ಅಮೆರಿಕಾದಲ್ಲಿ ಸ್ಥಾಪನೆಯಾಯ್ತು 25 ಅಡಿ ಎತ್ತರದ ಆಂಜನೇಯ ಪ್ರತಿಮೆ
ಡೆಲಾವೆಯರ್, ಜೂನ್ 17: ಅಮೆರಿಕಾದಲ್ಲಿ ಭಗವಾನ್ ಆಂಜನೇಯ ಸ್ವಾಮಿಯ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ತೆಲಂಗಾಣದ ವಾರಂಗಲ್‌ನಲ್ಲಿ ನಿರ್ಮಿಸಲಾದ 25 ಅಡಿ ಎತ್ತರದ ಆಂಜನೇಯ ಸ್ವಾಮಿಯ ಪ್ರತಿಮೆ ಅಮೆರಿಕಾದ ಡೆಲಾವೆಯರ್ ನಲ್ಲಿ ಸ್ಥಾಪಿಸಲಾಗಿದೆ.
Recommended Video
ಆಂಜನೇಯ ಸ್ವಾಮಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಭಕ್ತರಿದ್ದಾರೆ. ಇದಕ್ಕೆ ಜೀವಂತ ಉದಾಹರಣೆ ಎಂದರೆ ಈ 25 ಅಡಿ ಎತ್ತರದ ಆಂಜನೇಯ ಸ್ವಾಮಿಯ ಪ್ರತಿಮೆ. ಇದು ಸದ್ಯ ಅಮೆರಿಕಾದಲ್ಲಿ ಸ್ಥಾಪನೆಯಾದ ಅತಿ ಎತ್ತರದ ಆಂಜನೇಯ ಪ್ರತಿಮೆ ಎಂದೇ ಖ್ಯಾತಿಯಾಗಿದ್ದು, ಸ್ಥಳೀಯ ಮಾಧ್ಯಮ ಕೂಡ ಈ ಪ್ರತಿಮೆಗೆ ವ್ಯಾಪಕ ಪ್ರಚಾರ ನೀಡಿದೆ.
ಈ ಆಂಜನೇಯ ಸ್ವಾಮಿಯ ಪ್ರತಿಮೆಯನ್ನು ಗ್ರ್ಯಾನೈಟ್ ಕಲ್ಲಿನಿಂದ ತಯಾರಿಸಲಾಗಿದೆ. ಮೂರ್ತಿಯ ಮೇಲೆ ಸುಂದರ ಕರಕುಶಲತೆಯನ್ನು ಕೆತ್ತಲಾಗಿದೆ. ಸುಮಾರು 12 ಕರಕುಶಲ ಕರ್ಮಿಗಳು ಒಂದು ವರ್ಷಗಳ ಸತತ ಪ್ರಯತ್ನದಿಂದಾಗಿ ಈ ಪ್ರತಿಮೆಯನ್ನು ರೆಡಿ ಮಾಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಹಿಂದೂ ಟೆಂಪಲ್ ಆಫ್ ಡೋಲಾವೆಯರ್ ಅಸೋಸಿಯೇಷನ್ ಅಧ್ಯಕ್ಷ ಪತಿಬಂದ್ ಶರ್ಮಾ, "ಇದರ ತೂಕ 45 ಟನ್ ಗಳಷ್ಟಾಗಿದ್ದು, ಇದನ್ನು ತೆಲಂಗಾಣ ರಾಜ್ಯದ ವಾರಂಗಲ್ ನಿಂದ ಆಮದು ಮಾಡಿಕೊಳ್ಳಲಾಗಿದೆ'' ಎಂದು ಹೇಳಿದ್ದಾರೆ.

ಇನ್ನು ಈ ಪ್ರತಿಮೆಯ ನಿರ್ಮಾಣ ಮತ್ತು ಅಮೆರಿಕಾಕ್ಕೆ ಸಾಗಾಟಣೆಗೆ ಬರೋಬ್ಬರಿ 1 ಲಕ್ಷ ಅಮೆರಿಕನ್ ಡಾಲರ್ ವೆಚ್ಚ ತಗುಲಿದೆ.












Click it and Unblock the Notifications