ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯ ಅಮಾಸೆಬೈಲು ದೇಶದ ಮೊದಲ ಸೋಲಾರ್ ಗ್ರಾಮ

ಉಡುಪಿಯ ಅಮಾಸೆಬೈಲ್ ಗ್ರಾಮದಲ್ಲಿ ಎಲ್ಲಾ 1497 ಮನೆಗಳಿಗೆ ಸೋಲಾರ್ ಅಳವಡಿಸುವ ಮೂಲಕ ದೇಶದಲ್ಲೇ ಮೊದಲ ಸೋಲಾರ್ ಗ್ರಾಮ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 29: ಎಲ್ಲಾ ಸಮಸ್ಯೆಗಳಿಗೂ ಸಶಸ್ತ್ರ ಹೋರಾಟವೇ ಪರಿಹಾರ ಎಂದು ನಕ್ಸಲರು ಆ ಗ್ರಾಮದಲ್ಲಿ ಚಟುವಟಿಕೆ ಆರಂಭಿಸಿದ ದಿನಗಳಿದ್ದವು. ಆದರೆ ಸ್ವಾವಲಂಬನೆಯೇ ಪರಿಹಾರ ಎಂದು ಅಲ್ಲಿನ ಗ್ರಾಮಸ್ಥರೀಗ ತೋರಿಸಿಕೊಟ್ಟಿದ್ದಾರೆ. ಹೌದು ಇದು ಉಡುಪಿ ಜಿಲ್ಲೆಯ ಅಮಾಸೆಬೈಲು ಎಂಬ ನಕ್ಸಲ್ ಪೀಡಿತ ಗ್ರಾಮ ವಿದ್ಯುತ್ ಸ್ವಾವಲಂಬಿಯಾಗಿ ರೂಪುಗೊಂಡ ಕಥೆ.

ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಈ ಕನಸನ್ನು ನನಸು ಮಾಡಿದೆ. ಅಮಾಸೆಬೈಲ್ ಗ್ರಾಮದ 1497 ಮನೆಗಳಿಗೆ ಸೋಲಾರ್ ಅಳವಡಿಸುವ ಮೂಲಕ ದೇಶದಲ್ಲೇ ಮೊದಲ ಸೋಲಾರ್ ಗ್ರಾಮ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.[ಉಡುಪಿಗೂ ಬಂತು ಅಲ್ ಟೆರೇನ್ ಬೈಕ್, ಕಾಯಕ್ ಬೋಟ್]

ಹಳ್ಳಿಗಳು ಮನಸ್ಸು ಮಾಡಿದರೆ ನಾಡಿಗೆ ಮಾದರಿಯಾಗ ಬಲ್ಲವು ಅನ್ನೋದಕ್ಕೆ ಈ ಗ್ರಾಮವೇ ಸಾಕ್ಷಿ. ಪ್ರಕೃತಿಯನ್ನು ಅವಲಂಬಿಸಿ ಅಭಿವೃದ್ಧಿಯ ಕನಸು ಕಂಡ ಈ ಹಳ್ಳಿ ಈಗ ಸಂಪೂರ್ಣ ಸೋಲಾರ್ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕನಸು ನನಸು ಮಾಡಿದ್ದು ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್.[ಉಡುಪಿಗೆ ಬರಲಿದೆ 2.5 ಲಕ್ಷ ಲೀಟರ್ ಸಾಮರ್ಥ್ಯದ ಹಾಲಿನ ಡೇರಿ]

ಬದಲಾವಣೆಯ ಹರಿಕಾರ ಎಜಿ ಕೊಡ್ಗಿ

ಬದಲಾವಣೆಯ ಹರಿಕಾರ ಎಜಿ ಕೊಡ್ಗಿ

ರಾಜಕೀಯದಲ್ಲಿ ವಿವಿಧ ಹುದ್ದೆ ಅನುಭವಿಸಿ, ಸದ್ಯ ರಾಜಕಾರಣದಿಂದ ನಿವೃತ್ತರಾಗಿರುವ ಹಿರಿಯ ನಾಯಕ ಎ. ಜಿ. ಕೊಡ್ಗಿ ಈ ಟ್ರಸ್ಟ್‌ನ ಮುಖ್ಯಸ್ಥರು. ಕಾಡುಗುಡ್ಡ ಪರಿಸರದ ಮಡಿಲಲ್ಲಿರುವ ಈ ಗ್ರಾಮದ ಎಲ್ಲಾ ಮನೆಗಳು ಈಗ ಸೋಲಾರ್ ಅಳವಡಿಸಿಕೊಂಡಿವೆ. ಗ್ರಾಮೀಣ ಕರ್ನಾಟಕದಲ್ಲಿ ವಿದ್ಯುತ್‌ನದ್ದೇ ಸಮಸ್ಯೆ, ಈ ಕಣ್ಣಾ ಮುಚ್ಚಾಲೆಯಿಂದ ಎಲ್ಲಾ ಗ್ರಾಮಸ್ಥರು ರೋಸಿ ಹೋಗಿದ್ದಾರೆ. ಆದರೆ ಇಲ್ಲಿ ಮಾತ್ರ ಆ ಸಮಸ್ಯೆಯೇ ಇಲ್ಲ.

ಟ್ರಸ್ಟ್ ದೇಶಕ್ಕೇ ಮಾದರಿ

ಟ್ರಸ್ಟ್ ದೇಶಕ್ಕೇ ಮಾದರಿ

ಈ ಕುರಿತು ಮಾತನಾಡಿದ ಮೀನುಗಾರಿಕಾ ಹಾಗೂ ಯುವಜನ ಸೇವೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌, ಸೌರಶಕ್ತಿಯ ಮೂಲಕ ಗ್ರಾಮವನ್ನು ಬೆಳಗಿಸಿದ ಅಮಾಸೆಬೈಲು ಚಾರಿಟೇಬಲ್‌ ಟ್ರಸ್ಟ್‌ ದೇಶಕ್ಕೆ ಮಾದರಿಯಾಗಿದೆ . ಸೌರ ವಿದ್ಯುತ್‌ ಉತ್ಪಾದನೆ, ಗೃಹ ಸೌರಶಕ್ತಿ ಸದ್ಬಳಕೆ ಮೂಲಕ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವತ್ತ ರಾಜ್ಯ ದಾಪುಗಾಲಿಡುತ್ತಿದೆ. ರಾಜ್ಯವು ಸುಮಾರು 750 ಮೆಗಾವ್ಯಾಟ್‌ ಸೌರವಿದ್ಯುತ್‌ ಉತ್ಪಾದನೆ ಮೂಲಕ ಬೃಹತ್‌ ಸಾಧನೆ ಮಾಡಿದ್ದು, ಪ್ರಸ್ತುತ ಸಾಲಿನಲ್ಲಿ 2,000 ಮೆಗಾವ್ಯಾಟ್‌ ಸೌರವಿದ್ಯುತ್‌ ಉತ್ಪಾದನೆಯ ಗುರಿ ಹೊಂದಿದೆ ಎಂದರು.

ಎಜಿ ಕೊಡ್ಗಿ ಹೇಳುವುದೇನು?

ಎಜಿ ಕೊಡ್ಗಿ ಹೇಳುವುದೇನು?

ನಂತರ ಮಾತನಾಡಿದ ಅಮಾಸೆಬೈಲು ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಎ.ಜಿ. ಕೊಡ್ಗಿ, ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯಲ್ಲಿ 1,497 ಮನೆಗಳಿಗೆ ಸೋಲಾರ್‌ ಅಳವಡಿಸಲಾಗಿದೆ. ಅದರಲ್ಲಿ 1,000 ಮನೆಗಳಿಗೆ ನಾಲ್ಕು ದೀಪಗಳು, 497 ಮನೆಗಳಿಗೆ 2 ದೀಪಗಳನ್ನು ಅಳವಡಿಸಿವೆ. 350 ಮನೆಯವರು ಮೊದಲೇ ಸೋಲಾರ್‌ ದೀಪ ಅಳವಡಿಸಿಕೊಂಡಿದ್ದಾರೆ. ಈ ಮೂಲಕ ಅಮಾಸೆಬೈಲು ಚಾರಿಟೆಬಲ್‌ ಟ್ರಸ್ಟ್‌ ಆರಂಭಿಸಿದ ಸೋಲಾರ್‌ ಯೋಜನೆ ಪೂರ್ಣಗೊಂಡು ಸೋಲಾರ್‌ ಗ್ರಾಮ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಾಜ್ಯಕ್ಕೆ ಮಾದರಿ ಅಮಾಸೆಬೈಲು

ರಾಜ್ಯಕ್ಕೆ ಮಾದರಿ ಅಮಾಸೆಬೈಲು

ಸಂಪೂರ್ಣ ಗ್ರಾಮ ಸೋಲಾರ್ ಅಳವಡಿಸಿಕೊಂಡ ಬೇರೆ ಉದಾಹರಣೆ ನಮ್ಮ ರಾಜ್ಯದಲ್ಲಿ ಕಾಣ ಸಿಗಲ್ಲ ಅನ್ನೋದು ಈ ಯೋಜನೆಯ ಹೆಗ್ಗಳಿಕೆ. ಇಡೀ ರಾಜ್ಯಕ್ಕೇ ಮಾದರಿಯಾಗಿ ಈ ಅಮಾಸೆಬೈಲು ಗ್ರಾಮ ವಿದ್ಯುತ್ ಸ್ವಾವಲಂಬಿಯಾಗಿದೆ. ಇದು ಒಂದೆರಡು ದಿನಗಳಲ್ಲಿ ಆಗಿರುವ ಬದಲಾವಣೆಯಲ್ಲ. ಟ್ರಸ್ಟ್‌ನ ಸತತ ಪ್ರಯತ್ನದಿಂದ ಇದು ಸಾಕಾರವಾಗಿದೆ. ಇನ್ನಷ್ಟು ಗ್ರಾಮಗಳನ್ನು ಸೋಲಾರ್ ಗ್ರಾಮವನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಈ ಟ್ರಸ್ಟ್ ವಹಿಸಿಕೊಂಡಿದೆ.

ಜರ್ಮನ್ ಸಂಸ್ಥೆಯಿಂದ ಪ್ರಶಸ್ತಿ

ಜರ್ಮನ್ ಸಂಸ್ಥೆಯಿಂದ ಪ್ರಶಸ್ತಿ

ಹಿಂದುಳಿದಿದ್ದ ಗ್ರಾಮ ಅಮಾಸೆಬೈಲಿನ ಈ ಸಾಧನೆಯನ್ನು ಗುರುತಿಸಿ ಮೇ 31ಕ್ಕೆ ಜರ್ಮನ್‌ ಸಂಸ್ಥೆಯೊಂದು ಇಂಟರ್‌ ಸೋಲಾರ್‌ ಆವಾರ್ಡ್‌ ನೀಡಲಿದೆ ಎಂದು ಎಜಿ ಕೊಡ್ಗಿ ಮಾಹಿತಿ ನೀಡಿದ್ದಾರೆ..

English summary
Pramod Madhwaraj, Minister of State for Fisheries, Youth Services and Sports, declaring Amasebail as the first solar GP in Udupi and the first solar model for India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X