ನೌಕರಿ ಕೊಡಿಸುವುದಾಗಿ ವಂಚನೆ; ಹಣ ಕೇಳಿದ್ದಕ್ಕೆ ಥಳಿಸಿದ ಆರೋಪಿ
ವಿಜಯಪುರ, ಸೆಪ್ಟೆಂಬರ್ 3: ನೌಕರಿ ಕೊಡಿಸುವುದಾಗಿ ಹೇಳಿ ಲಕ್ಷಾಂತರ ಹಣ ಪಡೆದು ವಂಚನೆ ಮಾಡಿದ್ದಲ್ಲದೇ, ಹಣ ಕೇಳಲು ಬಂದವನನ್ನೇ ಥಳಿಸಿದ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದ ಬಳಿ ನಡೆದಿದೆ.
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೆಂಭಾವಿ ಗ್ರಾಮದ ಅಶೋಕ ದೇಸಾಯಿ (32) ಅವರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆದಿದ್ದು, ಈತನ ಮೇಲೆ ಹಂದಿಗನೂರು ಗ್ರಾಮದ ಭೀಮಣ್ಣ ಮಳ್ಳಿಯ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಅಶೋಕ ಅವರಿಗೆ ಪಿಡಿಓ ನೌಕರಿ ಕೊಡಿಸುವುದಾಗಿ ಇಬ್ಬರು ಯುವಕರಿಂದ ಒಟ್ಟು 20 ಲಕ್ಷ ರೂಪಾಯಿಯನ್ನು ಭೀಮಣ್ಣ ಪಡೆದು ವಂಚಿಸಿದ್ದಾರೆ. ಅಲ್ಲದೇ, ಇನ್ನೂ ಹಲವು ಜನರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿರುವುದಾಗಿ ತಿಳಿದುಬಂದಿದೆ.

ಅಶೋಕ ಮೇಲೆ ಒಂದು ವಾರದ ಹಿಂದೆ ಹಲ್ಲೆ ನಡೆದಿದ್ದು, ತಡವಾಗಿ ಘಟನೆ ಬೆಳಕಗೆ ಬಂದಿದೆ. ಈ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.












Click it and Unblock the Notifications