Get Updates
Get notified of breaking news, exclusive insights, and must-see stories!

ಪ್ರಮೋದ್ ಮಧ್ವರಾಜ್ ವಿರುದ್ಧ ಟಿ ಜೆ ಅಬ್ರಹಂ ವಾಗ್ದಾಳಿ

ಉಡುಪಿ, ಮಾರ್ಚ್ 23: ಉಡುಪಿ - ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಘೋಷಣೆಯಾಗುತ್ತಿದ್ದಂತೆ ಪ್ರಮೋದ್ ಮಧ್ವರಾಜ್ ಅವರ 193 ಕೋಟಿ ಸಾಲ ಪ್ರಕರಣ ಮತ್ತೆ ಜೀವ ಪಡೆದಿದೆ.

ಈ ಕರಿತು ಸಾಮಾಜಿಕ ಹೋರಾಟಗಾರ ಟಿ ಜೆ ಅಬ್ರಹಂ , ಪ್ರಮೋದ್ ಮಧ್ವರಾಜ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 TJ Abraham Slams Pramod Madhwaraj for borrowing 193 crores from bank

ಉಡುಪಿ ಮಲ್ಪೆಯ ಸಿಂಡಿಕೇಟ್ ಬ್ಯಾಂಕಲ್ಲಿ 1.10 ಕೋಟಿ ಆಸ್ತಿ ಅಡವಿಟ್ಟು 193 ಕೋಟಿ ಸಾಲ ಪಡೆದ ಪ್ರಕರಣ ಕುರಿತು ಪ್ರಮೋದ್ ಮಧ್ವರಾಜ್ ವಿರುದ್ಧ ಟಿಜೆ ಆಬ್ರಹಂ ಗರಂ ಆಗಿದ್ದಾರೆ.

ಪ್ರಮೋದ್ ಮಧ್ವರಾಜ್ ವಿರುದ್ಧ ವಾಗ್ದಾಳಿ ನಡೆಸಿದ ಅವರು ಪ್ರಮೋದ್ ಮಧ್ವರಾಜ್ ವಿರುದ್ಧ ಬಹಿರಂಗವಾಗಿ ನಾನು ಪ್ರಚಾರ ಮಾಡುತ್ತೇನೆ. ಮಧ್ವರಾಜ್ ಗೆ ಯಾರೂ ಓಟ್ ಹಾಕಬೇಡಿ.

ಉಡುಪಿ ಚಿಕ್ಕಮುಗಳೂರು ಕ್ಷೇತ್ರದ ಮೂಲೆ ಮೂಲೆ ಹೋಗಿ ಪ್ರಚಾರ ಮಾಡುತ್ತೇನೆ ಎಂದು ಅವರು ಕಿಡಿಕಾರಿದರು.

ನೇರವಾಗಿ ನಾನು ಮಧ್ವರಾಜ್ ಗೆ ಸವಾಲು ಹಾಕುತ್ತೇನೆ. ನೀವು ಈ ಬಾರಿ ಠೇವಣಿ ಕಳೆದುಕೊಳ್ಳುತ್ತೀರಿ. ರಾಜ್ಯದ ರೈತರು ಲಕ್ಷ ರೂಪಾಯಿಗೆ ನೇಣು ಹಾಕೊತ್ತಾ ಇದ್ದಾರೆ. ನಿಮ್ಮಂತವರು ಸಂಸತ್ ಪ್ರವೇಶ ಮಾಡಬಾರದು.

ನಾನು ವಿಚಾರವನ್ನು ವೈಯಕ್ತಿಕವಾಗಿಯೇ ತಗೊಂಡಿದ್ದೇನೆ. ಪ್ರಮೋದ್ ನನ್ನ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದ್ದರು.

ಆದರೆ ಮಾನನಷ್ಟ ಮೊಕದ್ದಮೆ ಬದಲು ಕ್ರಿಮಿನಲ್ ಕೇಸು ಹಾಕಿದ್ದಾರೆ. ನಾನು 9 ಬಾರಿ ಕೋರ್ಟಿಗೆ ಹಾಜರಾಗಿದ್ದೇನೆ. ಮಧ್ವರಾಜ್ ಬ್ಯಾಂಕ್ ಕಬಳಿಸಿ ಕೋರ್ಟನ್ನು ದುರ್ಬಳಕೆ ಮಾಡಿದ್ದಾರೆ.

ಒಂದು ಬಾರಿರೂ ಕೋರ್ಟಿಗೆ ಹಾಜರಾಗಿಲ್ಲ. ಮಿಸ್ಟರ್ ಮಧ್ವರಾಜ್ ನನ್ನ ಮೇಲೆ ಕೇಸು ಹಾಕ್ರೀ. ಯಾಕ್ರೀ ಕೇಸ್ ಹಾಕೋದಕ್ಕೆ ಕಾಸಿಲ್ವಾ.? ಧಂ ಇದ್ರೆ ಕೇಸ್ ಫೈಲ್ ಮಾಡಿ.

ಧಂ ಇಲ್ಲದಿದ್ದರೆ ಮೋಸದ ಸಾಲ ಹಗರಣ ಒಪ್ಪಿಕೊಳ್ಳಿ. ಸಿವಿಲ್ ಕೇಸು ಹಾಕುವ ಧಮ್ ನಿಮಗಿಲ್ಲ. ಕೋರ್ಟನ್ನು ನೀವು ಬಳಸಿದ್ದೀರಿ.

ಮತದಾನವನ್ನು ನಾನು ಬಳಸುತ್ತೇನೆ ಎಂದು ಅವರು ವಾಗ್ದಾಳಿ ನಡೆಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+