ಮುದರಂಗಡಿಯ ಶಿಕ್ಷಕಿ ಸುನಿತಾ ಡಿಸೋಜಾ ಪಾಠಕ್ಕೂ ಸೈ, ಆಟಕ್ಕೂ ಸೈ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಉಡುಪಿ, ಡಿಸೆಂಬರ್. 15 : ಇವರೊಬ್ಬರು ಶಾಲಾ ಶಿಕ್ಷಕಿ. ಪಾಠ ಮಾಡುವುದರಲ್ಲಿ ಹೇಗೆ ಸೈ ಅನ್ನಿಸಿಕೊಂಡಿದ್ದಾರೋ. ಅದೇ ರೀತಿ ಮೈದಾನಕ್ಕೆ ಇಳಿದರಂತೂ ಇವರೇ ವಿನ್ನರ್. ಗೆಲ್ಲದೇ ವಾಪಸ್ ಬರಲ್ಲ.

ಅರೇರೆ...ಅವರು ಯಾರು ಅಂತೀರಾ ? ಅವರೇ ಪಡುಬಿದ್ರೆ, ಮುದರಂಗಡಿಯ ಸೇಂಟ್ ಫ್ರಾನ್ಸಿಸ್ ಶಾಲೆಯ ಶಿಕ್ಷಕಿ ಸುನಿತಾ ಡಿಸೋಜಾ.

ಇದೇ ಡಿಸೆಂಬರ್ 11 ಮತ್ತು 12ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಅಥ್ಲೆಟಿಕ್ ಚಾಂಪಿಯನ್ ಶಿಪ್ ನ 200 ಮೀಟರ್ ಓಟದ ಸ್ಫರ್ಧೆಯಲ್ಲಿ ಬೆಳ್ಳಿ ಹಾಗೂ ಲಾಂಗ್ ಜಂಪ್ ನಲ್ಲಿ ಚಿನ್ನದ ಪದಕ ಗೆದ್ದು ಅತ್ತ ಪಾಠಕ್ಕೂ ಸೈ ಇತ್ತ ಆಟಕ್ಕೂ ಎತ್ತಿದ ಕೈ ಎಂದು ಸಾಬೀತು ಪಡಿಸಿದ್ದಾರೆ.

udupi St Francis School teacher Sunita D’Souza wins 2 medals in state Athletics

35 ವರ್ಷದ ಗುಂಪಿನ ವರ್ಗದಲ್ಲಿ ಆಯ್ಕೆಯಾದ ಸುನಿತಾರವರು ಕೇವಲ 33.05 ಸೆಕೆಂಡುಗಳಲ್ಲಿ 200 ಮೀಟರ್ ಕ್ರಮಿಸುವ ಮೂಲಕ ಬೆಳ್ಳಿ ಪದಕ ಹಾಗೂ ಲಾಂಗ್ ಜಂಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಸ್ಪರ್ಧಿಸಿ 100 ಮೀಟರ್ ಓಟದಲ್ಲಿ 4 ನೇ ಸ್ಥಾನ ಗಳಿಸಿರುವ ಸುನಿತಾ ಅವರು ಈಗ ರಾಷ್ಟ್ರ ಮಟ್ಟದ ರಿಲೇ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಲ್ಲರ ಗಮನ ಸೆಳೆದಿದ್ದಾರೆ.

udupi St Francis School teacher Sunita D’Souza wins 2 medals in state Athletics

ಇನ್ನು ಮುಂಬರು ಫೆಬ್ರವರಿ 21 ಹಾಗೂ 25ರಂದು ಹೈದರಾಬಾದ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಧನೆಗೆ ಪ್ರಶಂಸೆ : ಶಾಲಾ ಆಡಳಿತ ಮಂಡಳಿಯವರು ಸಹ ಇವರ ಕ್ರೀಡಾ ಸಾಧನೆಯನ್ನು ಪ್ರೋತ್ಸಾಹಿಸಿದ್ದಾರೆ. ಶಾಲೆಯ ಬಿಗಿಯಾದ ವೇಳಾಪಟ್ಟಿ ನಡುವೆಯೂ ಇಂತ ಒಂದು ಸಾಧನೆಗೆ ಸುನಿತಾರವರು ಪಾತ್ರರಾಗಿರುವುದ್ದು ನಿಜಕ್ಕೂ ಸಂತೋಷ ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sunita D’Souza, teacher of St Francis School, Padubidri Mudarangady, near here bagged silver in 200 meter race and bronze in long jump in 35-years-plus category during 37th state level Masters Athletics Championship held at Bengaluru, from Saturday, December 10 to Sunday, December 11.
Please Wait while comments are loading...