ಫಾಲ್ಸ್ ನಲ್ಲಿ ಸೆಲ್ಫೀ ತೆಗೆಯಲು ಹೋಗಿ ಯುವಕ ನೀರು ಪಾಲು

ಉಡುಪಿ, ಆಗಸ್ಟ್ 16: ಸೆಲ್ಫೀ ಹುಚ್ಚು ಯುವಕನೊಬ್ಬನನ್ನು ಬಲಿ ಪಡೆದಿದೆ. ಸ್ನೇಹಿತರಿಬ್ಬರು ಫಾಲ್ಸ್ ತುದಿಯಲ್ಲಿ ಸೆಲ್ಫೀ ಕ್ಲಿಕ್ಕಿಸುತ್ತಿದ್ದ ಸಂದರ್ಭ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿ ಹೋದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಅರ್ಬಿ ಫಾಲ್ಸ್ ನಲ್ಲಿ ಗುರುವಾರ ಸಂಜೆ ನಡೆದಿದೆ.

ಸುದೇಶ್ ಮತ್ತು ಭರತ್ ಎಂಬ ಇಬ್ಬರು ಸ್ನೇಹಿತರು ನೀರಿನಲ್ಲಿ ಆಟವಾಡುತ್ತ ಸೆಲ್ಫೀ ತೆಗೆಯುತ್ತಿದ್ದರು. ಸೆಲ್ಫೀ ಕ್ಲಿಕ್ಕಿಸುವ ಭರದಲ್ಲಿ ನೀರಿಗೆ ಜಾರಿ ಬಿದ್ದಿದ್ದಾರೆ. ಈ ಸಮಯ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಭರತ್ ಅಪಾಯದಿಂದ ಪಾರಾಗಿದ್ದಾರೆ.

 Youth Died While Taking Selfie In Karkala

ನಂದಳಿಕೆ ಕುಂಟಲಗುಂಡಿ ನಿವಾಸಿ ಸುದೇಶ್ (18 ) ನೀರು ಪಾಲಾದ ಯುವಕ. ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್, ಅಗ್ನಿಶಾಮಕ ದಳ ಭೇಟಿ ನೀಡಿ ಹುಡುಕಾಟ ನಡೆಸುತ್ತಿದ್ದಾರೆ.

ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+