ಉಡುಪಿ: ಅಂಬೇಡ್ಕರ್ ಗೆ ಅವಮಾನ, ಆರೋಪಿಗಾಗಿ ಶೋಧ

By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಏಪ್ರಿಲ್ 18 : ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಬರೆದಿರುವ ಯುವಕನ ವಿರುದ್ಧ ಉಡುಪಿಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏಪ್ರಿಲ್ 14 ರಂದು ಅಕ್ಷಯ್ ಶೆಟ್ಟಿ ಎಂಬುವರು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಅಂಬೇಡ್ಕರ್ ಅವರ 126 ನೇ ಜಯಂತಿ ಶುಭಾಶಯ ಕೋರಿದ್ದರು. ಇದಕ್ಕೆ ಪ್ರತಿಯಾಗಿ ಕಾರ್ಕಳದ ಬೈಲೂರು ನಿವಾಸಿ ಶ್ರೀಕಾಂತ್ ''ಇಂಗ್ಲೆಡ್ ನಿಂದ ಕಾಪಿ ಮಾಡಿ ಹಿಂದೂಗಳ ಎದೆಗೆ ತುಳಿದ ಸಂವಿಧಾನ ನಮಗೆ ಬೇಡ ಅವನ ಸಂವಿಧಾನ ಜೈಶ್ರೀರಾಮ್'' ಎಂಬ ಕಾಮೆಂಟ್ ಮಾಡಿದ್ದ.

Udupi: Youth booked for offensive comments on Dr Ambedkar in social media

ಶ್ರೀಕಾಂತ್ ಮಾಡಿದ್ದ ಕಾಮೆಂಟ್ ಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಂವಿಧಾನಕ್ಕೂ ಹಾಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೂ ಅವಮಾನ ಮಾಡಿದ್ದಾನೆ ಎಂದು ಶ್ರೀಕಾಂತ್ ವಿರುದ್ಧ ಬ್ರಹ್ಮಾವರ ಎಡ್ತಾಡಿ ಗ್ರಾಮದ ಅಲ್ತಾರು ನಿವಾಸಿ ಚಂದ್ರ ಆಲ್ತಾರ್ ಎನ್ನುವರು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A case stands pending registered at Brahmavar police station for posting an offensive statement against Dr B R Ambedkar. Srikanth Nayak from Bailoor is the accused. The comments were written on April 14, the birth anniversary of Dr Ambedkar.
Please Wait while comments are loading...