ಶ್ರೀಗಳು ಕೊಟ್ಟ ಕಾರಿನಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ್ದ ನಡಹಳ್ಳಿ
ವಿಜಯಪುರ, ಜನವರಿ 22 : ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಸಿದ್ದಗಂಗಾ ಶ್ರೀಗಳ ಪರಮ ಭಕ್ತರು. ಶ್ರೀಗಳು ನೀಡಿದ ಕಾರಿನಲ್ಲಿ ತೆರಳಿ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸಿದ್ದ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಶಿವಕುಮಾರ ಶ್ರೀಗಳ ನೆನಪು ಮಾಡಿಕೊಂಡಿದ್ದಾರೆ. ಶಿವಕುಮಾರ ಶ್ರೀಗಳು ತಮ್ಮ ಪ್ರೀತಿಯ ಶಿಷ್ಯನಿಗೆ ನಾಮಪತ್ರವನ್ನು ಸಲ್ಲಿಸಲು ಕಾರನ್ನು ನೀಡಿದ್ದರು.
2008ರ ಚುನಾವಣೆಯಲ್ಲಿ ದೇವರಹಿಪ್ಪರಗಿ ಕ್ಷೇತ್ರದಿಂದ ಕಣಕ್ಕಿಳಿದಾಗ ಎ.ಎಸ್.ಪಾಟೀಲ ನಡಹಳ್ಳಿ ಅವರು ಸ್ವಾಮೀಜಿ ಉಪಯೋಗಿಸುತ್ತಿದ್ದ ಮರ್ಸಿಡೀಸ್ ಬೆಂಜ್ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಅಂದು ಸ್ವಾಮೀಜಿ ಶಿಷ್ಯನಿಗೆ ನೀಡಿದ್ದ ಕಾರು ಇಂದಿಗೂ ಬೆಂಗಳೂರಿನಲ್ಲಿರುವ ಎ.ಎಸ್.ಪಾಟೀಲ ನಡಹಳ್ಳಿ ಅವರ ನಿವಾಸದಲ್ಲಿದೆ. ಈ ಚುನಾವಣೆ ಬಳಿಕ 2013 ಮತ್ತು 2018ರ ಚುನಾವಣೆಯಲ್ಲಿ ಸತತವಾಗಿ ನಡಹಳ್ಳಿ ಅವರು ಗೆಲುವು ಸಾಧಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಎ.ಎಸ್.ಪಾಟೀಲ ನಡಹಳ್ಳಿ ಅವರು, 'ಶ್ರೀಗಳು ತಾಯಿ ಹೃದಯ ಹೊಂದಿದ್ದರು. ನಿಮಗೆ ಶ್ರೀಮಂತಿಕೆ ಬಂದರೆ ದಾಸೋಹ ಮಾಡಿ ಎಂದು ಹೇಳಿದ್ದರು' ಎಂದು ಶಿವಕುಮಾರ ಶ್ರೀಗಳನ್ನು ನೆನಪು ಮಾಡಿಕೊಂಡರು.












Click it and Unblock the Notifications