ವಿಜಯಪುರಕ್ಕೆ ಸಿಹಿ ಸುದ್ದಿ: 'ಲುಲು' ಗ್ರೂಪ್‌ನಿಂದ ಭಾರೀ ಮೊತ್ತ ಹೂಡಿಕೆ: 'ಆಹಾರ ಸಂಸ್ಕರಣಾ ಘಟಕ' ಸ್ಥಾಪನೆ
ದಾವೋಸ್, ಜನವರಿ 17: ಕರ್ನಾಟಕ ರಾಜ್ಯದ ವಿಜಯಪುರದಲ್ಲಿ (Vijayapura) ಹೆಸರಾಂತ ಲುಲು ಗ್ರೂಪ್ (Lulu group) ಮತ್ತು ಬಿಎಲ್ ಆಗ್ರೋ ಕಂಪನಿಗಳು ಆಹಾರ ಸಂಸ್ಕರಣೆ ವಲಯದಲ್ಲಿ ಬೃಹತ್ ಮೊತ್ತದ ಹೂಡಿಕೆ ಮಾಡಲಿದೆ. ಈ ಸಂಬಂಧ ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಕೈಗಾರಿಕೆ ಸಚಿವರೂ ಆದ ವಿಜಯಪುರ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಅವರು ಅಧಿಕೃತವಾಗಿ ತಿಳಸಿದ್ದಾರೆ.
ಸ್ವಿಟ್ಜರ್ಲೆಂಡ್‌ನಲ್ಲಿ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮಾವೇಶದಲ್ಲಿ ಸಚಿವರು ಪಾಲ್ಗೊಂಡಿದ್ದಾರೆ. ಎಂಬಿ ಪಾಟೀಲ ಅವರ ಸಮ್ಮುಖದಲ್ಲಿ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತು ಲುಲು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಯೂಸುಫ್ ಅಲಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು.

ವಿಜಯಪುರದಲ್ಲಿ ರೂ.300 ಕೋಟಿ ಲುಲು ಹೂಡಿಕೆ
'ಕತಾರ್, ಕುವೈತ್, ಸೌದಿ ಅರೇಬಿಯಾ ಮತ್ತು ಈಜಿಪ್ಟ್ ನಲ್ಲಿ ಹೆಸರು ಮಾಡಿರುವ ಲುಲು ಗ್ರೂಪ್ 250 ಮಾಲ್ ಗಳನ್ನು ಹೊಂದಿದೆ. ಇದೀಗ ಈ ಕಂಪನಿಯು ಉತ್ತರ ಕರ್ನಾಟಕದ ವಿಜಯಪುರದಲ್ಲಿ 300 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಇಲ್ಲಿ ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲಿದೆ (Lulu Food Processing Plant-Vijayapura) ಎಂದು ಅವರು ಮಾಹಿತಿ ನೀಡಿದರು.
ಲುಲು ಗ್ರೂಪ್ ಸದ್ಯಕ್ಕೆ ಪ್ರತೀ ತಿಂಗಳು 250 ಟನ್‌ಗಳಷ್ಟು ಸೀಬೆಹಣ್ಣು, ಸಪೋಟ, ಹಸಿ ಮೆಣಸಿನಕಾಯಿ, ಬೆಂಡೇಕಾಯಿ, ಬದನೆಕಾಯಿ ಇತ್ಯಾದಿಗಳನ್ನು ಖರೀದಿಸುತ್ತಿದೆ. ವಿಜಯಪುರದಲ್ಲಿ ಜೋಳ, ದ್ರಾಕ್ಷಿ, ಹತ್ತಿ, ಕುಸುಬೆ, ಎಳ್ಳು, ಲಿಂಬೆ ಇತ್ಯಾದಿಗಳ ಕಣಜವಾಗಿದೆ. ಲುಲು ಹೂಡಿಕೆಯಿಂದ ಸ್ಥಳೀಯ ರೈತರಿಗೆ ಅನುಕೂಲ ಆಗಲಿದೆ ಎಂದು ಪಾಟೀಲ್ ವಿವರಿಸಿದ್ದಾರೆ.

ವಿಜಯಪುರದಲ್ಲಿ ಮೂಲಸೌಲಭ್ಯ ಕೊರತೆ ಇಲ್ಲ
ವಿಜಯಪುರದಲ್ಲಿ ಜಮೀನು, ನೀರು, ವಿದ್ಯುತ್ ಕೊರತೆ ಇಲ್ಲ. ಸದ್ಯದಲ್ಲೇ ವಿಮಾನ ನಿಲ್ದಾಣವೂ ಉದ್ಘಾಟನೆ ಆಗಲಿದೆ. ಇವೆಲ್ಲವನ್ನೂ ಪರಿಗಣಿಸಿ ವಿಜಯಪುರದಲ್ಲೇ ಹೂಡಿಕೆ ಮಾಡುವಂತೆ ಸಮೂಹದ ಮುಖ್ಯಸ್ಥ ಯೂಸುಫ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶ ಮೂಲದ ಬಿಎಲ್ ಗ್ರೂಪ್ ಕಂಪನಿಯು ದಕ್ಷಿಣ ಭಾರತದಲ್ಲಿ ತನ್ನ ಆಹಾರ ಸಂಸ್ಕರಣ ಘಟಕ ತೆರೆಯಲು ತೀರ್ಮಾನಿಸಿದ್ದು, ಇದಕ್ಕಾಗಿ ವಿಜಯಪುರವನ್ನು ಆಯ್ಕೆ ಮಾಡಿಕೊಂಡಿದೆ. ಈ ಸಂಬಂಧ ಕೂಡ ಒಡಂಬಡಿಕೆಗೆ ಅಂಕಿತ ಹಾಕಲಾಗಿದೆ ಎಂದು ಪಾಟೀಲ ಅವರು ವಿವರಿಸಿದ್ದಾರೆ.
ವಿವಿಧ ಕಂಪನಿಗಳ ಜತೆ ಕರ್ನಾಟಕ ಒಪ್ಪಂದ
ದಾವೋಸ್ ನಲ್ಲಿ ಹಿಟಾಚಿ ಕಂಪನಿ ಜತೆ ಕರ್ನಾಟಕ ಕೈಗಾರಿಕೆ ಅಭಿವೃದ್ಧಿ ಕುರಿತಂತೆ ಸರ್ಕಾರ ಒಪ್ಪಂದ ಮಾಡಿಕೊಂಡಿತು. ಈ ವೇಳೆ ಕೈಗಾರಿಕಾ ಸಚಿವ ಎಂಬ ಪಾಟೀಲ ಇದ್ದರು. ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ಕೆ ಅತೀಕ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಐಟಿ ಬಿಟಿ ಇಲಾಖೆ ಕಾರ್ಯದರ್ಶಿ ಏಕ್ ರೂಪ್ ಕೌರ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.












Click it and Unblock the Notifications