ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆದುಳು ತಿನ್ನುವ ಅಮೀಬಾ: ಅಮೇರಿಕಾದಲ್ಲಿ ಮತ್ತೊಂದು ಬಾಲಕಿ ಬಲಿ!

|
Google Oneindia Kannada News

ವಾಷಿಂಗ್ಟನ್ ಆಗಸ್ಟ್ 18: ಯುನೈಟೆಡ್ ಸ್ಟೇಟ್ಸ್‌ನ ನೆಬ್ರಸ್ಕಾದಲ್ಲಿ ಬಾಲಕಿವೊಂದು ಮೆದುಳು ತಿನ್ನುವ ಅಮೀಬಾದ ಅಪರೂಪದ ಪ್ರಕರಣದಿಂದ ಸಾವನ್ನಪ್ಪಿದೆ ಎಂದು ಶಂಕಿಸಲಾಗಿದೆ. ಇದು ದೃಢಪಟ್ಟರೆ ನೆಬ್ರಸ್ಕಾದಲ್ಲಿ ಇದೇ ಮೊದಲ ಪ್ರಕರಣವಾಗಲಿದೆ. ನೆಗ್ಲೀರಿಯಾ ಫೌಲೆರಿ ಎಂಬ ಜೀವಿ ಸರೋವರಗಳು, ನದಿಗಳು ಮತ್ತು ಬೆಚ್ಚಗಿನ ನೀರಿನಲ್ಲಿ ವಾಸಿಸುವ ಅಮೀಬಾ ಆಗಿದೆ.

ಇದನ್ನು "ಮೆದುಳನ್ನು ತಿನ್ನುವ ಅಮೀಬಾ" ಎಂದು ಕರೆಯಲಾಗುತ್ತದೆ. ಏಕೆಂದರೆ ಇದು ಅಮೀಬಾದಂತೆ ಕಣ್ಣಿಗೆ ಗೋಚರಿಸದ ಸಣ್ಣ ಜೀವಿಯಾಗಿದ್ದು ನೀರಿನ ಮೂಲಕ ದೇಹಕ್ಕೆ ಸೇರಿಕೊಂಡು ಆ ಮೂಲಕ ಮೆದುಳಿಗೆ ಹೊಕ್ಕು ಮೆದುಳನ್ನು ತಿನ್ನುತ್ತದೆ. ಸಾಮಾನ್ಯವಾಗಿ ಈಜುವಾಗ ಇದು ದೇಹ ಸೇರಿ ಮೆದುಳಿನ ಸೋಂಕನ್ನು ಉಂಟುಮಾಡಬಹುದು. ಈ ಸೋಂಕು ಯಾವಾಗಲೂ ಮಾರಣಾಂತಿಕವಾಗಿರುತ್ತದೆ.

ಸಿಡಿಸಿ ಪ್ರಕಾರ, ಜನರು ಕಲುಷಿತ ನೀರನ್ನು ಕುಡಿಯುವುದರಿಂದ ಅಥವಾ ಸರಿಯಾಗಿ ಕ್ಲೋರಿನೇಟೆಡ್ ಕೊಳದಲ್ಲಿ ಈಜುವುದರಿಂದ ಸೋಂಕಿಗೆ ಒಳಗಾಗುವುದಿಲ್ಲ. ಯುನೈಟೆಡ್ ಸ್ಟೇಟ್ಸ್ನಲ್ಲಿ ಪ್ರತಿ ವರ್ಷ ಕೇವಲ ಮೂರು ಜನರು ಸೋಂಕಿಗೆ ಒಳಗಾಗುತ್ತಾರೆ ಎಂದು ಸಿಡಿಸಿ ಹೇಳಿದೆ. ಒಬ್ಬ ವ್ಯಕ್ತಿಯು ಸೋಂಕಿಗೆ ಒಳಗಾದಾಗ, ಆರಂಭಿಕ ಲಕ್ಷಣಗಳು ತಲೆನೋವು, ಜ್ವರ, ವಾಕರಿಕೆ ಅಥವಾ ವಾಂತಿಯನ್ನು ಒಳಗೊಂಡಿರಬಹುದು.

Another girl died in America from brain-eating amoeba!

ಮೆದುಳು ತಿನ್ನುವ ಅಮೀಬಾಕ್ಕೆ ಹಲವು ಜನ ಬಲಿ

2020 ಡಿಸೆಂಬರ್‌ ತಿಂಗಳಲ್ಲಿ ಟೆಕ್ಸಾಸ್ ನಲ್ಲಿ ಏಳು ವರ್ಷದ ಬಾಲಕನ ಮೆದುಳು ಹೊಕ್ಕಿದ್ದ ಸೂಕ್ಷ್ಮಾಣು ಜೀವಿ ಆತನ ಜೀವವನ್ನೇ ಬಲಿತೆಗೆದುಕೊಂಡಿತ್ತು. ಅಮೇರಿಕಾದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಈ ಹಿಂದೆ ಅಮೆರಿಕಾದಲ್ಲಿ ಮೆದುಳು ತಿನ್ನುವ ಸೂಕ್ಷ್ಮಾಣು ಜೀವಿಗೆ ಅನೇಕರು ಬಲಿಯಾಗಿದ್ದಾರೆ.

2009-18ರವರೆಗೆ 34 ಇಂತಹ ಪ್ರಕರಣಗಳು ಅಮೆರಿಕದಲ್ಲಿ ದಾಖಲಾಗಿದೆ. 1962-2018ರವರೆಗೆ 145 ಇಂಥದ್ದೇ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಕೇವಲ ನಾಲ್ಕು ಮಂದಿ ಮಾತ್ರ ಬದುಕುಳಿದಿದ್ದಾರೆ ಎನ್ನಲಾಗಿತ್ತು. ಇತ್ತೀಚೆಗೆ ಈ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಲೇ ಇದೆ.

Another girl died in America from brain-eating amoeba!

ನೆಗ್ಲೀರಿಯಾ ಫೌಲೆರಿ ಅಮಿಬಾ ಕುರಿತು ಮಾಹಿತಿ:

ಬೆಚ್ಚಗಿನ ಸಿಹಿನೀರಿನಲ್ಲಿ (ಉದಾಹರಣೆಗೆ, ಸರೋವರಗಳು, ನದಿಗಳು ಮತ್ತು ಬಿಸಿನೀರಿನ ಬುಗ್ಗೆಗಳು) ಮತ್ತು ಮಣ್ಣಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಅಮಿಬಾ (ಏಕಕೋಶೀಯ ಜೀವಂತ ಜೀವಿ).ಇದು ಸೋಂಕುಂಟು ಮಾಡುತ್ತದೆ. ಇದು ಶಾಖ ಪ್ರೀತಿಯ (ಥರ್ಮೋಫಿಲಿಕ್) ಜೀವಿ. ಇದು 115 ° F (46 ° C) ವರೆಗಿನ ಹೆಚ್ಚಿನ ತಾಪಮಾನದಲ್ಲಿ ಜೀವಿಸುತ್ತದೆ. ಹೆಚ್ಚಿನ ತಾಪಮಾನದಲ್ಲಿ ಅಲ್ಪಾವಧಿಗೆ ಬದುಕಬಲ್ಲದು. ತಾಪಮಾನ ಕಡಿಮೆಯಾದಂತೆ ಇದು ನೀರಿನಲ್ಲಿ ಕಂಡುಬರುವ ಸಾಧ್ಯತೆ ಕಡಿಮೆ.

ಸೋಂಕು ವಿರಳವಾಗಿದ್ದರೂ ಅವು ಮುಖ್ಯವಾಗಿ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ಬೇಸಿಗೆಯ ತಿಂಗಳುಗಳಲ್ಲಿ ಕಂಡುಬರುತ್ತವೆ. ದೀರ್ಘಕಾಲದವರೆಗೆ ಬಿಸಿಯಾಗಿರುವ ಪ್ರದೇಶದಲ್ಲಿ ಸೋಂಕುಗಳು ಸಾಮಾನ್ಯವಾಗಿ ಸಂಭವಿಸುತ್ತವೆ. ಈ ಸೋಂಕು ಒಂದು ವ್ಯಕ್ತಿಯಿಂದ ಮತ್ತೊಂದು ವ್ಯಕ್ತಿಗೆ ಹರಡುವುದಿಲ್ಲ ಎಂದು ಸಾಬೀತಾಗಿದೆ.

Another girl died in America from brain-eating amoeba!

ಡೈವಿಂಗ್ ಅಥವಾ ನೀರಿಗೆ ಹಾರಿ, ತಲೆಯನ್ನು ನೀರಿನ ಅಡಿಯಲ್ಲಿ ಮುಳುಗಿಸುವುದು ಅಥವಾ ನೀರಿನ ಸಂಬಂಧಿತ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ನೀರು ಮೂಗಿನ ಮೇಲಕ್ಕೆ ಹೋಗಲು ಕಾರಣವಾಗುತ್ತದೆ. ಇದರಿಂದ ಈ ಅಮೀಬಾ ದೇಹ ಹೊಕ್ಕುತ್ತದೆ.

English summary
A child in United States' Nebraska is suspected to have died from a rare case of brain-eating amoeba.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X