Vijayapur: ತೆಪ್ಪ ಮುಗುಚಿ ಆರು ಜನ ಜಲಸಮಾಧಿ: 3 ಶವ ಪತ್ತೆ- ಮೂವರಿಗಾಗಿ ಹುಡುಕಾಟ

ವಿಜಯಪುರ ಜುಲೈ 3: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಆರು ಜನ ಜೂಜುಕೋರರು ಜಲಸಮಾಧಿಯಾದ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ್ ತಾಲೂಕಿನಲ್ಲಿ ನಡೆದಿದೆ.

ಬಳೂತಿ ಜಾಕ್‌ವೆಲ್ ಬಳಿಯ ಕೃಷ್ಣಾನದಿಯಲ್ಲಿ ಈ ದುರಂತ ಸಂಭವಿಸಿದ್ದು ಮೂವರ ಶವ ಪತ್ತೆಯಾಗಿದೆ. ಆದರೆ ಇನ್ನೂ ಮೂವರ ಶವ ಪತ್ತೆಯಾಗಿಲ್ಲ. ಶವ ಪತ್ತೆ ಕಾರ್ಯ ಇಂದು ಮುಂದುವರೆದಿದೆ.

Six people drowned while trying to escape from the police in Vijayapur

ಮಂಗಳವಾರ (ಜುಲೈ 2) ಸಂಜೆ ನದಿ ತಟದಲ್ಲಿ ಇಸ್ಪೀಟ್ ಆಡುತ್ತಿದ್ದ ಜೂಜುಕೋರರ ಗುಂಪು ಪೊಲೀಸರು ಆಗಮಿಸುತ್ತಿದ್ದಂತೆ ಭಯದಿಂದ ಪರಾರಿಯಾಗಲು ಪ್ರಯತ್ನಿಸಿದೆ. ನದಿಯ ಬಳಿಯಲ್ಲಿದ್ದ ತೆಪ್ಪದಲ್ಲಿ ಕುಳಿತು ತರಾತುರಿಯಲ್ಲಿ ನದಿ ದಾಟಲು ಜೂಜುಕೋರರು ಮುಂದಾಗಿದ್ದಾರೆ. ಎಂಟು ಜನ ತೆಪ್ಪದಲ್ಲಿ ಕುಳಿತು ನದಿ ದಾಟಲು ಪ್ರಯತ್ನಿಸಿದ್ದಾರೆ.

ಈ ವೇಳೆ ಜೋರಾಗಿ ಗಾಳಿ ಬೀಸಿದ್ದರಿಂದ ತೆಪ್ಪ ಮುಗುಚಿ ಎಂಟು ಜನ ನದಿಗೆ ಬಿದ್ದಿದ್ದಾರೆ. ಈ ಪೈಕಿ ಮೂವರ ಶವ ಪತ್ತೆಯಾಗಿದ್ದು ಮೂವರ ಶವ ಹುಡುಕಾಟ ನಡೆಸಲಾಗಿದೆ. ಇನ್ನಿಬ್ಬರು ಈಜಿ ದಡ ಸೇರಿದ್ದಾರೆ. ಕಳೆದ ದಿನ ಇಬ್ಬರ ಶವ ಪತ್ತೆಯಾಗಿತ್ತು. ಇಂದು ಒಂದು ಶವ ಪತ್ತೆಯಾಗಿದೆ. ಇನ್ನೂ ಮೂವರ ಶವ ಪತ್ತೆ ಮಾಡಬೇಕಿದೆ.

ಪೊಲೀಸರು ಆಗಮಿಸುವ ಭಯದಿಂದ ತಪ್ಪಿಸಿಕೊಳ್ಳಲು ಎಂಟು ಜನ ಜೂಜುಕೋರರು ನದಿ ನಡುಗಡ್ಡೆಯತ್ತ ತೆಪ್ಪದಲ್ಲಿ ಹೊರಟಿದ್ದಾರೆ. ಈ ವೇಳೆ ಜೋರಾಗಿ ಗಾಳಿ ಬೀಸಿದೆ. ಇದರಿಂದ ತೆಪ್ಪ ಮುಗುಚಿ ಬಿದ್ದಿದೆ. ಈ ಪೈಕಿ ಇಬ್ಬರು ಈಜಿ ದಡ ಸೇರಿದ್ದಾರೆ. ಕಳೆದ ದಿನ ಇಬ್ಬರ ಶವ ಪತ್ತೆಯಾಗಿದ್ದು ಇಂದೂ ಕೂಡ ಶೋಧ ಕಾರ್ಯ ಮುಂದುವರೆದಿದೆ.

ಸ್ಥಳಕ್ಕೆ ಕೊಲ್ಹಾರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಮೃತದೇಹಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಇನ್ನುಳಿದ ಮೂವರ ಮೃತದೇಹಕ್ಕಾಗಿ ಹುಟುಕಾಟ ಮುಂದುವರೆದಿದೆ. ಸ್ಥಳಕ್ಕೆ ಎಸ್‌ಪಿ ಋಷಿಕೇಶ ಸೋನೆವಣೆ, ಎಎಸ್‌ಪಿ ಶಂಕರ ಮಾರಿಹಾರ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ನದಿ ದಡದಲ್ಲಿ ಜನ ಜಮಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+