ಉಡುಪಿಯಲ್ಲಿ ಟೆಂಪೋ ಪಲ್ಟಿ: ಹುಲಿವೇಷಧಾರಿ ಸಾವು
ಉಡುಪಿ, ಸೆಪ್ಟೆಂಬರ್ 4: ಗಣೇಶ ವಿಸರ್ಜನಾ ಮೆರವಣಿಗೆಯ ಹುಲಿ ವೇಷಧಾರಿಗಳ ತಂಡದ ವಾಹನ ಪಲ್ಟಿಯಾಗಿ ಓರ್ವ ಹುಲಿವೇಷಧಾರಿ ಮೃತಪಟ್ಟ ಘಟನೆ ಉಡುಪಿಯ ನೇಜಾರಿನಲ್ಲಿ ನಡೆದಿದೆ.
ಟೆಂಪೊವೊಂದರಲ್ಲಿ 15ಕ್ಕೂ ಅಧಿಕ ಹುಲಿ ವೇಷಧಾರಿಗಳು ನೇಜಾರಿಯಿಂದ ಸಂತೆ ಕಟ್ಟೆಗೆ ಬರುವ ಸಂದರ್ಭ ನೇಜಾರಿನ ಆಟದ ಮೈದಾನದ ಬಳಿ ಟೆಂಪೊ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಪಡುಬಿದ್ರೆ ಹುಲಿ ವೇಷ ತಂಡದ ಯುವಕ ಸುಮಂತ (22) ಮೃತಪಟ್ಟಿದ್ದಾರೆ.

5 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈರ್ವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳಿಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.












Click it and Unblock the Notifications