ಪರಿಷತ್ ಚುನಾವಣೆ: ಮಾಜಿ ಸಚಿವ ಎಂ.ಬಿ. ಪಾಟೀಲ್ ಗೆ ಅಗ್ನಿ ಪರೀಕ್ಷೆ

Recommended Video

      ಪರಿಷತ್ ಚುನಾವಣೆ: ವಿಜಯಪುರ -ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಗೆಲುವಿನ ನಿರೀಕ್ಷೆ | Oneindia Kannada

      ವಿಜಯಪುರ, ಸೆಪ್ಟೆಂಬರ್ 6: : ವಿಜಯಪುರ ಹಾಗೂ ಬಾಗಲಕೋಟೆಯ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಕ್ಷೇತ್ರದ ಉಪಚುನಾವಣೆ ಇಂದು (ಸೆ.6)ರಂದು ನಡೆಯಲಿದೆ.

      ಒಟ್ಟು 38 ಮತಗಟ್ಟೆಗಳನ್ನು ಸ್ಥಾಪನೆಗೊಂಡಿದ್ದು ಮತದಾನ ಆರಂಭವಾಗಿದೆ. 16 ಅತಿಸೂಕ್ಷ್ಮ, 14ಸೂಕ್ಷ್ಮ, 8 ಸಾಧಾರಣ ಮತಗಟ್ಟೆಗಳಿವೆ. ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಶಾಸಕರಾಗಿ ಆಯ್ಕೆಯಾದ ಬಳಿಕ ತೆರವಾದ ಸ್ಥಾನಕ್ಕೆ ಉಪಕದನ ನಡೆಯುತ್ತಿದ್ದು, ಕಾಂಗ್ರೆಸ್‌, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಂ.ಬಿ. ಪಾಟೀಲ್ ಸಹೋದರ ಸುನೀಲ್‌ ಗೌಡ, ಬಿಜೆಪಿಯಿಂದ ಗೂಳಪ್ಪ ಶಟಗಾರ ಸೇರಿದಂತೆ 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

      ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 4,074 ಪುರುಷ, 4,163 ಮಹಿಳಾ ಮತದಾರರು ಸೇರಿದಂತೆ ಒಟ್ಟು 8,237 ಮತದಾರರಿದ್ದಾರೆ.ಅಹಿತರ ಘಟನೆ ಜರುಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

      Vijayapura MLC poll: Acid test for former minister M.B.Patil

      ತಲಾ ಓರ್ವ ಪಿಎಸ್ ಐ, ಮೂವರು ಎಎಸ್ ಐ, 15 ಮಂದಿ ಮುಖ್ಯ ಪೊಲೀಸ್‌ ಸಿಬ್ಬಂದಿ ಹಾಗೂ ಎಲ್ಲಾ ಉಪ ವಿಭಾಗಕ್ಕೆ ಒಂದು ಡಿಆರ್ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ವಿಜಯಪುರ ಎಸ್‌ಪಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ 20, ಬಾಗಲಕೋಟೆ ಜಿಲ್ಲೆಯಲ್ಲಿ 18 ಮತಗಟ್ಟೆಗಳಿಗೆ ಸೂಕ್ತ ಬಂದೋಬಸ್ತ್ ಒದಗಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+