Get Updates
Get notified of breaking news, exclusive insights, and must-see stories!

ಪರಶುರಾಮನ ಮೂರ್ತಿಯೇ ನಕಲಿ: ಸುನೀಲ್ ಕುಮಾರ್ ಕ್ಷಮೆಯಾಚನೆಗೆ ಹೆಚ್ಚಿದ ಆಗ್ರಹ

ಮಂಗಳೂರು, ಅಕ್ಟೋಬರ್‌ 16: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗುವತ್ತ ದಾಪುಗಾಲು ಇಟ್ಟಿದ್ದ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನ ಪರಶುರಾಮ ಮೂರ್ತಿ ಕಾಣೆಯಾಗಿದೆ. ನಕಲಿ ಮೂರ್ತಿ ವಿಚಾರ ಇಟ್ಟುಕೊಂಡು ಕಳೆದ ಕೆಲವು ತಿಂಗಳುಗಳಿಂದ ಹೋರಾಟಕ್ಕೆ ಇಳಿದಿದ್ದ ಕಾಂಗ್ರೆಸ್ ಈಗ ಬಹಿರಂಗ ಪ್ರತಿಭಟನೆಗೆ ಇಳಿಯುವ ಮೂಲಕ ಕಾರ್ಕಳ ಶಾಸಕರಿಗೆ ಬಿಸಿ ಮುಟ್ಟಿಸುವ ಪ್ರಯತ್ನ ಮಾಡಿದೆ.

ಕರಾವಳಿಗರ ಆಸ್ಥೆಯ ವಿಚಾರ ಇಟ್ಟು ಮೋಸ ಮಾಡಿದ ಕುರಿತು ಶಾಸಕರು ಕ್ಷಮೆ ಕೇಳಬೇಕು ಎನ್ನುವ ಕೂಗು ಪ್ರತಿಭಟನೆಯಲ್ಲಿ ಕೇಳಿ ಬಂದಿದೆ.

Top Half Portion Of Parashurama Statue In Karkala Removed

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಬೈಲೂರು ಉಮ್ಮಿಕಲ್ ಬೆಟ್ಟ ಸದ್ಯ ರಾಜ್ಯದಾದ್ಯಂತ ಸುದ್ದಿಯಲ್ಲಿರುವ ಸ್ಥಳ. ಕಳೆದ ಜನವರಿಯಲ್ಲಿ ಉದ್ಘಾಟನೆಗೊಂಡಿದ್ದ ಪರಶುರಾಮ ಥೀಂ ಪಾರ್ಕ್ ಸದ್ಯ ವಿವಾದ ಮೂಲಕವೇ ರಾಜ್ಯದಲ್ಲಿ ಗುರುತಿಸಿಕೊಂಡಿದೆ.

ಕಳೆದ ಬಿಜೆಪಿ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ರಾಗಿದ್ದ ಕಾರ್ಕಳ ಶಾಸಕ‌ ಸುನೀಲ್ ಕುಮಾರ್ ನೇತೃತ್ವದಲ್ಲಿ ಉಮ್ಮಿಕಲ್ ಬೆಟ್ಟದ ಮೇಲೆ ಪರಶುರಾಮನ ಥೀಂ ಪಾರ್ಕ್ ನಿರ್ಮಾಣವಾಗಿತ್ತು. ಚುನಾವಣಾ ಪೂರ್ವದಲ್ಲಿ ಅಂದಿನ ಮುಖ್ಯ ಮಂತ್ರಿ ಬಸವರಾಜ‌ ಬೊಮ್ಮಾಯಿ ನೂತನ ಥೀಂ ಪಾರ್ಕ್ ಮತ್ತು ಪರಶುರಾಮನ‌ ಭವ್ಯ ಮೂರ್ತಿ ಲೋಕಾರ್ಪಣೆ ಮಾಡಿದ್ದರು. ನಂತರ ದಿನಗಳಲ್ಲಿ ಕಾಮಗಾರಿ ಬಾಕಿ ಇದೆ ಎನ್ನುವ ಕಾರಣಕ್ಕೆ ಥೀಂ ಪಾರ್ಕ್‌ಗೆ ಪ್ರವಾಸಿಗರ ನಿಷೇಧ ಹೇರಲಾಗಿತ್ತು.

ಇದು ಸ್ಥಳೀಯರಿಗೆ ಅನುಮಾನ ಮೂಡಿಸಿದ ಪರಿಣಾಮ ತನಿಖೆ ನಡೆಸಿದಾಗ ಮೂರ್ತಿ ಅಸಲಿಯತ್ತು ಹೊರಬಿದ್ದಿದೆ. ಹಿತ್ತಾಳೆ ಮೂರ್ತಿಯ ಬದಲು ಫೈಬರ್ ಮೂರ್ತಿ ಸ್ಥಾಪನೆ ಮಾಡಿರುವ ಕುರಿತು ಸ್ಥಳೀಯರು, ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು, ಸದ್ಯ ವಿರೋಧ ಪ್ರತಿಭಟನೆ ರೂಪ ಪಡೆದಿದೆ.

Top Half Portion Of Parashurama Statue In Karkala Removed

ಪರಶುರಾಮ ಮೂರ್ತಿಯ ಅಸಲಿಯತ್ತು ತಿಳಿಯುವ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಥೀಂ ಪಾರ್ಕ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿಚಾರ‌ಣೆಗೆ ಆದೇಶ ನೀಡಿದ್ದರು. ಇದಾದ ಬಳಿಕ ನಿರಂತರವಾಗಿ ಕಾರ್ಕಳ ಕಾಂಗ್ರೆಸ್, ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರನ್ನು ಪ್ರಶ್ನಿಸಿದರು ಯಾವುದೇ ಉತ್ತರ ನೀಡಿರಲಿಲ್ಲ.

ಎರಡು‌ ದಿನಗಳ ಹಿಂದೆ ಪರಶುರಾಮ‌‌ ಥೀಂ ಪಾರ್ಕ್‌ಗೆ ಸಾರ್ವಜನಿಕ ರ ನಿಷೇಧ ಹೇರಿ, ಬೀಗಿ‌ ಪೊಲೀಸ್ ಬಂದೋಬಸ್ತ್ ಮೂಲಕ ಕಾಮಗಾರಿ ನಡೆಸುತ್ತಿರುವುದು ಕಾಂಗ್ರೆಸ್ ಗೆ ಆಕ್ರೋಶ ಕ್ಕೆ ಕಾರಣವಾಗಿದೆ. ಅಲ್ಲದೇ ಡ್ರೋನ್ ಹಾರಿಸಿ ಥೀಂ ಪಾರ್ಕ್ ಪರಿಶೀಲನೆ ನಡೆಸಿದಾಗ ಪರಶುರಾಮ ಮೂರ್ತಿ ಕಾಣೆಯಾಗಿರುವುದು ಕಂಡು ಬಂದಿರುವ ಹಿನ್ನಲೆಯಲ್ಲಿ ಇಂದು ಬೃಹತ್ ಪ್ರತಿಭಟನೆ ಆಯೋಜಿಸಲಾಗಿತ್ತು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ಒಕ್ಕೊರಲಿನಿಂದ ಶಾಸಕ ಸುನೀಲ್ ಕುಮಾರ್ ಅವರ ಕರಾವಳಿಗರ ಅಸ್ಥೆಯ ಜೊತೆಗೆ ಆಟವಾಡಿದ ಹಿನ್ನಲೆಯಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

Top Half Portion Of Parashurama Statue In Karkala Removed

ಒಟ್ಟಾರೆಯಾಗಿ ಕಾರ್ಕಳದಲ್ಲಿ ಪರಶುರಾಮ ನ‌ ಮೂರ್ತಿ ಕಾಣೆಯಾಗಿರುವುದು ಕರಾವಳಿಗರ ಬೇಸರಕ್ಕೆ ಕಾರಣವಾಗಿದೆ. ಸದ್ಯ ಹೊಸ ಒರಿಜಿನಲ್ ಮೂರ್ತಿ ಸ್ಥಾಪಿಸುವ ಕಾರ್ಯವಾಗಬೇಕಿದ್ದು, ಶಾಸಕರು ಇನ್ನಾದರೂ ಬಾಯಿ ತೆರೆದು‌ ಕ್ಷಮೆ ಕೇಳುತ್ತಾರಾ ಎಂದು ಕಾದು‌ ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+