ವಿವಾದದ ನಡುವೆ ಪ್ರಕಾಶ್ ರೈಗೆ 'ಡಾ.ಕಾರಂತ ಹುಟ್ಟೂರ ಪ್ರಶಸ್ತಿ' ಪ್ರದಾನ

Posted By:
Subscribe to Oneindia Kannada

ಕೋಟ, ಅಕ್ಟೋಬರ್ 10: ಬಿಜೆಪಿ ಕಾರ್ಯಕರ್ತರ ವಿರೋಧದ ನಡುವೆ 'ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ'ಯನ್ನು ನಟ ಪ್ರಕಾಶ್ ರೈಗೆ ಪ್ರದಾನ ಮಾಡಲಾಯಿತು.

ಉಡುಪಿಯ ಕೋಟದಲ್ಲಿರುವ ಶಿವರಾಮ ಕಾರಂತ ಥೀಂ ಪಾರ್ಕ್ ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದಕ್ಕೂ ಮೊದಲು ಬಿಜೆಪಿ ಮತ್ತು ಹಲವು ಸಂಘಟನೆ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಲು ಯತ್ನಿಸಿ ಬಂಧನಕ್ಕೆ ಒಳಗಾದರು.

ಈ ಹಿಂದೆ ಪ್ರಕಟಗೊಂಡ ವರದಿ ಹೀಗಿದೆ

ಇಂದು ಬೆಳಿಗ್ಗೆ ಮಂಗಳೂರಿಗೆ ಬಂದು ನಂತರ ಉಡುಪಿಗೆ ಆಗಮಿಸಿದ ಪ್ರಕಾಶ್ ರೈ ಇದೀಗ ಕೋಟಾದತ್ತ ಹೊರಟಿದ್ದಾರೆ. ಈ ಸಂದರ್ಭ ಉಡುಪಿಯ ಸಂತೆಕಟ್ಟೆಯಲ್ಲಿ ಪಟಾಕಿ ಸಿಡಿಸಿ ಪ್ರಕಾಶ್ ರೈಗೆ ಭವ್ಯ ಸ್ವಾಗತ ಕೋರಲಾಯಿತು.

Trying to disrupt Dr. Karanth award, police detains BJP activists

ಇನ್ನು ಕಾರಂತ ಥೀಂ ಪಾರ್ಕ್ ನಲ್ಲಿ ಡಾ ಶಿವರಾಮ ಕಾರಂತ ಹುಟ್ಟೂರ ಪ್ರಶದಗತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಸಭಾಂಗಣದೊಳಗೆ ಪ್ರವೇಶ ಮಾಡಲು ಯತ್ನಿಸಿದ ಜೈ ಭಾರ್ಗವ ಸಂಘಟನೆ ಮತ್ತು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಹೆದ್ದಾರಿಯಲ್ಲೇ ತಡೆದ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ತಮ್ಮನ್ನು ತಡೆದ ಪೊಲೀಸರ ವಿರುದ್ಧ ಬಿಜೆಪಿ ಕಾರ್ಯಕರ್ತರ ವಾಗ್ವಾದ ನಡೆಸಿದರು. ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ತೋರಿ ಅಸಮಾಧಾನ
ಹೊರ ಹಾಕಿದರು.

ಪ್ರತಿಭಟನೆ ಹಿನ್ನಲೆಯಲ್ಲಿ ಪ್ರಕಾಶ್ ರೈಗೆ ಭಾರೀ ಭದ್ರತೆ ನೀಡಲಾಗಿದ್ದು 8 ಪೊಲೀಸ್ ವಾಹನಗಳು ಎಸ್ಕಾರ್ಟ್ ನೀಡುತ್ತಿವೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಶಿವರಾಮ ಕಾರಂತ ಥೀಂ ಪಾರ್ಕ್ ಗೆ ಆಗಮಿಸಲಿರುವ ಪ್ರಕಾಶ್ ರೈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Activists belonging to BJP and several other organisations have tried to disrupt the ‘Dr. Shivarama Karanth Huttura Prashasti’ program. All the activists are detained by the police.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ