Get Updates
Get notified of breaking news, exclusive insights, and must-see stories!

Vijay Nagar Elections : ವಿಜಯನಗರದ ಸಾಮ್ರಾಜ್ಯ ಉಳಿಸಿಕೊಳ್ಳುವರೇ ಕೃಷ್ಣಪ್ಪ?

ಮುಂಬರುವ ವಿಧಾನಸಭಾ ಚುನಾವಣಾ ಸಮರಕ್ಕೆ ಸಜ್ಜಾಗಿರುವ ವಿಜಯನಗರ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ ಕೃಷ್ಣಪ್ಪ ಜಯ ಗಳಿಸಿದ್ದರು.ವಿಜಯನಗರ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೆಸರಲ್ಲೇ 'ವಿಜಯ' ತುಂಬಿಕೊಂಡಿರುವ ಈ ಕ್ಷೇತ್ರದಲ್ಲಿ 'ವಿಜಯ' ಅಷ್ಟು ಸುಲಭವಲ್ಲ ಎನ್ನುವುದು ರಾಜಕೀಯ ಪಂಡಿತರ ಮಾತು. 2008ರಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿರುವ ವಿಜಯನಗರ ವಿಧಾನಸಭಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆಯುವ ಪ್ರಯತ್ನದಲ್ಲಿ ಬಿಜೆಪಿಯಿದೆ. ಸತತ ಮೂರು ಬಾರಿ ಹ್ಯಾಟ್ರಿಕ್ ಬಾರಿಸಿದ ಕೃಷ್ಣಪ್ಪ ಅವರು ಚುನಾವಣಾ ಅಖಾಡಕ್ಕಿಳಿಯಲು ಸಿದ್ಧರಾಗಿದ್ಧಾರೆ.

vijayanagar map

2018ರಲ್ಲಿ ತೀವ್ರ ಪೈಪೋಟಿ ಎದುರಿಸಿದ್ದ ಕೃಷ್ಣಪ್ಪ, ಈ ಬಾರಿ ಹಲವು ತಿಂಗಳ ಹಿಂದೆಯೇ ಮತದಾರರ ಸಂಪರ್ಕ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಆಗಾಗ ಕ್ಷೇತ್ರಕ್ಕೆ ಕರೆತಂದು ಚುನಾವಣಾ ಕಾವು ಏರಿಸುತ್ತಿದ್ದಾರೆ.

ಈ ಬಾರಿ ಟಿಕೆಟ್ ಯಾರಿಗೆ?

ಈಗಾಗಲೇ ಕಾಂಗ್ರೆಸ್ ವಿಜಯನಗರ ಕ್ಷೇತ್ರದ ಅಭ್ಯರ್ಥಿ ಕೃಷ್ಣಪ್ಪ ಎಂದು ಘೋಷಣೆ ಮಾಡಿದ್ದು, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳನ್ನು ಇನ್ನೂ ಘೋಷಣೆ ಮಾಡಿಲ್ಲ. ಆದರೆ ಆಮ್ ಆದ್ಮಿ ಪಕ್ಷ ಡಾ ರಮೇಶ್‌ ಬೆಲ್ಲಂಕೊಂಡ ಅವರಿಗೆ ಈ ಬಾರಿ ಟಿಕೆಟ್ ನೀಡಿದೆ. ಆದರೆ ಬಿಜೆಪಿಯಲ್ಲಿ 2018ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಎಚ್. ರವೀಂದ್ರ ಮತ್ತೆ ಸ್ಪರ್ಧೆಗೆ ಆಕಾಂಕ್ಷಿ. ಎರಡು ಬಾರಿ ಬಿಬಿಎಂಪಿ ಸದಸ್ಯರಾಗಿದ್ದ ಉಮೇಶ್ ಶೆಟ್ಟಿ, ವಿಧಾನ ಪರಿಷತ್‌ನ ಮಾಜಿ ಸದ್ಸಯ ಅಶ್ವತ್ಥ ನಾರಾಯಣ ಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ ಈ ಬಾರಿ ಟಿಕೆಟ್‌ಗಾಗಿ ಹಿಂದೆಂದಿಗಿಂತ ಹೆಚ್ಚು ಪೈಪೋಟಿ ಇದೆ.

congress bjp jds

ಎಲ್ಲರೂ ಆಪ್ತರ ಮೂಲಕ ಬಿಜೆಪಿ ವರಿಷ್ಠರ ಮನವೊಲಿಕೆಯಲ್ಲಿ ನಿರತರಾಗಿದ್ದಾರೆ. ನೆರೆಯ ಗೋವಿಂದರಾಜನಗರ ಕ್ಷೇತ್ರದ ಶಾಸಕರೂ ಆಗಿರುವ ವಸತಿ ಸಚಿವ ವಿ. ಸೋಮಣ್ಣ ಬೆಂಬಲವೂ ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಆದರೆ ಪ್ರತೀ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಕಣಕ್ಕೆ ಇಳಿಯುವ ಬಿಜೆಪಿ ಅಭ್ಯರ್ಥಿಗಳು ಬದಲಾಗುವುದರಿಂದ ಕ್ಷೇತ್ರದ ಮತದಾರರಿಗೂ ಇದು ಇಷ್ಟವಾಗುತ್ತಿಲ್ಲ ಎನ್ನುವುದು ಸ್ಥಳೀಯರ ಮಾತು.

ಸದ್ಯ ಜೆಡಿಎಸ್ ವಿಜಯನಗರದಲ್ಲಿ ನೆಲೆ ಕಳೆದುಕೊಂಡ ಸ್ಥಿತಿಯಲ್ಲಿದೆ. ಹೀಗಾಗಿ ಅಲ್ಲಿ ನಾವೇ ಅಭ್ಯರ್ಥಿಗಳು ಅಂತ ಹೇಳಿಕೊಳ್ಳುವಂತಾ ಪರಿಸ್ಥಿತಿಯಲ್ಲಿ ಆಕ್ಷಾಂಕ್ಷಿಗಳು ಇದ್ದಂತೆ ಕಾಣಿಸುತ್ತಿಲ್ಲ. ಹೀಗಾಗಿ ವಿಜಯನಗರ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು ಯಾರು ಅಂತ ಹೇಳುವುದು ಕಷ್ಟ ಸಾಧ್ಯ.

ಮತದಾರರ ಸಂಖ್ಯೆ:

ಮೂಲಸೌಕರ್ಯ ಅಭಿವೃದ್ಧಿ, ಜಾತಿ ಮತ್ತು ಕೋವಿಡ್ ಸಂಕಷ್ಟದ ಅವಧಿಯಲ್ಲಿ ಜನರ ನೆರವಿಗೆ ನಿಂತ ವಿಚಾರಗಳು ಈ ಕ್ಷೇತ್ರದಲ್ಲೂ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಫಲ ಪಡೆಯಲು ಶಾಸಕ ಕೃಷ್ಣಪ್ಪ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿಯೂ ಆರಂಭವಾಗಿದೆ.

ಬೆಂಗಳೂರು ದಕ್ಷಿಣದಲ್ಲಿರುವ ವಿಜಯ ನಗರ ವಿಧಾನಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿದೆ. ಅಲ್ಲಿ ಒಟ್ಟು ಮತದಾರರ ಸಂಖ್ಯೆ 2,10,400 ರಷ್ಟಿದೆ.ಅದರಲ್ಲಿ ಒಕ್ಕಲಿಗರದ್ದೇ ಪಾರುಪತ್ಯವಿದ್ದು, 51,000ರಷ್ಟು ಒಕ್ಕಲಿಗ ಮತದಾರರಿದ್ದಾರೆ. ಇವರೊಂದಿಗೆ ಎಸ್ಸಿ,ಎಸ್ಟಿ ಮತದಾರರ ಸಂಖ್ಯೆ 42,500, ಮುಸ್ಲಿಂ ಮತದಾರರು 37,000 ಹಾಗೂ 38,500ರಷ್ಟು ಒಬಿಸಿ ಮತದಾರರಿದ್ದಾರೆ.ಇನ್ನು ರಾಜ್ಯದ ಮತ್ತೊಂದು ಪ್ರಬಲ ಸಮುದಾಯವಾದ ಲಿಂಗಾಯತ ಮತದಾರರ ಸಂಖ್ಯೆ 17,500ರಷ್ಟಿದೆ. ಜೊತೆಗೆ 9 ಸಾವಿರದಷ್ಟು ಬ್ರಾಹ್ಮಣ ಮತದಾರರರಿದ್ದರೆ ಇತರೇ ಮತದಾರರ ಸಂಖ್ಯೆ 14,900ರಷ್ಟಿದೆ.

ಕೃಷ್ಣಪ್ಪ ಮತಭೇಟೆ

ಕ್ಷೇತ್ರದಲ್ಲಿ ನಡೆಯುವ ಕೆಲಸಗಳ ಮಟ್ಟಿಗೆ ಕೃಷ್ಣಪ್ಪ ಅವರು ಹೆಸರು ಕೆಡಿಸಿಕೊಂಡಿಲ್ಲ. ಕಳೆದ ಐದು ವರ್ಷಗಳಲ್ಲಿ ಸ್ಥಳೀಯ ಬಿಜೆಪಿ ಆಗಲೀ, ಜೆಡಿಎಸ್‌ ಆಗಲೀ ಕೃಷ್ಣಪ್ಪರ ವಿರುದ್ಧ ಹೇಳಿಕೊಳ್ಳುವಂತಹ ಪ್ರತಿಭಟನೆ ನಡೆಸಿರುವ ಉದಾಹರಣೆಯೂ ಇಲ್ಲ. ಕೃಷ್ಣಪ್ಪರ ವಿರುದ್ಧ ಪ್ರಚಾರ ಮಾಡಲು ಸ್ಥಳೀಯವಾಗಿ ಬಿಜೆಪಿಗೆ ದೊಡ್ಡ ಕಾರಣಗಳಿಲ್ಲ. ಈ ಕಾರಣಕ್ಕೇ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಟೀಕಿಸುವುದು ಮತ್ತು ಪ್ರಧಾನಿ ಮೋದಿ ಅವರನ್ನು ಹೊಗಳುವ ತಂತ್ರವನ್ನು ಮಾತ್ರ ಚುನಾವಣೆ ಅಸ್ತ್ರವಾಗಿಸಿಕೊಂಡಿದೆ. ಇಲ್ಲಿ ನೇರ ಹಣಾಹಣಿ ಇರುವುದು ಕೃಷ್ಣಪ್ಪ ಹಾಗೂ ಬಿಜೆಪಿಯ ರವೀಂದ್ರ ನಡುವೆ. ಈ ಹೋರಾಟದಲ್ಲಿ 'ವಿಜಯನಗರದ ವೀರಪುತ್ರ ' ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ.

ಮೂಲಸೌಕರ್ಯ ಅಭಿವೃದ್ಧಿ, ಜಾತಿ ಮತ್ತು ಕೋವಿಡ್ ಸಂಕಷ್ಟದ ಅವಧಿಯಲ್ಲಿ ಜನರ ನೆರವಿಗೆ ನಿಂತ ವಿಚಾರಗಳು ಈ ಕ್ಷೇತ್ರದಲ್ಲೂ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಫಲ ಪಡೆಯಲು ಶಾಸಕ ಕೃಷ್ಣಪ್ಪ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿಯೂ ಆರಂಭವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+