Get Updates
Get notified of breaking news, exclusive insights, and must-see stories!

7 ವರ್ಷದಿಂದ ಬೆಳಕನ್ನೇ ನೋಡದ ಮೂವರನ್ನು ರಕ್ಷಿಸಿದ ಉಡುಪಿಯ ಸಮಾಜ ಸೇವಕ

ಉಡುಪಿ, ಆಗಸ್ಟ್ 28: ಆ ಮನೆಯ ಮೂರು ಮಂದಿ ಸೂರ್ಯನ ಬೆಳಕು ನೋಡದೆ ಬರೋಬ್ಬರಿ ಏಳು ವರ್ಷವಾಗಿತ್ತು. ಮನೆಗೆ ವಿದ್ಯುತ್ ಇಲ್ಲದೇ, ಹೊರ ಜಗತ್ತಿನ ಸಂಪರ್ಕವಿಲ್ಲದೇ, ಕಗ್ಗತ್ತಿನಲ್ಲೇ ಆ ಮೂವರು ಗೃಹ ಬಂಧನದಲ್ಲಿದ್ದರು.

ಮನೆಯ ಮಗ ಮಾನಸಿಕ ಅಸ್ವಸ್ಥನಾಗಿದ್ದು, ದಿನದ ಕೆಲ ಹೊತ್ತು ಅಕ್ಷರಶಃ ವ್ಯಾಘ್ರನಾಗಿಬಿಡುತ್ತಿದ್ದ. ಹೀಗಾಗಿ ಮಗನ ಜೊತೆಗೇನೇ ತಾಯಿ ಮತ್ತು ತಂಗಿ ಅಂಧ ಪ್ರಪಂಚದಲ್ಲೇ ಬದುಕುತ್ತಿದ್ದರು. ಮಗನ ಉಗ್ರ ವರ್ತನೆಯಿಂದ ಊರಿನವರೂ ಅಂಜಿ ಆ ಮನೆಯ ಕಡೆ ಮುಖ ಹಾಕಿಯೂ ಮಲಗುತ್ತಿರಲಿಲ್ಲ. ಆದರೆ ಈಗ ಏಳು ವರ್ಷದ ಬಳಿಕ ಆ ಮನೆಯವರು ಸೂರ್ಯನ ಬೆಳಕು ಕಂಡಿದ್ದಾರೆ. ಸಮಾಜ ಸೇವಕರೊಬ್ಬರ ಮುಂದಾಳತ್ವದಲ್ಲಿ ಗೃಹ ಬಂಧನದಲ್ಲಿದ್ದ ಮನೆಯವರನ್ನು ರಕ್ಷಣೆ ಮಾಡಲಾಗಿದೆ.

ಈ ಘಟನೆ ನಡೆದಿರುವುದು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತೂರು ಎಂಬ ಗ್ರಾಮದಲ್ಲಿ. ಸತತ ಏಳು ವರ್ಷಗಳ ಕಾಲ ಕತ್ತಲ ಮನೆಯಲ್ಲಿ, ಮನುಷ್ಯ ಸಮಾಜದಿಂದ ದೂರವಿದ್ದ ಮೂವರನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ನೇತೃತ್ವದಲ್ಲಿ ರಕ್ಷಣೆ ಮಾಡಲಾಗಿದೆ.

 ಗುಲಾಬಿ ಶೆಟ್ಟಿಯವರ ಪುತ್ರ ಮಾನಸಿಕ ಅಸ್ವಸ್ಥ

ಗುಲಾಬಿ ಶೆಟ್ಟಿಯವರ ಪುತ್ರ ಮಾನಸಿಕ ಅಸ್ವಸ್ಥ

ಚಾಂತಾರು ಗ್ರಾಮದ 80ರ ಹರೆಯದ ಗುಲಾಬಿ ಶೆಟ್ಟಿಯವರ ಪುತ್ರ ಮಾನಸಿಕ ಅಸ್ವಸ್ಥನಾಗಿದ್ದು, ಮನೆಯೊಳಗೆ ಕೂಡಿ ಹಾಕಲಾಗಿತ್ತು. ಮಗನ ಉಪಟಳ, ಉಗ್ರ ವರ್ತನೆಯ ಭೀತಿಯಿಂದ ಮಗನ ಜೊತೆ ಇಳಿ ವಯಸ್ಸಿನ ತಾಯಿಯೂ ಗೃಹ ಬಂಧನಕ್ಕೊಳಗಾಗಿದ್ದರು. ತಾಯಿಯ ಜೊತೆಗೆ ಮಗಳು 50ರ ಹರೆಯದ ವಾರಿಜ ಶೆಟ್ಟಿಯೂ ಗೃಹ ಬಂಧನಕ್ಕೊಳಗಾಗಿದ್ದರು.
ಮನೆಯ ಬಾಗಿಲು ತೆರೆದರೆ ಮಗನ ಉಪಟಳ ಜಾಸ್ತಿಯಾಗುತ್ತಿದ್ದರಿಂದ ಮಗನ ಜೊತೆಗೆ ತಾಯಿ- ತಂಗಿಯೂ ಮನೆಯೊಳಗೇ ಬಂಧಿಯಾಗಿದ್ದಾರೆ. ಹೀಗೆ ಬಂಧಿಯಾಗಿ ವರುಷ ವರುಷಗಳೇ ಉರುಳುತ್ತಾ ಏಳು ವರ್ಷಗಳು ಕಳೆದಿವೆ.

 ಕತ್ತಲಿನಲ್ಲೇ ಮಲಗಿ ದಿನ ಕಳೆಯುತ್ತಿದ್ದರು

ಕತ್ತಲಿನಲ್ಲೇ ಮಲಗಿ ದಿನ ಕಳೆಯುತ್ತಿದ್ದರು

ಮೂವರು ವಾಸವಿದ್ದ ಮನೆಗೆ ಏಳು ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲ. ಇವರಿಗೆ ಹೊರ ಜಗತ್ತು ಹೇಗಿದೆ ಅಂತಾನೇ ಗೊತ್ತಿಲ್ಲ. ಬೇರೆ ಊರಿನಲ್ಲಿರುವ ಸಂಬಂಧಿಯೋರ್ವರು ದಿನಸಿ ಸಾಮಾಗ್ರಿ, ಅಕ್ಕಿಯನ್ನು ತಂದು ಕೊಡುತ್ತಿದ್ದರು. ಆದರೆ ಆ ಸಾಮಾಗ್ರಿ ಸರಿಯಾಗಿ ಬಳಕೆಯಾಗುತ್ತಿರಲಿಲ್ಲ. ಮೂರು ತಿಂಗಳ ಹಿಂದೆ ಕೊಟ್ಟಿದ್ದ 25 ಕೆ.ಜಿ ಅಕ್ಕಿಯಲ್ಲಿ ಬಳಕೆಯಾಗಿದ್ದು, ಕೇವಲ 5 ಕೆ.ಜಿ ಮಾತ್ರ. ಸರಿಯಾಗಿ ಆಹಾರ ಇಲ್ಲದೇ, ಮಾತಿಲ್ಲದೇ, ಕತ್ತಲಿನಲ್ಲೇ ಮಲಗಿ ದಿನ ಕಳೆಯುತ್ತಿದ್ದರು. ಆಹಾರ ತಯಾರು ಮಾಡುವುದಕ್ಕೂ ಮಾನಸಿಕ ಅಸ್ವಸ್ಥ ಬಿಡುತ್ತಿರಲಿಲ್ಲ. ಆಹಾರವನ್ನು ಅವನೇ ತಯಾರಿಸುತ್ತಿದ್ದ.

 ಉಡುಪಿಯ ಅಂಬಲಪಾಡಿ ನಿವಾಸಿ ವಿಶು ಶೆಟ್ಟಿ

ಉಡುಪಿಯ ಅಂಬಲಪಾಡಿ ನಿವಾಸಿ ವಿಶು ಶೆಟ್ಟಿ

ಈ ಮನೆಯವರ ಪರಿಸ್ಥಿತಿ ಈ ರೀತಿಯಿದ್ದರೂ ಪಕ್ಕದ ಮನೆಯವರು ಮಾತ್ರ ಆ ಮನೆಯ ಗೋಜಿಗೆ ಹೋಗಿರಲಿಲ್ಲ. ಇದಕ್ಕೊಂದು ಕಾರಣವೂ ಇತ್ತು. ಮಾನಸಿಕ ಅಸ್ವಸ್ಥನ ಉಗ್ರ ವರ್ತನೆಯಿಂದ ಪರಿಸರದಲ್ಲಿ ಭಯದ ವಾತಾವರಣವೂ ಸೃಷ್ಟಿಯಾಗಿತ್ತು. ತಡರಾತ್ರಿಯ ಹೊತ್ತು ಜೋರಾಗಿ, ವಿಕಾರವಾಗಿ ಬೊಬ್ಬೆಯಿಡೋದು, ಮಂತ್ರ ಪಠಿಸೋದು ಇಂತಹ ವಿಚಿತ್ರ ವರ್ತನೆಗಳನ್ನು ಮಾಡುತ್ತಿದ್ದ. ವ್ಯಗ್ರನಾಗಿದ್ದ ಮಾನಸಿಕ ಅಸ್ವಸ್ಥನ ವಿಚಿತ್ರ ವರ್ತನೆಯಿಂದ ಯಾರೂ ಆ ಮನೆಯತ್ರನೂ ಹೋಗುತ್ತಿರಲಿಲ್ಲ. ಏಳು ವರ್ಷದಿಂದ ಈ ರೀತಿಯಾಗಿ ಪರಿಸ್ಥಿತಿ ಇದ್ದರೂ ಯಾರೂ ಸಹಾಯಕ್ಕೆ ಹೋಗಿರಲಿಲ್ಲ. ಈ ವಿಷಯ ತಿಳಿದ ಉಡುಪಿಯ ಅಂಬಲಪಾಡಿ ನಿವಾಸಿ ವಿಶು ಶೆಟ್ಟಿ ಆ ಮನೆಯವರನ್ನು ರಕ್ಷಣೆ ಮಾಡಿದ್ದಾರೆ.

Recommended Video

    ಭಾರತಕ್ಕೆ ನಮ್ಮಿಂದ ಸಂಕಷ್ಟ ಬರೋದಿಲ್ಲ! ತಾಲಿಬಾನ್ | Oneindia Kannada
     ಮೂವರಿಗೆ ಕೊನೆಗೂ ಮುಕ್ತಿ

    ಮೂವರಿಗೆ ಕೊನೆಗೂ ಮುಕ್ತಿ

    ಮಾನಸಿಕ ಅಸ್ವಸ್ಥನನ್ನು ದೊಡ್ಡಣ್ಣಗುಡ್ಡೆ ಡಾ.ಎ.ವಿ. ಬಾಳಿಗ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ- ಮಗಳನ್ನು ಉಡುಪಿಯ ನಿಟ್ಟೂರಿನ ಸಖಿ ಒನ್ ಸ್ವಾಪ್ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
    ಒಟ್ಟಿನಲ್ಲಿ ಏಳು ವರ್ಷಗಳಿಂದ‌ ಅಸಹಜವಾಗಿ ಬದುಕುತ್ತಿದ್ದ ಮೂವರಿಗೆ ಕೊನೆಗೂ ಮುಕ್ತಿ ನೀಡಲಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಹಳ್ಳಿಗಳಲ್ಲಿ ಇನ್ನೂ ಜನ ಗೃಹ ಬಂಧನ ಸ್ಥಿತಿಯಲ್ಲಿರುವುದು ಮಾತ್ರ ದುರಂತವಾಗಿದೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+