ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಅಗ್ನಿ ಆಕಸ್ಮಿಕ: ತೆಲಂಗಾಣ ಮೂಲದ ಮೂವರು ಮಕ್ಕಳು ಸಾವು

|
Google Oneindia Kannada News

ಕಾಲಿರ್ ವಿಲ್ಲೆ, ಡಿಸೆಂಬರ್ 27: ಅಮೆರಿಕದ ಕಾಲರ್ ವಿಲ್ಲೆ ಎಂಬಲ್ಲಿ ಕ್ರಿಸ್ಮಸ್ ಆಚರಣೆಯ ಸಮಯದಲ್ಲಿ ನಡೆದ ಅಗ್ನಿ ಆಕಸ್ಮಿಕದಲ್ಲಿ ತೆಲಂಗಾಣ ಮೂಲದ ಮೂವರು ಮಕ್ಕಳು ಬಲಿಯಾದ ದುರ್ಘಟನೆ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಾತ್ವಿಕ್, ಜಾಯ್ ಮತ್ತು ಸುಹಾಸ್ ಎಂಬ ಮೂವರು ಮಕ್ಕಳೂ ಅಮೆರಿಕದ ಕಾಲರ್ ವಿಲ್ಲೆಯಲ್ಲಿ ಓದುತ್ತಿದ್ದರು. ಅವರ ತಂದೆ ಶ್ರೀನಿವಾಸ್ ನಾಯಕ್ ಮತ್ತು ಸುಜಾತಾ ನಾಯಕ್, ನಲ್ಗೊಂಡ ಜಿಲ್ಲೆಯಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದರು.

ಅಮೆರಿಕದಲ್ಲಿ ವಾಸವಿದ್ದ ಇವರ ಮಕ್ಕಳು ಕ್ರಿಸ್ಮಸ್ ಆಚರಿಸುತ್ತಿದ್ದ ಸಮಯದಲ್ಲಿ ಮನೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಮೃತರಾಗಿದ್ದು, ಜೊತೆಗಿದ್ದ ಮೂವರು ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

3 children from Telangana die in America

ಅಗ್ನಿ ಆಕಸ್ಮಿಕ ಸಂಭವಿಸುವ ಕೆಲವೇ ಕ್ಷಣ ಮೊದಲು ಮಕ್ಕಳು ಮನೆಗೆ ಫೋನಾಯಿಸಿ ತಂದೆ-ತಾಯಿಗೊಂದಿಗೆ ಮಾತನಾಡಿ ಕ್ರಿಸ್ಮೆಸ್ ಶುಭಾಶಯ ಕೋರಿದ್ದರು ಎಂದು ತಂದೆ ಶ್ರೀನಿವಾಸ್ ನಾಯಕ್ ಕಣ್ಣೀರಿಟ್ತಿದ್ದಾರೆ.

English summary
3 children of a family from the Telangana's Nalgonda were died after fire broke out in their house in Collierville, United states of America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X