ಜನರ ಮೂಗಿಗೆ ತುಪ್ಪ ಸವರುತ್ತಿರುವ ಯಡಿಯೂರಪ್ಪ: ಸಿಎಂ

ವಿಜಯಪುರ, ಡಿಸೆಂಬರ್ 21: ಯಡಿಯೂರಪ್ಪ ಅವರು ಮಹದಾಯಿ ವಿವಾದ ಬಗೆಹರಿಸುತ್ತೇನೆಂದು ಬಡಾಯಿ ಕೊಚ್ಚಿಕೊಂಡು ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅವರು ಟೀಕಿಸಿದರು.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಹಾದಾಯಿ ವಿಚಾರವಾಗಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ಹಲವು ವರ್ಷಗಳಿಂದ ರೈತರು ಮಹದಾಯಿ ಕುರಿತು ಪ್ರತಿಭಟನೆ ಮಾಡುತ್ತಲೇ ಬರುತ್ತಿದ್ದಾರೆ ಆದರೆ ಬಿಜೆಪಿ ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ, ಈಗ ಚುನಾವಣೆ ಬರುತ್ತಲೆ ಮಹದಾಯಿ ನೆನಪಾಗಿದೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

Yeddyurappa is miss leading Karnataka people says CM Siddaramaiah

'ಮಹದಾಯಿ ವಿಚಾರವಾಗಿ ನಾನು ಸರ್ವಪಕ್ಷ ನಿಯೋಗ ಕರೆದುಕೊಂಡು ಹೋದರೂ ಬಿಜೆಪಿ ಅವರು ಆಗ ಬೆಂಬಲ‌ ನೀಡಲಿಲ್ಲ, ಇದೀಗ ಚುನಾವಣಾ ವಿಚಾರವಾಗಿ ಮಹದಾಯಿ ವಿಚಾರವನ್ನ ಪ್ರಸ್ತಾಪಿಸುತ್ತಿದ್ದಾರೆ ಎಂದು ಅವರು ದೂರಿದರು.

ಗೋವಾ ಮುಖ್ಯಮಂತ್ರಿ ಜೊತೆ ಯಡಿಯೂರಪ್ಪ, ಅಮಿತ್ ಶಾ ಮಾತುಕತೆ ಮಾಡಿದರೆ ವಿವಾದ ಮುಗಿದುಬಿಡುತ್ತಾ? ಗೋವಾ ಮುಖ್ಯಮಂತ್ರಿ ನನಗೆ ಪತ್ರ ಬರೆಯಬೇಕಲ್ಲವೇ? ಯಡಿಯೂರಪ್ಪ ಒಬ್ಬರೇ ಬಗೆಹರಿಸಲು ಆಗುತ್ತಾ? ಎಂದು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+