ಗಂಗಾಧರ ಚಡಚಣ ಹತ್ಯೆ: ತಲೆಮರೆಸಿಕೊಂಡಿದ್ದ ಇನ್ಸ್‌ಪೆಕ್ಟರ್‌ ಬಂಧನ

ವಿಜಯಪುರ, ಅಕ್ಟೋಬರ್‌ 20: ಭೀಮಾ ತೀರದ ಗಂಗಾಧರ ಚಡಚಣ ಮತ್ತು ಧರ್ಮರಾಜ ಅವರುಗಳ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ತಲೆ ಮರೆಸಿಕೊಂಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್‌ ಅಸೋಡೆಯ ಬಂಧನವಾಗಿದೆ.

ಪ್ರಕರಣದಲ್ಲಿ 13ನೇ ಆರೋಪಿ ಆಗಿದ್ದ ಸಿಪಿಐ ಅಸೋಡೆ ತಲೆಮರೆಸಿಕೊಂಡಿದ್ದ. ಆತನಿಗೆ ಹುಡುಕಾಟ ನಡೆಸುತ್ತಿದ್ದ ಸಿಐಡಿ ತಂಡವು ಅಸೋಡೆಯನ್ನು ಕೊಲ್ಕತ್ತದಲ್ಲಿ ಇಂದು ಬಂಧಿಸಿದೆ.

ಕಳೆದ ವರ್ಷ ಅಕ್ಟೋಬರ್ 30 ರಂದು ಗಂಗಾಧರ ಚಡಚಣ ಅವರ ಎನ್‌ಕೌಂಟರ್ ಆಗಿತ್ತು. ಆದರೆ ಇದು ನಕಲಿ ಎನ್‌ಕೌಂಟರ್‌ ಎಂದು ಗಂಗಾಧರ ಚಡಚಣ ಅವರ ತಾಯಿ ಆಗಿನ ಉತ್ತರ ವಲಯದ ಡಿಜಿಪಿ ಅಲೋಕ್‌ ಕುಮಾರ್‌ ಅವರಿಗೆ ಪತ್ರ ಬರೆದಿದ್ದರು. ಅದರಂತೆ ಅವರು ಪ್ರಕರಣವನ್ನು ಸಿಐಡಿಗೆ ವಹಿಸಿದ್ದರು.

Gangadhara Chadachana murder case: CPI arrested

ಪ್ರಕರಣದ ತನಿಖೆ ನಡೆದಾಗ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಗಳು ಶಾಮೀಲಾಗಿ ಅವರೇ ನಕಲಿ ಎನ್‌ಕೌಂಟರ್‌ನಲ್ಲಿ ಗಂಗಾಧರ ಚಡಚಣ ಹಾಗೂ ಧರ್ಮರಾಜನನ್ನು ಕೊಂದಿದ್ದಾರೆ ಎಂದು ಗೊತ್ತಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಗೋಪಾಲ ಹಳ್ಳೂರ, ಪೇದೆಗಳಾದ ಸಿದ್ದಾರೂಢ ರಾಗಿ, ಚಂದ್ರಶೇಖರ ಜಾಧವ, ಗೆದ್ದಪ್ಪ ನಾಯ್ಕೋಡಿ ಅವರು ಆರೋಪಿಗಳಾಗಿದ್ದು, ಸಿಐಡಿ ಅವರನ್ನು ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 15 ಜನರನ್ನು ಈ ವರೆಗೆ ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+