ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೊನಾಲ್ಡ್ ಟ್ರಂಪ್ ಒಬ್ಬ ನಾಲಾಯಕ್ ಅಧ್ಯಕ್ಷ: ಬರಾಕ್ ಒಬಾಮಾ

|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 20: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಒಬಾಮಾ ಪತ್ನಿ ಮಿಷೆಲ್ ಒಬಾಮಾ ಕೂಡ ಟ್ರಂಪ್ ವಿರುದ್ಧ ಹರಿಹಾಯ್ದಿದ್ದರು. ಟ್ರಂಪ್ ನಮಗೆ ತಪ್ಪು ಅಧ್ಯಕ್ಷ ಎಂದು ಹೇಳಿದ್ದರು.

ಡೊನಾಲ್ಡ್ ಟ್ರಂಪ್ ತಾವು ಕುಳಿತಿರುವ ಕಚೇರಿಗೆ ಸ್ವಲ್ಪವೂ ಯೋಗ್ಯರಲ್ಲ ಎಂದಿರುವ ಬರಾಕ್ ಒಬಾಮಾ, ಅಮೆರಿಕದ ಪ್ರಜಾಪ್ರಭುತ್ವದ ಉಳಿವಿಗಾಗಿ ಜೋ ಬಿಡೆನ್ ಅವರಿಗೆ ಮತ ಹಾಕುವುದು ಅನಿವಾರ್ಯವಾಗಿದೆ ಎಂದಿದ್ದಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್‌ಗೆ ಭಾರಿ ಮುಖಭಂಗಅಮೆರಿಕ ಅಧ್ಯಕ್ಷೀಯ ಚುನಾವಣೆ: ಟ್ರಂಪ್‌ಗೆ ಭಾರಿ ಮುಖಭಂಗ

ಟ್ರಂಪ್ ಅವರ ಆಡಳಿತದ ವಿರುದ್ಧ ನೇರ ವಾಗ್ದಾಳಿ ನಡೆಸುವುದರಿಂದ ಅಂತರ ಕಾಯ್ದುಕೊಂಡಿದ್ದ ಒಬಾಮಾ, ಈ ಬಾರಿ ಕಠಿಣವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದ ಮೂರನೇ ರಾತ್ರಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡನ್ ಪರ ಮಾತನಾಡಿದ ಒಬಾಮಾ ಅಧ್ಯಕ್ಷಗಿರಿಯನ್ನು ನಿಭಾಯಿಸಲು ಟ್ರಂಪ್ ಅಸಮರ್ಥರಾಗಿದ್ದಾರೆ ಎಂದರು. ಮುಂದೆ ಓದಿ...

ಕೆಲಸ ಮಾಡಲು ಆಸಕ್ತಿಯಿಲ್ಲ

ಕೆಲಸ ಮಾಡಲು ಆಸಕ್ತಿಯಿಲ್ಲ

ಟ್ರಂಪ್ ಅವರು ಯಾವ ಕೆಲಸವನ್ನು ಮಾಡಲೂ ಆಸಕ್ತಿ ತೋರಿಸುತ್ತಿಲ್ಲ. ಸಾಮಾನ್ಯ ನೆಲೆಯನ್ನು ಕಾಣುವುದರಲ್ಲಿಯೂ ಆಸಕ್ತಿಯಿಲ್ಲ. ತಮಗೆ ಮತ್ತು ತಮ್ಮ ಸ್ನೇಹಿತರಿಗೆ ಹೊರತುಪಡಿಸಿ ಯಾರಿಗಾದರೂ ಸಹಾಯ ಮಾಡಲು ಕಚೇರಿ ನೀಡಿರುವ ಅಪೂರ್ವ ಅಧಿಕಾರವನ್ನು ಬಳಸಿಕೊಳ್ಳಲು ಕೂಡ ಆಸಕ್ತಿಯಿಲ್ಲ. ತಾವು ಬಯಸುವ ಗಮನ ಸೆಳೆಯುವ ಮತ್ತೊಂದು ರಿಯಾಲಿಟಿ ಶೋದಂತೆಯೇ ಅಧ್ಯಕ್ಷಗಿರಿಯನ್ನು ಭಾವಿಸಿಕೊಂಡಿದ್ದಾರೆ' ಎಂದು ಒಬಾಮಾ ಟೀಕಿಸಿದ್ದಾರೆ.

ಲಕ್ಷಾಂತರ ಉದ್ಯೋಗ ನಷ್ಟ

ಲಕ್ಷಾಂತರ ಉದ್ಯೋಗ ನಷ್ಟ

ಕೊರೊನಾ ವೈರಸ್‌ನಿಂದ 1.70 ಲಕ್ಷ ಅಮೆರಿಕನ್ನರು ಜೀವ ಕಳೆದುಕೊಂಡಿರುವುದಕ್ಕೆ ಟ್ರಂಪ್ ಕಾರಣ ಎಂದು ಆರೋಪಿಸಿದ ಒಬಾಮಾ, ಟ್ರಂಪ್ ಅವರ ನೀತಿಯಿಂದಾಗಿ ಲಕ್ಷಾಂತರ ಜನರು ಆರ್ಥಿಕ ಹಿಂಜರಿತದಿಂದ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶ ಮತ್ತು ವಿದೇಶದಲ್ಲಿ ದೇಶದ ಪ್ರಜಾಪ್ರಭುತ್ವ ನೀತಿಗಳು ಕುಸಿದುಹೋಗಿವೆ ಎಂದು ಕಿಡಿಕಾರಿದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆ: ವಾಷಿಂಗ್ಟನ್ ಪೋಸ್ಟ್ - ಎಬಿಸಿ ಸಮೀಕ್ಷಾ ಫಲಿತಾಂಶಅಮೆರಿಕ ಅಧ್ಯಕ್ಷೀಯ ಚುನಾವಣೆ: ವಾಷಿಂಗ್ಟನ್ ಪೋಸ್ಟ್ - ಎಬಿಸಿ ಸಮೀಕ್ಷಾ ಫಲಿತಾಂಶ

ಉದ್ಯೋಗ ಸೃಷ್ಟಿಸುವ ಶಕ್ತಿಯಿಲ್ಲ

ಉದ್ಯೋಗ ಸೃಷ್ಟಿಸುವ ಶಕ್ತಿಯಿಲ್ಲ

ಅಧ್ಯಕ್ಷರಾಗಿ ದೇಶಕ್ಕೆ ಅಗತ್ಯ ಇರುವ ಬೇಡಿಕೆಗಳನ್ನು ಈಡೇರಿಸುವಷ್ಟು ಟ್ರಂಪ್ ಸಮರ್ಥರಾಗಿಲ್ಲ ಎಂಬ ಪತ್ನಿ ಮಿಷೆಲ್ ಒಬಾಮಾ ಅವರ ಹೇಳಿಕೆಯನ್ನು ಅನುಮೋದಿಸಿದ ಅವರು, ಟ್ರಂಪ್ ಉದ್ಯೋಗಗಳನ್ನು ಸೃಷ್ಟಿಸಿಲ್ಲ. ಏಕೆಂದರೆ ಅವರಿಂದ ಅದು ಸಾಧ್ಯವಾಗದು. ಇದರ ಪರಿಣಾಮ ತೀವ್ರ ಗಂಭೀರವಾಗಿದೆ ಎಂದು ಟೀಕಿಸಿದರು.

ಅರ್ಹತೆಯಿಂದ ಗೆಲ್ಲಲಾರರು

ಅರ್ಹತೆಯಿಂದ ಗೆಲ್ಲಲಾರರು

ನಾವು 330 ಮಿಲಿಯನ್ ಜನರ ಸುರಕ್ಷತೆ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಅಧ್ಯಕ್ಷ ಸ್ಥಾನದಲ್ಲಿರುವವರು ಕನಿಷ್ಠ ಮಟ್ಟದ ಸಂವೇದನೆ ಹೊಂದಿರುತ್ತಾರೆ ಎಂದು ನಿರೀಕ್ಷಿಸಬೇಕು. ಆದರೆ ಅಧ್ಯಕ್ಷ ಪ್ರಜಾಪ್ರಭುತ್ವಕ್ಕೆ ಶರಣಾಗಿರುತ್ತಾನೆ ಎಂಬುದನ್ನೂ ನಾವು ನಿರೀಕ್ಷೆ ಹೊಂದಬೇಕು. ಮತದಾರರನ್ನು ಶೋಷಿಸುವ ಮತ್ತು ಬೆದರಿಸುವ ಮೂಲಕ ಮಾತ್ರವೇ ಟ್ರಂಪ್ ಮತ್ತು ಅವರ ರಿಪಬ್ಲಿಕನ್ ಸಹವರ್ತಿಗಳು ಗೆಲ್ಲಬಹುದೇ ವಿನಾ ಅವರ ನೀತಿಗಳ ಅರ್ಹತೆಯಿಂದಲ್ಲ ಎಂದರು.

ನಮ್ಮ ದೇಶಕ್ಕೆ ಟ್ರಂಪ್ ಅಧ್ಯಕ್ಷರಾಗಿದ್ದೇ ಪ್ರಮಾದ: ಮಿಷೆಲ್ ಒಬಾಮಾ ವಾಗ್ದಾಳಿನಮ್ಮ ದೇಶಕ್ಕೆ ಟ್ರಂಪ್ ಅಧ್ಯಕ್ಷರಾಗಿದ್ದೇ ಪ್ರಮಾದ: ಮಿಷೆಲ್ ಒಬಾಮಾ ವಾಗ್ದಾಳಿ

English summary
Former American President Barack Obama on Wednesday slammed Donald Trump as he is not fit for the office.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X