ಭಾರತದ ಅನ್ನ ತಿಂದು ಪಾಕ್ ಪರ ಮಾತನಾಡುವವರನ್ನ ಬಿಜೆಪಿ ವಿರೋಧಿಸುತ್ತದೆ : ಓವೈಸಿಗೆ ಯತ್ನಾಳ್ ತಿರುಗೇಟು
ವಿಜಯಪುರ, ಅಕ್ಟೋಬರ್ 26 : ಶಾಸಕ ಯತ್ನಾಳ್‌ಗೆ ಪಾಕಿಸ್ತಾನದ ಮೇಲೆ ಪ್ರೀತಿ ಇದೆ, ಹಾಗಾಗಿಯೇ ಪದೇ ಪದೇ ಪಾಕಿಸ್ತಾನದ ಪರ ಮಾತನಾಡುತ್ತಾರೆ ಎಂದು ಹೇಳಿಕೆ ನೀಡಿದ್ದ ಎಐಎಂಐಎಂ ಅಧ್ಯಕ್ಷ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ವಾಗ್ದಾಳಿ ನಡೆಸಿದ್ದು, ದೇಶದ ಅನ್ನ ತಿಂದು ಪಾಕಿಸ್ತಾನ ಪರ ಮಾತನಾಡುವವರನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಯತ್ನಾಳ್ ತಿಳಿಸಿದ್ದಾರೆ.
ಮಂಗಳವಾರ ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ನಾವು ನಮ್ಮ ಯಾವುದೇ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಹೆಸರನ್ನು ಬಳಸಲ್ಲ, ಆದರೆ ಯತ್ನಾಳ್ ತಮ್ಮ ಭಾಷಣಗಳಲ್ಲಿ ಪಾಕಿಸ್ತಾನದ ಬಗ್ಗೆ ಯಾವಾಗಲೂ ಪ್ರಸ್ತಾಪಿಸುತ್ತಾರೆ. ಬಹುಶಃ ಅವರಿಗೆ ಪಾಕಿಸ್ತಾನದ ಮೇಲೆ ಹೆಚ್ಚು ಪ್ರೀತಿ ಇರಬೇಕು. ಪಾಕಿಸ್ತಾನ ಹೆಸರನ್ನು ಪದೇ ಪದೇ ಹೇಳು ಎಂದು ಮೋದಿ ಹೇಳಿಕೊಟ್ಟಿರಬಹುದು ಎಂದು ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಇಲ್ಲ: ಓವೈಸಿ
ಈ ಕುರಿತು ಬುಧವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ್ " ದೇಶದ ವಿರುದ್ಧ ಮಾತನಾಡುವವರಿಗೆ ಖಂಡಿತ ತೊಂದರೆ ಇದೆ, ಭಾರತದ ಪರವಾಗಿ ಇರುವವರಿಗೆ ಗೌರವ ಇದ್ದೇ ಇರುತ್ತದೆ. ಭಾರತದ ಅನ್ನ ತಿಂದು ಪಾಕಿಸ್ತಾನ ಪರ ಮಾತನಾಡುವರಿಗೆ ಬಿಜೆಪಿ ವಿರೋಧಿಸುತ್ತದೆ ಎಂದು ತಿಳಿಸಿದರು.

ಪಾಕಿಸ್ತಾನವನ್ನು ಅಖಂಡ ಭಾರತಕ್ಕೆ ಸೇರಿಸಬೇಕು
ಹಿಜಾಬ್ ಹಾಕಿಕೊಂಡವರು ದೇಶದ ಪ್ರಧಾನಿ ಆಗಬಹುದು ಎಂದು ಓವೈಸಿ ಅಭಿಪ್ರಾಯ ನೀಡಿದ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಯತ್ನಾಳ್, ಈ ಬಗ್ಗೆ ಎಷ್ಟೋ ಮಂದಿ ದೇಶದಲ್ಲಿ ಕನಸು ಕಾಣುತ್ತಾರೆ. 2047ಕ್ಕೆ ಇಡೀ ದೇಶವನ್ನು ಇಸ್ಲಾಮಿಕ್ ಮಾಡಬೇಕು ಎಂದು ಕೆಲವರು ಹೇಳುತ್ತಿದ್ದರು. ಆದರೆ ಇದು ಯಾವ ಕಾಲಕ್ಕೂ ಸಾಧ್ಯವಾಗಲ್ಲ. ಪಾಕಿಸ್ತಾನ, ಅಫ್ಘಾನಿಸ್ತಾನ ಅಖಂಡ ಭಾರತದಲ್ಲಿ ಸೇರಬೇಕು. ಇದಕ್ಕಾಗಿ ಪಾಕಿಸ್ತಾನದ ಮೇಲೆ ನನಗೆ ಪ್ರೀತಿ ಇದೆ. ಪಾಕಿಸ್ತಾನ ಬೇಗನೆ ಅಖಂಡ ಭಾರತ ಸೇರಬೇಕಿದೆ. ಈ ದೇಶದಲ್ಲಿ ಧರ್ಮಾಂಧತೆ ನಾಶವಾಗಬೇಕು, ಪಾಕಿಸ್ತಾನ, ಅಫ್ಘಾನಿಸ್ತಾನ ಆದಷ್ಟು ಭಾರತದಲ್ಲಿ ಸೇರಬೇಕು ಎಂಬ ಕನಸು ನನಗಿದೆ ಎಂದರು.

ಇಲ್ಲಿನ ಅನ್ನ-ನೀರು ಕುಡಿದು ಪಾಕ್ ಬೆಂಬಲಿಸುವವರನ್ನ ವಿರೋಧಿಸುತ್ತೇವೆ
ಓವೈಸಿ ಸಹೋದರ ಅಕ್ಬರುದ್ದೀನ್ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಓವೈಸಿಯ ಸಹೋದರ ಪೊಲೀಸ್ ಮತ್ತು ಸೇನೆ 15 ನಿಮಿಷ ಸಮಯ ಕೊಟ್ಟರೆ ಹಿಂದೂಗಳ ಕಗ್ಗೊಲೆ ಮಾಡುತ್ತೇವೆ ಎಂದು ಹೇಳಿಕೆ ನೀಡುತ್ತಾರೆ. ಅಂತಹ ದುಷ್ಟ ವ್ಯಕ್ತಿಯನ್ನು ನಾವು ವಿರೋಧಿಸುತ್ತಿದ್ದೇವೆ. ಓವೈಸಿ ನಮ್ಮ ದೇಶದ ಅನ್ನ, ನೀರು ಕುಡಿದು ಎಲ್ಲಾ ಸೌಲಭ್ಯಗಳನ್ನು ಅನುಭವಿಸುತ್ತಾರೆ. ಆದರೆ ಪಾಕಿಸ್ತಾನಕ್ಕೆ ಬೆಂಬಲವನ್ನು ಸೂಚಿಸುತ್ತಾರೆ. ಜೊತೆಗೆ ರಾಮ ಮಂದಿರ ನಾಶ ಮಾಡುತ್ತೇನೆ ಎಂದು ಹೇಳಿಕೆ ನೀಡುತ್ತಾರೆ. ಭವಿಷ್ಯದಲ್ಲಿ ಹಿಂದುತ್ವವೇ ಇಡೀ ಜಗತ್ತನ್ನು ಆಳುತ್ತದೆ ಎಂದು ಟಾಂಗ್ ನೀಡಿದರು.

ಸಂಪುಟಕ್ಕೆ ನನ್ನನ್ನು ಸೇರಿಸಲ್ಲ, ಒಳ್ಳೆ ಸರಕಾರ ಕೊಟ್ಟರೆ ಸಾಕು
ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂಬ ವಿಚಾರವಾಗಿ ಮಾತನಾಡಿದ ಯತ್ನಾಳ್, ಸಚಿವ ಸಂಪುಟ ವಿಸ್ತರಣೆ ಆಗಲಿ ಬಿಡಲಿ, ನಾವಂತೂ ಇದರಲ್ಲಿ ಇರಲ್ಲ. ಸಿಎಂ ಬೊಮ್ಮಾಯಿಯವರು ಸಚಿವ ಸಂಪುಟ ವಿಸ್ತರಣೆ ಮಾಡುವುದಿದ್ದರೆ ಮಾಡಲಿ, ಒಳ್ಳೆಯ ಸರಕಾರ ಕೊಡಲಿ ಸಾಕು. ಜಿಲ್ಲೆಯಲ್ಲಿ ಡಿಸೆಂಬರ್ನಲ್ಲಿ ಟೆಕ್ಸ್ಟೈಲ್ ಪಾರ್ಕ್ ಉದ್ಘಾಟನೆ ಮಾಡಲು ಸಿಎಂ ಬರುತ್ತಿದ್ದಾರೆ. ಈ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಲಾಗುತ್ತದೆ. ವಿಜಯಪುರ ಮಹಾನಗರ ಪಾಲಿಕೆಗೆ ಹೆಚ್ಚುವರಿ 100 ಕೋಟಿ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಬ್ರಿಟನ್ ನೂತನ ಪ್ರಧಾನಿಗೆ ಶುಭಾಶಯ
ಬ್ರಿಟರ್ ಪ್ರಧಾನ ಮಂತ್ರಿಯಾಗಿ ನೇಮಕಗೊಂಡಿರುವ ಭಾರತೀಯ ಮೂಲದ ರಿಷಿ ಸುನಕ್ಗೆ ಯತ್ನಾಳ್ ಅಭಿನಂದನೆ ಸಲ್ಲಿಸಿದರು. ರಿಷಿಯವರು ಬ್ರಿಟನ್ ಪ್ರಧಾನಿಯಾಗಿರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ. ಇದು ಭಾರತ ವಿಶ್ವಗುರು ಆಗುತ್ತಿರುವುದರ ಸಂಕೇತ ಎಂದು ಅಭಿಪ್ರಾಯಪಟ್ಟರು.