ಕನಕರ ಭಕ್ತಿಗೆ ಒಲಿದು ಕೃಷ್ಣ ಪಶ್ಚಿಮಕ್ಕೆ ತಿರುಗಿದ್ದು ಸತ್ಯ: ಪೇಜಾವರ ಶ್ರೀ
ಉಡುಪಿ, ನವೆಂಬರ್ 6: ಕನಕದಾಸರ ಭಕ್ತಿಗೆ ಕರಗಿ ಕೃಷ್ಣ ಪಶ್ಚಿಮಕ್ಕೆ ತಿರುಗಿದ್ದು ಹೌದು. ಈ ಬಗ್ಗೆ ಹಲವರಿಗೆ ಜಿಜ್ಞಾಸೆಯಿದೆ. ಕೆಲವು ಬುದ್ಧಿಜೀವಿಗಳು ಟೀಕಿಸುತ್ತಾರೆ. ಕೆಲ ಸನಾತನಿಗಳೂ ಈ ಪವಾಡವನ್ನು ಒಪ್ಪುವುದಿಲ್ಲ. ಕೃಷ್ಣ ಕನಕದಾಸರಿಗೆ ಒಲಿದು ದಿಕ್ಕು ಬದಲಿಸಿದ್ದಲ್ಲ ಎಂದು ವಾದಿಸುತ್ತಾರೆ ಎಂದು ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು ಸೋಮವಾರ ಹೇಳಿದ್ದಾರೆ.
ಕನಕ ದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಚೀನವಾದದ್ದನ್ನೆಲ್ಲ ಬುದ್ಧಿಜೀವಿಗಳು ಅಲ್ಲಗಳೆಯುತ್ತಿದ್ದಾರೆ. ಸನಾತನಿಗಳು ಪುರಂದರದಾಸರು, ಮಧ್ವಾಚಾರ್ಯರದ್ದು ಪವಾಡ ಒಪ್ಪುತ್ತಾರೆ. ಆದರೆ ಕನಕದಾಸರ ಪವಾಡ ಯಾಕೆ ನೀವು ಒಪ್ಪುವುದಿಲ್ಲ ಎಂದು ಅವರು ಪ್ರಶ್ನೆ ಮಾಡಿದರು.

ವಾದಿರಾಜ ಸ್ವಾಮಿಗಳು ರಚಿಸಿದ ಹಾಡು ಲಭ್ಯವಾಗಿದೆ. ತಮ್ಮ ಹಾಡಿನಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ವಾದಿರಾಜರು ನಾನೂರು ವರ್ಷಗಳ ಹಿಂದಿದ್ದ ಅಷ್ಟ ಮಠಗಳ ಪ್ರಮುಖ ಯತಿಗಳು. ಇನ್ನಾದರೂ ಚರ್ಚೆಗೆ ತೆರೆ ಎಳೆಯಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಕನಕ ದಾಸರ ಭಕ್ತಿಗೆ ಒಲಿದು, ಉಡುಪಿಯಲ್ಲಿ ಶ್ರೀ ಕೃಷ್ಣ ಪಶ್ಚಿಮಕ್ಕೆ ತಿರುಗಿದ ಎಂಬ ವಿಚಾರವಾಗಿ ನಾನಾ ಬಗೆಯ ಅಭಿಪ್ರಾಯಗಳಿವೆ.












Click it and Unblock the Notifications