• search
  • Live TV
ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಶಾಸಕ ನಡಹಳ್ಳಿ ಮೇಲೆ ಎಂಬಿ ಪಾಟೀಲ್ ಬೆಂಬಲಿಗರಿಂದ ಹಲ್ಲೆ ಯತ್ನ

|

ವಿಜಯಪುರ, ಏಪ್ರಿಲ್ 13: ಸುದ್ದಿಗೋಷ್ಠಿ ನಡೆಸುತ್ತಿದ್ದ ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ಮೇಲೆ ಗೃಹ ಸಚಿವ ಎಂಬಿ ಪಾಟೀಲ ಅವರ ಬೆಂಬಲಿಗರು ಹಲ್ಲೆಗೆ ಯತ್ನಿಸಿದ ಘಟನೆ ಶನಿವಾರ ವಿಜಯಪುರದಲ್ಲಿ ನಡೆದಿದೆ.

ಶಾಸಕ ನಡಹಳ್ಳಿ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಸಭಾಂಗಣಕ್ಕೆ ನುಗ್ಗಿದ ಗುಂಪು ನಡಹಳ್ಳಿ ವಿರುದ್ಧ ಮತ್ತು ಎಂಬಿ ಪಾಟೀಲರ ಪರ ಘೋಷಣೆಗಳನ್ನು ಕೂಗಿ ಗೂಂಡಾವರ್ತನೆ ತೋರಿಸಿದರು.

ಲಿಂಗಾಯತ ಧರ್ಮ: ಡಿಕೆಶಿ ವಿರುದ್ಧ ಏಕವಚನದ ವಾಗ್ದಾಳಿ ಮಾಡಿದ MB.ಪಾಟೀಲ್

ನಡಹಳ್ಳಿ ಹುಚ್ಚ, ಜೈ ಜೈ ಬಸವೇಶ ಮುಂತಾದ ಘೋಷಣೆಗಳನ್ನು ಕೂಗಿದರು. ಇದರಲ್ಲಿ ರಾಷ್ಟ್ರೀಯ ಬಸವ ದಳಸ ಕಾರ್ಯಕರ್ತರು ಕೂಡ ಇದ್ದರು ಎನ್ನಲಾಗಿದೆ.

ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಮತ್ತು ಎಂಬಿ ಪಾಟೀಲರ ವಿರುದ್ಧ ನಡಹಳ್ಳಿ ಅವರು ಅವಹೇಳನಾಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಈ ಹಲ್ಲೆಗೆ ಮುಂದಾಗಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ವಿಜಯಪುರ ಡಿವೈಎಸ್‌ಪಿ ಡಿ. ಅಶೋಕ್ ಮತ್ತು ಸಿಬ್ಬಂದಿ ಗುಂಪನ್ನು ಹೋಟೆಲ್‌ನಿಂದ ಹೊರಹಾಕಿತು. ಬಳಿಕ ನಡಹಳ್ಳಿ ಪತ್ರಿಕಾಗೋಷ್ಠಿ ಮುಂದುವರಿಸಿದರು.

ಎಂ.ಬಿ.ಪಾಟೀಲ್ ವಾಗ್ದಾಳಿಗೆ ಡಿ.ಕೆ.ಶಿವಕುಮಾರ್ ಸಮಾಧಾನದ ಉತ್ತರ

'ಗೃಹಸಚಿವರೇ ತಮ್ಮ ಬೆಂಬಲಿಗರ ಮೂಲ ತಮ್ಮ ಮೇಲೆ ಗುಂಡಾಗಿರಿ ನಡೆಸಿದ್ದಾರೆ. ಇವರನ್ನು ಪ್ರಶ್ನೆ ಮಾಡಿದ್ದಕ್ಕೆ ಜೀವ ತೆಗೆಯುವಂತೆ ತಮ್ಮ ಬೆಂಬಲಿಗರಿಗೆ ಆದೇಶ ನೀಡಿದ್ದಾರೆಯೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವರೇನು ಪ್ರಶ್ನಾತೀತರೇ? ಎಂದು ನಡಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

English summary
Supporters of Home Minister MP Patil, tried to assault Muddebihal BJP MLA A.S. Patil Nadahalli on Saturday at Vijayapura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X