ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ಹಾವು ಕಡಿತ, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಮಹಿಳೆ ಸಾವು

|
Google Oneindia Kannada News

ಉಡುಪಿ, ಜೂನ್ 20 : ಹಾವು ಕಡಿದ ಮಹಿಳೆಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರುನಲ್ಲಿ ನಡೆದಿದೆ.

ಬೈಂದೂರು ಯೋಜನಾ ನಗರದ ನಿವಾಸಿ ವಿಶಾಲಾಕ್ಷಿ ಪೂಜಾರಿ (37) ಎಂಬುವರಿಗೆ ಸೋಮವಾರ ಮನೆಯ ಅಡುಗೆ ಕೊಣೆಯಲ್ಲಿ ಹಾವು ಕಚ್ಚಿದೆ. ಕೂಡಲೇ ಮಹಿಳೆಯನ್ನು ಚಿಕಿತ್ಸೆ ಗಾಗಿ ಬೈಂದೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಕುಂದಾಪುರ ಸರಕಾರಿ ಆಸ್ಪತ್ರಗೆ ಹೋಗುಂತೆ ಅಲ್ಲಿನ ವೈದ್ಯರು ಹೇಳಿದ್ದಾರೆ. ಅದರ ಬದಲು ಕುಟುಂಬಸ್ಥರು ಜಡ್ಕಲ್ ನಲ್ಲಿ ನಟಿ ವೈದ್ಯರಲ್ಲಿಗೆ ಹೋಗಿದ್ದು, ಅಲ್ಲಿ ವೈದ್ಯರಿಲ್ಲದ ಕರಣ ಮರಳಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೋಗುವಷ್ಟರಲ್ಲಿಯೇ ಮಹಿಳೆಯ ಜೀವ ಹೋಗಿದೆ.

Woman dies of snake bite in Byndoor Udupi district

ವೈದ್ಯರ ನಿರ್ಲಕ್ಷ್ಯತನವೇ ಸಾವಿಗೆ ಕಾರಣವಾಗಿದ್ದು, ಕೂಡಲೇ ವೈದ್ಯರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮೃತ ಮಹಿಳೆಯ ಸಂಬಂಧಿಕರು ಆಗ್ರಹಿಸಿದು. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗುವಿಗೂ ಹಾವು ಕಡಿತ: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಪುಟ್ಟ ಬಾಲಕನೋರ್ವನಿಗೆ ಹಾವು ಕಡಿದಿದ್ದು, ಆತನ ಪೋಷಕರು ಹಾವಿನೊಂದಿಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಆಗಮಿಸಿದ ಘಟನೆ ನಡೆದಿದೆ.

ಶಿರೂರು ನಿವಾಸಿ ಉಮೇಶ್ ಮತ್ತು ದೀಪ ದಂಪತಿಯ 3ರ ಹರೆಯದ ಮಗು ಧನುಷ್ ಮನೆಯಂಗಳದಲ್ಲಿ ಆಟ ಆಡುತ್ತಿರುವ ವೇಳೆ ಹಾವು ಕಚ್ಚಿದೆ.

ತಕ್ಷಣ ಎಚ್ಚೆತ್ತ ಪೋಷಕರು ಹಾವನ್ನು ಹಿಡಿದು ಮಗುವಿನೊಂದಿಗೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಧನುಷ್ ಚೇತರಿಸಿಕೊಳ್ಳುತ್ತಿದ್ದಾನೆ.

English summary
Woman was recently bitten by a venomous snake at Byndoor, Udupi and was dead due to doctors negligence. The deceased has been identidied as vishalakshmi (37).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X