• search
  • Live TV
ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉಡುಪಿಯ ಸೈಂಟ್ ಮೇರಿಸ್ ಐಲ್ಯಾಂಡ್ ಈಗ ಬಲು ದುಬಾರಿ!

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಅಕ್ಟೋಬರ್ 28; ಕೋವಿಡ್ ಭೀತಿ ದೂರವಾಯಿತು, ಮಳೆಗಾಲವೂ ಮುಗಿಯುತ್ತಾ ಬಂತು, ಕಡಲ ತೀರಕ್ಕೆ ಹೋಗಿ ಒಂದೆರೆಡು ದಿನ ಎಂಜಾಯ್ ಮಾಡಿ ಬರಬೇಕು ಎನ್ನುವವರಿಗೆ ಇದು ಶಾಕಿಂಗ್ ನ್ಯೂಸ್.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಪ್ರವಾಸಕ್ಕೆ ಬರಬೇಕು ಅಂದುಕೊಂಡವರು ಸಾಮಾನ್ಯವಾಗಿ ಹೋಗಲೇಬೇಕು ಅಂತಾ ಎಂದು ಅಂದುಕೊಳ್ಳುವ ಜಾಗ ಉಡುಪಿಯ ಐಸ್ ಲ್ಯಾಂಡ್ ಅರ್ಥಾತ್ ಸೈಂಟ್ ಮೇರಿಸ್ ದ್ವೀಪ.

ಉಡುಪಿ; ಸುಂದರವಾಯಿತು ತ್ಯಾಜ್ಯ ಎಸೆಯುವ ಜಾಗ! ಉಡುಪಿ; ಸುಂದರವಾಯಿತು ತ್ಯಾಜ್ಯ ಎಸೆಯುವ ಜಾಗ!

ಆದರೆ ಈ ದ್ವೀಪಕ್ಕೆ ನೀವು ಈಗ ಬರಬೇಕು ಎಂದರೆ ಸ್ವಲ್ಪ ಜೇಬು ಗಟ್ಟಿ ಮಾಡಿಯೇ ಬರಬೇಕು. ಯಾಕೆಂದರೆ ಸೈಂಟ್ ಮೇರಿಸ್ ಈ ಹಿಂದಿನಂತಿಲ್ಲ. ಸೈಂಟ್ ಮೇರಿಸ್ ದುಬಾರಿಯಾಗಿದೆ. ಅದರಲ್ಲೂ ಬಡವರಿಗೆ ಈ ಬೆಲೆ ಏರಿಕೆ ಕಾಲದಲ್ಲಿ ದ್ವೀಪ ಭಾರೀ ದುಬಾರಿಯಾಗಿದೆ.

ನವೆಂಬರ್‌ನಿಂದ ಕರಾವಳಿಯಲ್ಲಿ ಕಂಬಳ ಕಲರವ ನವೆಂಬರ್‌ನಿಂದ ಕರಾವಳಿಯಲ್ಲಿ ಕಂಬಳ ಕಲರವ

ಉಡುಪಿ ಜಿಲ್ಲೆಯ ಸೈಂಟ್ ಮೇರಿಸ್ ದ್ವೀಪ. ಕರಾವಳಿ ಪ್ರವಾಸೋದ್ಯಮದ ಹೆಮ್ಮೆಯ ಗರಿಮೆ. ದೇಶದಲ್ಲೇ ಪ್ರಸಿದ್ಧಿ ಪಡೆದ ಪ್ರವಾಸಿಗರ ಮೆಚ್ಚಿನ ತಾಣ. ಇಂತಹ ಸೈಂಟ್ ಮೇರಿಸ್ ದ್ವೀಪ ಈಗ ಬಲು ದುಬಾರಿ ಆಗಿದೆ. ದರ ಹೆಚ್ಚಳದಿಂದ ಬಡವರು, ದಡದಿಂದಲೇ ಐಲ್ಯಾಂಡ್ ನೋಡಿ ವಾವ್ ಎನ್ನುತ್ತಿದ್ದರೆ ಹಣ ಇದ್ದವರು ಮಾತ್ರ ಐಸ್ ಲ್ಯಾಂಡ್‌ಗೆ ಹೋಗಿ ಎಂಜಾಯ್ ಮಾಡುತ್ತಿದ್ದಾರೆ.

ವಿಶ್ವ ಪ್ರವಾಸೋದ್ಯಮ ದಿನ 2021: ಹಿನ್ನೆಲೆ, ಮಹತ್ವದ ಬಗ್ಗೆ ಮಾಹಿತಿವಿಶ್ವ ಪ್ರವಾಸೋದ್ಯಮ ದಿನ 2021: ಹಿನ್ನೆಲೆ, ಮಹತ್ವದ ಬಗ್ಗೆ ಮಾಹಿತಿ

ಕಣ್ಣು ಹಾಯಿಸಿದಷ್ಟು ದೂರ ನೀಲಿ ಜಲಸಾಗರ. ಬಿಳಿ ಹಾಲ್ನೋರೆಯ ಮಧ್ಯೆ ತೇಲುತ್ತಾ ಸಾಗುವ ಹಡಗು, ಹಡಗಿನಲ್ಲಿ ಎಂಜಾಯ್ ಮಾಡುವ ಪ್ರವಾಸಿಗರು. ಈ ದೃಶ್ಯ ಕಂಡುಬರುವುದು ಉಡುಪಿಯ ಪ್ರಸಿದ್ಧ ಸೈಂಟ್ ಮೇರಿಸ್ ದ್ವೀಪದ ಪ್ರಯಾಣದಲ್ಲಿ ಮಾತ್ರ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹಲವಾರು ಬೀಚ್ ಇದ್ದರೂ ಪ್ರವಾಸಿಗರಿಗೆ ಮುಕ್ತವಾಗಿರುವ ಐಲ್ಯಾಂಡ್ ಎಂದು ಇರುವುದು ಉಡುಪಿಯ ಮಲ್ಪೆಯಿಂದ 6 ಕಿಲೋಮೀಟರ್ ದೂರದಲ್ಲಿ ಇರುವ ಸೈಂಟ್ ಮೇರಿಸ್ ದ್ವೀಪ ಮಾತ್ರ.

ಹೀಗಾಗಿ ಪ್ರವಾಸಿಗರಿಗೆ ಐಲ್ಯಾಂಡ್‌‌ಗೆ ಹೋಗಬೇಕು ಅಂತ ಆಸೆ ಸಹಜ. ಆದರೀಗ ದ್ವೀಪಕ್ಕೆ ಹೋಗುವ ಹಡಗುಗಳ ದರ ಮಾತ್ರ ಬಲು ದುಬಾರಿ ಆಗಿ, ಪ್ರವಾಸಿಗರಿಗೆ ಬಿಸಿ ತುಪ್ಪವಾಗಿವಾಗಿದೆ. ಕಳೆದ ವರ್ಷ ಮಲ್ಪೆಯ ಸೀವಾಕ್ ಸೀವಾಕ್‌ನಿಂದ ದ್ವೀಪಕ್ಕೆ ಬೋಟ್ ದರ ಪ್ರತಿ ಒಬ್ಬರಿಗೆ 250 ರೂಪಾಯಿ ಇತ್ತು.

ಆದರೆ ಈ ಬಾರಿ ಆ ದರ 300 ರಷ್ಟು ಏರಿದೆ. ಇನ್ನೂ ಮಲ್ಪೆ ಬೀಚ್‌ನಿಂದ 400 ರೂ. ಚಾರ್ಜ್ ಮಾಡುತ್ತಿದ್ದಾರೆ. ಇದರ ಜೊತೆಗೆ ಪಾರ್ಕಿಂಗ್ ಮಾಡುವುದಕ್ಕೆ ಸಹ ಹಣ ನೀಡುವ ಅನಿವಾರ್ಯತೆ ಪ್ರವಾಸಿಗನದ್ದು. 3 ವರ್ಷದಿಂದ 10 ವರ್ಷದ ಮಕ್ಕಳಿಗೆ ಸ್ಪಲ್ಪ ರಿಯಾಯಿತಿ ಹೊರತು ಪಡಿಸಿದರೆ ಎಲ್ಲರಿಗೂ ಒಂದೇ ದರ ನಿಗದಿಯಾಗಿದೆ. ದುಪ್ಪಟ್ಟು ಹಣ ಕೊಟ್ಟು ಐಲ್ಯಾಂಡ್ ಬಂದರೂ ಕೇವಲ 1 ಗಂಟೆ ಮಾತ್ರ ನಿಲ್ಲುವುದಕ್ಕೆ ಅವಕಾಶ ನೀಡಲಾಗುತ್ತಿದೆ.

ಹಿಂದೆಲ್ಲಾ ಸರ್ಕಾರಿ ಶಾಲಾ ಮಕ್ಕಳು ಬಂದು ಐಲ್ಯಾಂಡ್ ಸೌಂದರ್ಯ ಸವಿಯುತ್ತಿದ್ದರು. ಆದರೀಗ ದುಬಾರಿ ದರದಿಂದ ಐಲ್ಯಾಂಡ್ ಹೋಗುವವರಲ್ಲಿ ಕೇವಲ ಉತ್ತರ ಭಾರತದ ಶ್ರೀಮಂತರು ಮತ್ತು ಕೇರಳಿಗರು ಮಾತ್ರ ಕಂಡು ಬರುತ್ತಿದ್ದಾರೆ. ನಮ್ಮ ನಾಡಿನವರು ದುಬಾರಿ ಐಲ್ಯಾಂಡ್ ಹೋಗಲಾಗದೇ ದೂರವೇ ಉಳಿಯುವಂತಾಗಿದೆ. ದ್ವೀಪದಲ್ಲಿ ಪ್ಲಾಸ್ಟಿಕ್‌ನಲ್ಲಿ ತಿಂಡಿ ತೆಗೆದುಕೊಂಡು ಹೋಗುವಂತಿಲ್ಲ ಹೀಗಾಗಿ ಅಲ್ಲೇ ಸಿಗುವ ದುಬಾರಿ ತಿಂಡಿಗಳನ್ನು ಖರೀದಿ ಮಾಡುವ ಅನಿವಾರ್ಯತೆ ಕೂಡ ಪ್ರವಾಸಿಗರದ್ದಾಗಿದೆ.

ಒಟ್ಟಿನಲ್ಲಿ ಕೊರೊನಾ ಕಾರಣದಿಂದ ಆರ್ಥಿಕವಾಗಿ ಕುಗ್ಗಿರುವ ಜನ ಐಲ್ಯಾಂಡ್ ಹೋಗಿ ಒಂದಷ್ಟು ಹೊತ್ತು, ನೆಮ್ಮದಿ ಇದ್ದು ಬರರೋಣ ಅಂದರೆ ದುಬಾರಿ ದರದಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರವಾಸೋದ್ಯಮ ಇಲಾಖೆ ದರ ಏರಿಕೆ ಮಾಡಿ ಬರೆ ಎಳೆಯುವ ಮುನ್ನ ಈ ಬಗ್ಗೆ ಮತ್ತೊಮ್ಮೆ ಗಮನ ಹರಿಸಬೇಕಾದ ಅಗತ್ಯತೆ ಇದೆ. ಇಲ್ಲವಾದರೆ ದರ ಹೀಗೆ ವರ್ಷ ವರ್ಷ ಏರುತ್ತಲೇ ಹೋಗಿ ಸೈಂಟ್ ಮೇರಿಸ್‌ಗೆ ಶ್ರೀಮಂತ ಐಲ್ಯಾಂಡ್ ಎನ್ನುವ ಹೆಸರು ಬಂದರೂ ಬರಬಹುದು.

English summary
Karnataka tourism department hiked entry fee at the Udupi St Mary's island. People to may money for vehicle parking alsl.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion