ಬನ್ನಂಜೆ ರಾಜ ಹೆಸರಲ್ಲಿ ಉಡುಪಿಯ ಉದ್ಯಮಿಗೆ ಬೆದರಿಕೆ ಕರೆ

ಉಡುಪಿ, ಆಗಸ್ಟ್.07: ಭೂಗತ ಪಾತಕಿ ಬನ್ನಂಜೆ ರಾಜ ಹೆಸರಲ್ಲಿ ಉಡುಪಿಯ ಉದ್ಯಮಿಗೆ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಮಲ್ಪೆ ಪೊಲೀಸರು ವಿಕ್ಕಿ ಪೂಜಾರಿ ಸಹಚರರನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಉಡುಪಿಯ ಕಟಪಾಡಿ ನಿವಾಸಿ ಧನು ಯಾನೆ‌ ಧನರಾಜ್ ಹಾಗೂ ಉಡುಪಿಯ ಮಲ್ಪೆ‌ ನಿವಾಸಿ‌ ಉಲ್ಲಾಸ್ ಬಂಧಿತರು.

ಮಂಗಳೂರಿನ ತೊಕ್ಕೊಟ್ಟುವಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಬೆಂಗಳೂರು ಜೈಲು ಸೇರಿದ ವಿಕ್ಕಿ ಪೂಜಾರಿ ಸಹಚರರಾದ ಆರೋಪಿಗಳು ಬನ್ನಂಜೆ ರಾಜ ಹೆಸರಲ್ಲಿ ಕ್ಲಾಸಿಕ್ ಬಿಲ್ಡರ್ ಪ್ರಭಾಕರ‌ ಪೂಜಾರಿಗೆ ಕರೆ‌ಮಾಡಿ‌ 25ಲಕ್ಷ ಕೇಳಿದ್ದಾರೆ. ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದಾರೆ.

Threat call came to Udupi Businessman in the name of Bannanje Raja.

ಒಂದು ವಾರಗಳ ಕಾಲ ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದ ಧನು ಹಾಗೂ ಉಲ್ಲಾಸ್ ನನ್ನು ಮಲ್ಪೆ ಪೊಲೀಸರು ಬಿಲ್ಡರ್ ಪ್ರಭಾಕರ ಪೂಜಾರಿ ಸಹಾಯದಿಂದ ಮಲ್ಪೆ ಬೀಚಿಗೆ ಕರೆದಿದ್ದಾರೆ. ರಿಟ್ಜ್ ಕಾರಿನಲ್ಲಿ ಬಂದ ಆರೋಪಿಗಳನ್ಜು ಮಲ್ಪೆ‌ ಪೊಲೀಸರು ಬಂಧಿಸಿದ್ದಾರೆ.

Threat call came to Udupi Businessman in the name of Bannanje Raja.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಬೆದರಿಕೆಯೊಡ್ಡಿದ ಸಹಚರರಾದ ಧನು ಹಾಗೂ ಉಲ್ಲಾಸ್ ಮೇಲೆ‌ ಈಗಾಗಲೇ ಕೊಲೆಯತ್ನ ಪ್ರಕರಣವಿದೆ. ವಿಕ್ಕಿ ಪೂಜಾರಿಯೇ ತನ್ನ ಸಹಚರರಿಗೆ ಕರೆ‌ ಮಾಡಿ 25ಲಕ್ಷ ಬನ್ನಂಜೆ ರಾಜ ಹೆಸರಲ್ಲಿ ಕೇಳುವಂತೆ ಬೆಂಗಳೂರು ಜೈಲಿಂದಲೇ ಸೂಚನೆ‌ ನೀಡಿದ್ದ ಎಂದು ತಿಳಿದುಬಂದಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+