ಶಬರಿಮಲೆ ಭಕ್ತರ ಮೇಲೆ ಲಾಠಿ ಏಟು; ವೀಡಿಯೋ ವೈರಲ್
ಉಡುಪಿ, ಜನವರಿ 04: ಶಬರಿಮಲೆಯ ಅಯ್ಯಪ್ಪ ಭಕ್ತರ ಮೇಲೆ ಪೊಲೀಸರು ಲಾಠಿ ಬೀಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರ್ಷಕ್ಕೆ ಐದು ಕೋಟಿ ಜನ ಭೇಟಿ ನೀಡುವ ಶಬರಿಮಲೆ ಕ್ಷೇತ್ರದಲ್ಲಿ ಕೇರಳ ಸರಕಾರ ಭಕ್ತರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಬದಲಾಗಿ ಸರತಿಯಲ್ಲಿ ನಿಂತ ಭಕ್ತರನ್ನು ನಿಯಂತ್ರಿಸುವ ಸಲುವಾಗಿ ಲಾಠಿ ಬೀಸಿದ ದೃಶ್ಯಗಳು ವೈರಲ್ ಆಗಿವೆ.

ಸರತಿಯಲ್ಲಿ ನಿಂತ ಭಕ್ತರ ಮೇಲೆ ಲಾಠಿ ಬೀಸುವ ಸಂದರ್ಭದಲ್ಲಿ ಪುಟ್ಟ ಮಕ್ಕಳನ್ನು ಕರೆದೊಯ್ದ ಭಕ್ತರು ಅಳುತ್ತಾ ಮುಂದೆ ಸಾಗುವ ದೃಶ್ಯಗಳು ಅಯ್ಯಪ್ಪ ಭಕ್ತರಲ್ಲಿ ಆಕ್ರೋಶ ಮೂಡಿಸಿದೆ. ವರ್ಷದಲ್ಲಿ ಕೋಟ್ಯಂತರ ಹಣ ಸಂಗ್ರಹಿಸುವ ಸರಕಾರ ಅಲ್ಲಿ ಸರಿಯಾದ ಮೂಲ ಸೌಲಭ್ಯ ಒದಗಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಶಬರಿಮಲೆಯ ಭದ್ರತಾ ವ್ಯವಸ್ಥೆ ಸರಿ ಇಲ್ಲದ ಕಾರಣ ರಾಷ್ಟ್ರಪತಿ ಶಬರಿಮಲೆ ಭೇಟಿ ರದ್ದಾಗುವ ಸಾಧ್ಯತೆ ಇದೆ. ಈ ಬೆಳವಣಿಗೆ ಬಗ್ಗೆ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications