ಗಂಗಾಧರ ಚಡಚಣ ಹತ್ಯೆ : ಮಹಾದೇವ ಭೈರಗೊಂಡ ಪೊಲೀಸರಿಗೆ ಶರಣು?

ವಿಜಯಪುರ, ಜುಲೈ 03 : ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಭೈರಗೊಂಡ ಪೊಲೀಸರಿಗೆ ಶರಣಾಗುವ ಸಾಧ್ಯತೆ ಇದೆ. ನಿರೀಕ್ಷಣಾ ಜಾಮೀನು ಪಡೆಯುವ ಭೈರಗೊಂಡ ಪ್ರಯತ್ನ ವಿಫಲವಾಗಿದೆ.

ವಿಜಯಪುರ ಅಪರ ಜಿಲ್ಲಾ ವಿಶೇಷ ನ್ಯಾಯಾಲಯ ಮಹಾದೇವ ಭೈರಗೊಂಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಜೂನ್ 14ರಂದು ಮಹಾದೇವ ಭೈರಗೊಂಡ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ನಿರೀಕ್ಷಣಾ ಜಾಮೀನು ಸಿಗದ ಹಿನ್ನಲೆಯಲ್ಲಿ ವಕಿಲರ ಸಲಹೆಯಂತೆ ಆತ ಶರಣಾಗುವ ಸಾಧ್ಯತೆ ಇದೆ. ಗಂಗಾಧರ ಚಡಚಣ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರು ನಡೆಸುತ್ತಿದ್ದು, ಪೊಲೀಸರ ಮುಂದೆಯೇ ಆತ ಶರಣಾಗುವ ಸಾಧ್ಯತೆ ಇದೆ.

Mahadev Bairgonda

ಗಂಗಾಧರ ಚಡಚಣ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ಮಹಾದೇವ ಭೈರಗೊಂಡ ತಲೆಮರೆಸಿಕೊಂಡಿದ್ದಾನೆ. ಮಹಾರಾಷ್ಟ್ರದಲ್ಲಿ ಆತ ಆಡಗಿರಬಹುದು ಎಂಬ ಶಂಕೆ ಹಿನ್ನಲೆಯಲ್ಲಿ ಸಿಐಡಿ ತಂಡ ಅಲ್ಲಿಯೂ ಹುಡುಕಾಟ ನಡೆಸಿ ಮರಳಿದೆ.

ಹೈಡ್ರಾಮ ನಡೆದಿತ್ತು : 2018ರ ಏಪ್ರಿಲ್‌ನಲ್ಲಿ ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಮಹಾದೇವ ಭೈರಗೊಂಡನನ್ನು ಬಂಧಿಸಲಾಗಿತ್ತು. ಇಂಡಿಯ ನ್ಯಾಯಾಲಯಕ್ಕೆ ಅವರನ್ನು ಕರೆದುಕೊಂಡು ಬರುವಾಗ ಹೈಡ್ರಾಮ ನಡೆದಿತ್ತು.

ನ್ಯಾಯಾಲಯದ ಬಳಿ ಬಂದಾಗ ಮಹಾದೇವ ಭೈರಗೊಂಡ ಜೋರಾಗಿ ಕೂಗಿ ರಾಜಕೀಯ ಉದ್ದೇಶದಿಂದ ನನ್ನನ್ನು ಬಂಧಿಸಲಾಗಿದೆ. ಐಜಿಪಿ ಅಲೋಕ್ ಕುಮಾರ್ ನನ್ನ ಬಂಧನಕ್ಕೆ ಕಾರಣ ಎಂದು ಆರೋಪಿಸಿದ್ದ.

ಮಹಾದೇವ ಭೈರಗೊಂಡ ಅವರನ್ನು ನ್ಯಾಯಾಲಯಕ್ಕೆ ಕರೆತಂದಾಗ ಅವರ ಅಭಿಮಾನಿಗಳು ನ್ಯಾಯಾಲಯದ ಗೇಟಿನ ಮುಂದೆ ಜಮಾಯಿಸಿ ಕಣ್ಣೀರು ಸುರಿಸಿದ್ದರು. ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+