ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯಪುರ : ಸಿಂಧಗಿ ಬಿಜೆಪಿ ಅಭ್ಯರ್ಥಿ ಬಂಧನ, ಬಿಡುಗಡೆ

|
Google Oneindia Kannada News

ವಿಜಯಪುರ, ಮೇ 07 : ವಿಜಯಪುರ ಜಿಲ್ಲೆಯ ಸಿಂಧಗಿ ಕ್ಷೇತ್ರದ ಶಾಸಕ, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ನೀಡಿದ ದೂರಿನ ಹಿನ್ನಲೆಯಲ್ಲಿ ಬಂಧಿಸಲಾಗಿತ್ತು.

ರಮೇಶ ಭೂಸನೂರ ಅವರು ಮುದ್ರಿಸಿ ಹಂಚಿದ್ದ ಮಾದರಿ ಮತಪತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಕ್ರಮಸಂಖ್ಯೆಯನ್ನು ಅದಲು ಬದಲು ಮಾಡಲಾಗಿತ್ತು. ನಿಯಮ ಬಾಹಿರವಾಗಿ ಮತಪತ್ರ ಮುದ್ರಿಸಿ ಹಂಚಿದ ಕಾರಣಕ್ಕೆ ವಿಜಯಪುರ ನಗರ ಠಾಣೆ ಪೊಲೀಸರು ಬಂಧಿಸಿದ್ದರು.

 ಸಿಂದಗಿ ಕ್ಷೇತ್ರ: ಬಿಜೆಪಿ-ಜೆಡಿಎಸ್ ನಡುವೆ ಹಣಾಹಣಿ?! ಸಿಂದಗಿ ಕ್ಷೇತ್ರ: ಬಿಜೆಪಿ-ಜೆಡಿಎಸ್ ನಡುವೆ ಹಣಾಹಣಿ?!

ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಸಿ.ಮನಗೂಳಿ ಅವರು ಚುನಾವಣಾ ಆಯೋಗಕ್ಕೆ ಈ ಕುರಿತು ದೂರು ನೀಡಿದ್ದರು. ಚುನಾವಣಾ ಅಧಿಕಾರಿಗಳ ದೂರಿನ ಅನ್ವಯ ಸಿಂಧಗಿ ನಗರ ಠಾಣೆ ಪೊಲೀರು ರಮೇಶ ಭೂಸನೂರ ಅವರನ್ನು ಬಂಧಿಸಿ ಬಿಡುಗಡೆ ಮಾಡಿದರು.

Karnataka elections : Sindagi BJP candidate arrested and released

ಜೆಡಿಎಸ್ ಅಭ್ಯರ್ಥಿ ಎಂ.ಸಿ.ಮನಗೂಳಿ ಅವರ ಕ್ರಮಸಂಖ್ಯೆ 3ರ ಬದಲಿಗೆ 2ಎಂದು ಮಾದರಿ ಮತಪತ್ರದಲ್ಲಿ ಮುದ್ರಿಸಲಾಗಿತ್ತು ಮತ್ತು ಇದನ್ನು ಜನರಿಗೆ ಹಂಚಲಾಗಿತ್ತು. ಈ ಬಗ್ಗೆ ದೂರು ನೀಡಿದ ಹಿನ್ನಲೆಯಲ್ಲಿ ಬಂಧಿಸಿ, ನಂತರ ಬಿಡುಗಡೆ ಮಾಡಿದ್ದಾರೆ.

ವಿಜಯಪುರ: ಬ. ಬಾಗೇವಾಡಿಯಲ್ಲಿ ಕನಿಷ್ಠ, ನಾಗಠಾಣದಲ್ಲಿ ಗರಿಷ್ಠ ಮತದಾರರುವಿಜಯಪುರ: ಬ. ಬಾಗೇವಾಡಿಯಲ್ಲಿ ಕನಿಷ್ಠ, ನಾಗಠಾಣದಲ್ಲಿ ಗರಿಷ್ಠ ಮತದಾರರು

2013ರ ಚುನಾವಣೆಯಲ್ಲಿ ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ ಭೂಸನೂರ ಅವರು 37,834 ಮತಗಳನ್ನು ಪಡೆದು ಜಯಗಳಿಸಿದ್ದರು. ಜೆಡಿಎಸ್‌ನ ಎಂ.ಸಿ.ಮನಗೂಳಿ ಅವರು 37,082 ಮತಗಳನ್ನು ಪಡೆದು ಕೇವಲ 752 ಮತಗಳಿಂದ ಸೋಲು ಕಂಡಿದ್ದರು.

2018ರ ವಿಧಾನಸಭೆ ಚುನಾವಣೆಯಲ್ಲಿಯೂ ಈ ಇಬ್ಬರು ನಾಯಕರು ಮುಖಾಮುಖಿಯಾಗಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಪ್ರಬಲ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಕಾಂಗ್ರೆಸ್‌ನಿಂದ ಮಲ್ಲಣ್ಣ ನಿಂಗಪ್ಪ ಸಾಲಿ ಕಣದಲ್ಲಿದ್ದಾರೆ.

English summary
Vijayapura city police arrested Sindagi constituency MLA and Karnataka assembly elections 2018 BJP candidate Ramesh Bhusanur for changing candidates serial number in model ballet sheet. Later Police released Ramesh Bhusanu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X