ಕಾರ್ಮಿಕರ ಪರವಾಗಿ ನಿಂತ ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಏಪ್ರಿಲ್ 08: ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರ ಜವಾಬ್ದಾರಿ ಸಂಬಂಧಪಟ್ಟ ಮಾಲೀಕರು ಮತ್ತು ಕಾಂಟ್ರಾಕ್ಟರ್ ಗಳದ್ದು,
ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಹೊರ ಹಾಕುವಂತಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ಎಚ್ಚರಿಕೆ ನೀಡಿದ್ದಾರೆ.
ಕೂಲಿ ಕಾರ್ಮಿಕರಿಗೆ ಆಶ್ರಯ ನೀಡಬೇಕು, ಒಂದು ವೇಳೆ ಕಾರ್ಮಿಕರನ್ನು ಹೊರ ಹಾಕಿದರೆ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೊರೊನಾ ವೈರಸ್ ಹಾಗೂ ಲಾಕ್ ಡೌನ್ ಇರುವ ಈ ಸಂದರ್ಭದಲ್ಲಿ ಯಾರೂ ಮನೆ ಬಾಡಿಗೆಗೆ ಒತ್ತಾಯಿಬಾರದು, ಈ ಕುರಿತು ಸರಕಾರದ ಸ್ಪಷ್ಟ ಆದೇಶ ಇದೆ ಎಂದರು.
ಆದೇಶ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮೀನುಗಾರರು ಮತ್ತು ಕಟ್ಟಡ ಕಾರ್ಮಿಕರ ಪರವಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ನಿಂತಿದ್ದಾರೆ.












Click it and Unblock the Notifications