ಕಳ್ಳರನ್ನು ಹಿಡಿಯುವ ಪೊಲೀಸ್ರ ಮನೆಯಲ್ಲಿ ಕಳ್ಳತನ ಆದ್ರೆ!

By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಜನವರಿ. 16 : ಕಳ್ಳರನ್ನು ಹಿಡಿಯುವ ಪೊಲೀಸರ ಮನೆಯಲ್ಲಿಯೇ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ಉಡುಪಿಯ ಮಣಿಪಾಲದಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ನ 2 ಮನೆಗಳಿಗೆ ಕಳ್ಳರು ಕನ್ನ ಹಾಕಿದ್ದಾರೆ.

ಪೋಲೀಸರ ಕ್ವಾರ್ಟರ್ಸ್ ಗೆ ಕಳ್ಳರ ತಂಡವೊಂದು ನಗದು ಸೇರಿದಂತೆ ಒಟ್ಟು 5.10 ಲಕ್ಷ ರು ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.

Thief in Manipal police quarters udupi

ಮಣಿಪಾಲದಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ನ ಬ್ಲಾಕ್ ನಂ. ಆರರಲ್ಲಿ ಇರುವ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವರಾಯ ಬಿಲ್ಲವ ಮತ್ತು ಶಂಕರ್ ಅವರ 66 ಮತ್ತು 67 ಸಂಖ್ಯೆಯ ಮನೆಯಲ್ಲಿ ಕಳ್ಳತನವಾಗಿದೆ.

ಶಿವರಾಯ ಅವರ ಮನೆಯಲ್ಲಿ 176 ಗ್ರಾಂ. ಚಿನ್ನಾಭರಣ, ಶಂಕರ ಅವರ ಮನೆಯಿಂದ ಇದು ಸಾವಿರ ರು. ನಗದು ಹಾಗೂ ಬೆಳ್ಳಿಯ ಉಡಿದಾರವನ್ನು ಕಳ್ಳರು ದೋಚಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಎರಡು ಮನೆಯಲ್ಲಿ ಯಾರು ಇಲ್ಲದ ವೇಳೆಯನ್ನು ಗಮನಹರಿಸಿ ಮುಂಬಾಗಿಲಿನ ಚಿಲಕವನ್ನು ಒಡೆದು ಒಳಪ್ರವೇಶಿಸಿ ಈ ಕೃತ್ಯ ಎಸಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In an incident unknown thieves entered the police quarters at Manipal and took away cash and ornaments worth Rs 5.10 lac. Cash and valuables were stolen from quarters No. 66 and 67 in sixth block of police quarters at Manipal on the night of Saturday January 14.
Please Wait while comments are loading...