಸ್ತಾಂತರದ ವಿಚಾರದಲ್ಲಿ ನೆರವು ನೀಡದೆ, ಸಾಕಷ್ಟು ಅಡ್ಡಿಯುಂಟು ಮಾಡುತ್ತಿದೆ ಎಂದು ಜೋ ಬೈಡನ್ ಗಂಭೀರ ಆರೋಪ ಮಾಡಿದ್ದಾರೆ.

ಹಣಕಾಸು ಇಲಾಖೆ, ರಕ್ಷಣಾ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಮಾಹಿತಿ ನಮ್ಮ ತಂಡಕ್ಕೆ ಸಿಗುತ್ತಿಲ್ಲ. ಅಧಿಕಾರ ಹಸ್ತಾಂತರದ ಸಂದರ್ಭದಲ್ಲಿ ಇಂತಹ ವರ್ತನೆ ಗಮನಿಸಿದರೆ, ಟ್ರಂಪ್ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡಿರುವ ಅನುಮಾನ ನಮಗೆ ಕಾಡುತ್ತದೆ ಎಂದು ಬೈಡನ್ ಆರೋಪಿಸಿದ್ದಾರೆ. ನವೆಂಬರ್ 3ರ ಚುನಾವಣೆ ಬಳಿಕ ಜೋ ಬೈಡನ್ ಅಧಿಕೃತವಾಗಿ ಅಮೆರಿಕ ಅಧ್ಯಕ್ಷ ಎಂದು ಘೋಷಿಸಲಾಗಿದೆ.

'ಕೊರೊನಾ' ಸಂಕಷ್ಟದಲ್ಲಿರುವ ಜನರಿಗೆ 66 ಲಕ್ಷ ಕೋಟಿ ರೂಪಾಯಿ ಪರಿಹಾರ'ಕೊರೊನಾ' ಸಂಕಷ್ಟದಲ್ಲಿರುವ ಜನರಿಗೆ 66 ಲಕ್ಷ ಕೋಟಿ ರೂಪಾಯಿ ಪರಿಹಾರ

ಆದರೆ ಸತ್ಯ ಒಪ್ಪಲು ಟ್ರಂಪ್ ಬಿಲ್‌ಕುಲ್ ಸಿದ್ಧವಿಲ್ಲ. ಹೀಗಾಗಿ ಸದ್ಯ ಟ್ರಂಪ್ ಅಧಿಕಾರ ಹಸ್ತಾಂತರ ವಿಚಾರದಲ್ಲಿ ದ್ವಂದ್ವ ನಿಲುವು ಹೊಂದಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ನಾನು ಅಧಿಕಾರ ಹಸ್ತಾಂತರಕ್ಕೆ ಸಿದ್ಧ ಎಂದು ಆಶ್ಚರ್ಯಕರ ಹೇಳಿಕೆ ನೀಡಿದ್ದರು ಟ್ರಂಪ್. ಇಷ್ಟೆಲ್ಲದರ ಮಧ್ಯೆ ನಮಗೆ ಅಧಿಕಾರ ಹಸ್ತಾಂತರದಲ್ಲಿ ಸಹಕಾರ ನೀಡುತ್ತಿಲ್ಲ ಎಂದು ಬೈಡನ್ ಆರೋಪಿಸಿದ್ದಾರೆ.

ಅಧ್ಯಕ್ಷ ಬದಲಾದರೆ ಎಲ್ಲವೂ ಚೇಂಜ್..!

ಅಧ್ಯಕ್ಷ ಬದಲಾದರೆ ಎಲ್ಲವೂ ಚೇಂಜ್..!

ಭಾರತದಲ್ಲಿ ಸಂಸತ್‌ಗೆ ಚುನಾವಣೆ ನಡೆದರೆ ಇಲ್ಲಿ ಜನಪ್ರತಿನಿಧಿಗಳು ಮಾತ್ರ ಬದಲಾಗುತ್ತಾರೆ. ಅಮೆರಿಕದಲ್ಲಿ ಪದ್ಧತಿ ಈ ರೀತಿ ಇಲ್ಲ. ಒಮ್ಮೆ ಚುನಾವಣೆ ಮುಗಿದು, ಹೊಸ ಅಧ್ಯಕ್ಷ ಆಯ್ಕೆಯಾದರೆ ಹಿಂದಿನ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು ಕೂಡ ಜಾಗ ಖಾಲಿ ಮಾಡಬೇಕಾಗುತ್ತದೆ. ಏಕೆಂದರೆ ಹೊಸದಾಗಿ ಬರುವ ಅಧ್ಯಕ್ಷ ತನಗೆ ಬೇಕಾದ ಅಧಿಕಾರಿಗಳ ತಂಡ ಕಟ್ಟಿರುತ್ತಾನೆ. ಹೀಗಾಗಿಯೇ ಅಮೆರಿಕದಲ್ಲಿ ಅಧ್ಯಕ್ಷ ಬದಲಾದರೆ ಎಲ್ಲವೂ ಬದಲಾಗಿಬಿಡುತ್ತದೆ. ಪರಿಸ್ಥಿತಿ ಹೀಗಿರುವಾಗ ಅಧಿಕಾರ ಹಸ್ತಾಂತರ ತುಂಬಾ ಸೂಕ್ಷ್ಮ ವಿಚಾರವಾಗಿದೆ. ಆದರೆ ಜೋ ಬೈಡನ್‌ ಮಾಡುತ್ತಿರುವ ಆರೋಪದ ಪ್ರಕಾರ ಅಧಿಕಾರವೇ ಸರಿಯಾಗಿ ಹಸ್ತಾಂತರ ಆಗುತ್ತಿಲ್ಲ.

ಶ್ವೇತಭವನವನ್ನು ಬಿಟ್ಟುಕೊಡುವುದಿಲ್ಲ ಎಂದು ಬೆದರಿಕೆಯೊಡ್ಡಿದ ಡೊನಾಲ್ಡ್ ಟ್ರಂಪ್?ಶ್ವೇತಭವನವನ್ನು ಬಿಟ್ಟುಕೊಡುವುದಿಲ್ಲ ಎಂದು ಬೆದರಿಕೆಯೊಡ್ಡಿದ ಡೊನಾಲ್ಡ್ ಟ್ರಂಪ್?

ಮತದಾನದ ಮೇಲೆ ಅನುಮಾನ..!

ಮತದಾನದ ಮೇಲೆ ಅನುಮಾನ..!

ನವೆಂಬರ್ 3ರಂದು ಅಮೆರಿಕದಲ್ಲಿ ಮತದಾನ ಮುಗಿದ ನಂತರ ಟ್ರಂಪ್ ಒಂದಲ್ಲ ಒಂದು ರೀತಿ ಆರೋಪ ಮಾಡುತ್ತಾ ಬರುತ್ತಿದ್ದಾರೆ. ಮೊದಲಿಗೆ ಚುನಾವಣೆಯಲ್ಲಿ ನಕಲಿ ಮತದಾನ ನಡೆದಿದೆ ಎಂದಿದ್ದರು. ಆ ಬಳಿಕ ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದಿದ್ದರು. ಇದಾದ ನಂತರ ಬೈಡನ್‌ದು ಮೋಸದ ಗೆಲುವು ಅಂತಾ ಹೇಳಿ ಜಗತ್ತಿನ ಎದುರು ನಗೆಪಾಟಲಿಗೆ ಈಡಾಗಿದ್ದರು. ಆದರೆ ಟ್ರಂಪ್ ಆರೋಪಗಳನ್ನೆಲ್ಲಾ ಒಪ್ಪದ ಅಮೆರಿಕ ಚುನಾವಣಾ ಆಯೋಗ, ಬೈಡನ್ ಗೆಲುವನ್ನು ಕನ್ಫರ್ಮ್ ಮಾಡಿದೆ. 46ನೇ ಅಧ್ಯಕ್ಷರಾಗಿ ಬೈಡನ್ ಗೆಲುವನ್ನು ಅಮೆರಿಕ ಚುನಾವಣಾ ಆಯೋಗ ಖಚಿತಪಡಿಸಿದೆ.

ವೈಟ್‌ಹೌಸ್ ಬಿಟ್ಟು ಹೋಗಲ್ವಂತೆ..!

ವೈಟ್‌ಹೌಸ್ ಬಿಟ್ಟು ಹೋಗಲ್ವಂತೆ..!

ಅಮೆರಿಕದ ಪ್ರಜಾಪ್ರಭುತ್ವಕ್ಕೆ ಎರಡೂವರೆ ಶತಮಾನಗಳ ಇತಿಹಾಸ ಇದೆ. ಅಧ್ಯಕ್ಷರ ಆಯ್ಕೆಗೆ ಅಲ್ಲೊಂದು ಸಂಪ್ರದಾಯವಿದೆ, ಅದಕ್ಕೆ ಮಹತ್ವದ ಬೆಲೆಯೂ ಇದೆ. ಆದರೆ ಡೊನಾಲ್ಡ್ ಟ್ರಂಪ್ ಇದನ್ನೆಲ್ಲಾ ಹಾಳು ಮಾಡುತ್ತಿದ್ದಾರೆ ಎಂಬುದು ವಿರೋಧಿಗಳ ಆರೋಪ. ಇದಕ್ಕೆ ಸರಿಹೊಂದುವಂತೆ ಡೊನಾಲ್ಡ್ ಟ್ರಂಪ್ ಕೂಡ ನಡೆದುಕೊಳ್ಳುತ್ತಿದ್ದಾರೆ. ಬೈಡನ್ ಗೆಲುವು ಖಚಿತವಾದ ನಂತರವೂ ನಾನು ವೈಟ್ ಹೌಸ್ ಬಿಟ್ಟು ಹೊರಗೆ ಹೋಗಲ್ಲ. ಅಧಿಕಾರ ಬಿಟ್ಟುಕೊಡುವುದಿಲ್ಲ ಎಂದು ಟ್ರಂಪ್ ಹೇಳಿದ್ದು ಭಾರಿ ವಿವಾದ ಹುಟ್ಟುಹಾಕಿದೆ.

ಟ್ರಂಪ್ v/s ಮಾಸ್ಕ್: ವರ್ಷಪೂರ್ತಿ ನಡೆದಿತ್ತು 'ಮಾಸ್ಕ್ ಮಹಾಯುದ್ಧ'ಟ್ರಂಪ್ v/s ಮಾಸ್ಕ್: ವರ್ಷಪೂರ್ತಿ ನಡೆದಿತ್ತು 'ಮಾಸ್ಕ್ ಮಹಾಯುದ್ಧ'

ಒಳ ಜಗಳದಲ್ಲಿ ಸೊರಗುತ್ತಾ ಅಮೆರಿಕ..?

ಒಳ ಜಗಳದಲ್ಲಿ ಸೊರಗುತ್ತಾ ಅಮೆರಿಕ..?

ಟ್ರಂಪ್ ತಮ್ಮ ಹಠಮಾರಿ ಧೋರಣೆ ಮುಂದುವರಿಸಿ, ಅಧಿಕಾರ ಹಸ್ತಾಂತರ ಮಾಡಲು ಒಪ್ಪದಿದ್ದರೆ ಪರಿಸ್ಥಿತಿ ಮತ್ತಷ್ಟು ಕಠಿಣವಾಗಲಿದೆ. ಈಗಾಗಲೇ ಕೊರೊನಾ ಕಾರಣಕ್ಕೆ ನಲುಗಿ ಹೋಗಿರುವ ಅಮೆರಿಕದಲ್ಲಿ ಮತ್ತೊಮ್ಮೆ ಘೋರ ವಾತಾವರಣ ನಿರ್ಮಾಣವಾಗಲಿದೆ. ಒಂದೆಡೆ ಕುಸಿದು ಬಿದ್ದ ಆರ್ಥಿಕತೆ, ಮತ್ತೊಂದೆಡೆ ಅರಾಜಕತೆ ಸೃಷ್ಟಿಯಾದರೆ ವಿಶ್ವದ ದೊಡ್ಡಣ್ಣ ನಲುಗಿ ಹೋಗುವುದು ಗ್ಯಾರಂಟಿ. ಹೀಗಾಗಿಯೇ ಸಾಂವಿಧಾನಿಕ ಬಿಕ್ಕಟ್ಟು ಎದುರಾಗದಂತೆ ಅಮೆರಿಕದಲ್ಲಿ ಬೈಡನ್‌ಗೆ ಅಧಿಕಾರ ಹಸ್ತಾಂತರ ಮಾಡಬೇಕಿದೆ. ಈ ವಿಚಾರದಲ್ಲಿ ಪಕ್ಷವನ್ನೂ ಮರೆತು, ಡೆಮಾಕ್ರಟ್ಸ್ ಹಾಗೂ ರಿಪಬ್ಲಿಕನ್ಸ್ ಒಂದಾಗಿದ್ದಾರೆ. ಆದರೆ ಟ್ರಂಪ್ ಮಾತ್ರ ಇನ್ನೂ ದ್ವಂದ್ವ ಮನಸ್ಥಿತಿ ಹೊಂದಿದ್ದು, ಮುಂದೆ ಏನಾಗುತ್ತೋ ಕಾದು ನೋಡಬೇಕು.

English summary
Joe Biden alleges that his team has encountered obstruction during the transition of power from trump administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X