Get Updates
Get notified of breaking news, exclusive insights, and must-see stories!

ಕೇರಳದಲ್ಲೂ ಶ್ರೀರಾಮ ಸೇನೆ ಇದೆ, ಅಲ್ಲೂ ಹೋರಾಟ ಮಾಡ್ತೇನೆ: ಪ್ರಮೋದ್ ಮುತಾಲಿಕ್

ಉಡುಪಿ, ಏಪ್ರಿಲ್ 25: ಅಕ್ಷಯ ತೃತೀಯಕ್ಕೆ ಮುಸ್ಲಿಂ ಮಾಲೀಕತ್ವದ ಚಿನ್ನಾಭರಣದ ಅಂಗಡಿಯಲ್ಲಿ ಚಿನ್ನ ಖರೀದಿ ಮಾಡಬಾರೆದೆಂಬ ಅಭಿಯಾನವನ್ನು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಮರ್ಥಿಸಿಕೊಂಡಿದ್ದಾರೆ.

ಉಡುಪಿಯಲ್ಲಿ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಈ ತರ ಸಂಘರ್ಷ ನಿರಂತರ ಮುಂದುವರೆಯುತ್ತದೆ. ಸಮಾಜಕ್ಕೆ, ಜನರಿಗೆ, ದೇಶಕ್ಕೆ ಯಾವುದು ಹಿತ, ಯಾವುದು ಮಾರಕ ಎನ್ನುವುದು ಗೊತ್ತಾಗಿದೆ. ಹಿಂದೂ ಸಂಘಟನೆಗಳಿಂದ ಸಮಾಜ ಜಾಗೃತಿಯಾಗಿದೆ. ಸಮಾಜಕ್ಕೊಂದು ಕಲ್ಪನೆ, ದೃಷ್ಟಿಕೋನ ಸಿಕ್ಕಿದೆ ಎಂದರು.

ಅಕ್ಷಯ ತೃತೀಯದಂದು ಹಿಂದೂಗಳ ಅಂಗಡಿಯಲ್ಲೇ ಖರೀದಿ ಮಾಡಿ. ಹೀಗೆ ಮಾಡಬೇಕೆನ್ನುವುದು ಜನರಿಗೂ ಅನ್ನಿಸಿದೆ. ಅಕ್ಷಯ ತೃತೀಯ ಹಿಂದೂಗಳ ಹಬ್ಬ. ಹಿಂದೂಗಳ ಹಬ್ಬದಂದು ಹಿಂದೂಗಳ ಅಂಗಡಿಯಲ್ಲಿ ಖರೀದಿ ಮಾಡಿದರೆ ಸಂಸ್ಕೃತಿ ಉಳಿಯುತ್ತದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

There is Also Srirama Sena in Kerala, I Will Do Fighting Next Days: Pramod Muthalik

ಹಿಂದೂಸ್ಥಾನದ ಸುರಕ್ಷತೆಗೆ ಈ ರೀತಿಯ ಅಭಿಯಾನ ಅಗತ್ಯವಾಗಿದೆ. ಜನರು ಕೂಡ ಇದಕ್ಕೆ ಸ್ಪಂದಿಸುತ್ತಿದ್ದಾರೆ. ಹಲಾಲ್ ಬಗ್ಗೆ ಆಗಿರುವ ಜಾಗೃತಿಯನ್ನು ನಾವು ನೋಡಿದ್ದೇವೆ ಮುಂದಿನ ದಿನ ಹಲಾಲ್ ಕಟ್ ಮಾಂಸ ಸಂಪೂರ್ಣವಾಗಿ ಹಿಂದೂಗಳು ಖರೀದಿ ಮಾಡುವುದಿಲ್ಲ. ಇದೇ ಮಾದರಿಯ ಹೋರಾಟ ಈ ವಿಚಾರದಲ್ಲೂ ನಡೆಯಲಿದೆ ಎಂದು ತಿಳಿಸಿದರು.

ಕೇರಳ ಮೂಲದ ಜ್ಯುವೆಲ್ಲರಿ ಕಂಪನಿಗಳು ಹಿಂಸೆಗೆ ಹಣಕಾಸು ನೆರವು ನೀಡುತ್ತಿದೆ. ಪರೋಕ್ಷವಾಗಿ ದೇಶದ್ರೋಹಿ ಸಂಘಟನೆಗಳಿಗೆ ಸಹಕಾರ ಕೊಡುತ್ತಿದ್ದಾರೆ. ಕೇರಳದಲ್ಲಿ 800ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಈ ರೀತಿ ಬರ್ಬರ ಕೊಲೆಗಳಿಗೆ ಹಣಕಾಸು ನೆರವು ನೀಡಿದ್ದಾರೆ. ಕೇರಳದಲ್ಲಿ ನಡರದಿರುವುದು ಸ್ವಾರ್ಥದ ಕೊಲೆಯಲ್ಲ, ಸಿದ್ಧಾಂತಕ್ಕಾಗಿ ನಡೆದ ಕೊಲೆ. ಹಿಂದುತ್ವದ ಕಾರಣಕ್ಕೆ ಕೊಲೆ ಮಾಡಿದ್ದಾರೆ. ದೇಶಭಕ್ತ ಹಿಂದೂ ನಾಯಕರನ್ನು ಕೊಲೆ ಮಾಡಿದ್ದಾರೆ. ಚಿನ್ನದ ವ್ಯಾಪಾರಸ್ಥರು ಇದಕ್ಕೆ ಹಣ ಹೂಡಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.

ಮುಸ್ಲಿಂ ಮಾಲೀಕತ್ವದ ಚಿನ್ನಾಭರಣ ಅಂಗಡಿಗಳ ಜಾಹೀರಾತುಗಳಲ್ಲಿ ಮುಸ್ಲಿಂ ಮಹಿಳೆಯರನ್ನೇ ತೋರಿಸುತ್ತಾರೆ. ಹಣೆಯಲ್ಲಿ ಕುಂಕುಮ ಇಲ್ಲದವರನ್ನು ತೋರಿಸುತ್ತಾರೆ. ಹಣೆ ಮೇಲೆ ಕುಂಕುಮ ಇಟ್ಟವರನ್ನು, ಹಿಂದೂ ಸ್ತ್ರೀಯರನ್ನು ತೋರಿಸುವುದಿಲ್ಲ. ನಮ್ಮ ಸಂಸ್ಕೃತಿಯ ಅವಹೇಳನ ಮಾಡುತ್ತಿದ್ದಾರೆ‌. ನಮ್ಮ ಹಣ ಬೇಕು ಸಂಸ್ಕೃತಿ ಬೇಡ ಅಂತಾರೆ ಅಂತಾ ಮುತಾಲಿಕ್ ಹೇಳಿದ್ದಾರೆ.

ಮುತಾಲಿಕ್‌ರಿಗೆ ವಿಮಾನ ಟಿಕೆಟ್ ಕೊಡುತ್ತೇವೆ, ಕೇರಳದಲ್ಲಿ ಹೋರಾಟ ಮಾಡಲಿ ಎಂಬ ಮುಸ್ಲಿಂ ನಾಯಕರ ಕರೆಗೆ ಮುತಾಲಿಕ್ ಸಿಡಿಮಿಡಿಗೊಂಡ ಪ್ರಮೋದ್ ಮುತಾಲಿಕ್, ಮಂಗಳೂರಿನಲ್ಲಿ ಕೇರಳದ ಕಡೆಯವರಿಂದ ಸಮಸ್ಯೆಯಾಗುತ್ತಿದೆ. ಕೇರಳದಿಂದ ತರಬೇತಿ ಪಡೆದು ಲವ್ ಜಿಹಾದ್ ಮಾಡುತ್ತಿದ್ದಾರೆ. ನಾನು ದೇಶದ ಯಾವುದೇ ಮೂಲೆಯಲ್ಲಿ ಬೇಕಾದರೂ ಹೋರಾಟ ಮಾಡುತ್ತೇನೆ. ನನ್ನನ್ನು ತಡೆಯಲು ನೀವು ಯಾರು? ನಿಮಗೇನು ಹಕ್ಕಿದೆ? ಎಂದು ಪ್ರಶ್ನಿಸಿದೆ.

ನಾನು ಈ ದೇಶದ ನಾಗರಿಕ, ಸಂವಿಧಾನಬದ್ಧ ಅಧಿಕಾರದಲ್ಲಿ ಹೋರಾಟ ಮಾಡುತ್ತೇನೆ. ನನ್ನನ್ನು ಕೇರಳಕ್ಕೆ ಹೋಗು, ಪಾಕಿಸ್ತಾನಕ್ಕೆ ಹೋಗು ಅನ್ನಲು ನೀವು ಯಾರು? ನಿಮಗೆ ಬೇಕಾದರೆ ನೀವು ಹೋಗಿ. ಕೇರಳಕ್ಕೂ ಹೋಗುತ್ತೇನೆ, ಅಲ್ಲೂ ಹೊರಾಟ ಮಾಡುತ್ತೇನೆ. ಕೇರಳದಲ್ಲೂ ಶ್ರೀರಾಮಸೇನೆ ಸಂಘಟನೆ ಇದೆ ಹೋರಾಟ ಮಾಡುತ್ತೇವೆ. ನಿಮ್ಮ ಯಾರ ಉಪದೇಶವು ನನಗೆ ಬೇಕಾಗಿಲ್ಲ ಎಂದು ಮುತಾಲಿಕ್ ಕಿಡಿಕಾರಿದರು.

ನಾನಂತೂ 67 ವರ್ಷದಿಂದ ಹಿಂದೂ ಸಂಘಟನೆಗಳಲ್ಲಿ ಹೋರಾಟ ಮಾಡುತ್ತಿದ್ದೇನೆ. ನಮ್ಮ ಎಲ್ಲ ಹೋರಾಟದ ಲಾಭ ಬಿಜೆಪಿಗೆ ಹೋಗುತ್ತಿದೆ ಅನ್ನುವುದು ಗೊತ್ತಿದೆ. ಆದರೆ ಬಿಜೆಪಿಯವರು ಸ್ಪಂದಿಸುತ್ತಿಲ್ಲ. ನನ್ನ ಕಾರ್ಯಕ್ರಮಕ್ಕೆ ಬಿಜೆಪಿಯವರೇ ಅಡ್ಡಿಪಡಿಸುತ್ತಿದ್ದಾರೆ. ಕೋಲಾರ ,ಉಡುಪಿ, ಕಲಬುರ್ಗಿ ಜಿಲ್ಲೆಗೆ ನನಗೆ ಬ್ಯಾನ್ ಮಾಡಿದರು. ಕಾಂಗ್ರೆಸ್ ಇದ್ದಾಗಲೂ ಬ್ಯಾನ್, ಜೈಲು. ಬಿಜೆಪಿ ಇದ್ದಾಗಲೂ ಬ್ಯಾನ್, ಕೇಸ್, ಜೈಲು. ಬಿಜೆಪಿಯು ನನ್ನನ್ನು ಬ್ಯಾನ್ ಮಾಡುತ್ತಾರೆ ಅಂದರೆ ಹೇಗೆ. ನೀವು ಬ್ಯಾನ್ ಮಾಡುತ್ತಿರುವುದು ನನ್ನನ್ನಲ್ಲ ಹಿಂದುತ್ವವನ್ನು ಎಂದು ಗುಡುಗಿದರು.

ಹಿಂದೂ ಸಿದ್ಧಾಂತವನ್ನು ಬ್ಯಾನ್ ಮಾಡುತ್ತಿದ್ದೀರಿ. ಹಿಂದೂಗಳಿಂದಲೇ ಗೆದ್ದು ಬಂದವರು ನೀವು. ಹಿಂದೂಗಳನ್ನೇ ನೀವು ಎದುರು ಹಾಕ್ತೀರಿ ಅಂದರೆ ಮುಂದಿನ ದಿನ ನಿಮಗೆ ಪಾಠ ಕಲಿಸಬೇಕಾಗುತ್ತದೆ. ದೇಶದ ಹಿತಕ್ಕಾಗಿ ಹಿಂದೂ ಸಂಘಟಕರು ಕೆಲಸ ಮಾಡುತ್ತಿದ್ದಾರೆ ಅಂತಾ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.‌

ಇನ್ನು ಬೆಂಗಳೂರಿನ ಕ್ರಿಶ್ಚಿಯನ್ ಶಾಲೆಯಲ್ಲಿ ಬೈಬಲ್ ಕಡ್ಡಾಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮುತಾಲಿಕ್, ಬೈಬಲ್ ಕಡ್ಡಾಯ ಮಾಡಿರುವುದು ಖಂಡನೀಯ. ಪ್ರವೇಶಾತಿ ವೇಳೆಯಲ್ಲೇ ಬೈಬಲ್ ಕಡ್ಡಾಯ ಎಂದು ಹೇಳಿದ್ದಾರೆ. ಇದು ಕಾನೂನು ಬಾಹಿರ ಕೃತ್ಯ. ಮಕ್ಕಳಿಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇದೆ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ. ತಕ್ಷಣ ಈ ಶಾಲೆಯನ್ನು ರದ್ದುಮಾಡಿ. ಈ ಶಾಲೆಯ ಮಾನ್ಯತೆ ರದ್ದು ಮಾಡಿ ಸೀಸ್ ಮಾಡಿ ಎಂದು ಶಿಕ್ಷಣ ಸಚಿವರಿಗೆ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ಹಿಂದೂಗಳ ಜ್ಯುವೆಲ್ಲರಿ ಶಾಪ್‌ನಲ್ಲಿಯೇ ಚಿನ್ನ ಖರೀದಿಸುವಂತೆ ಪ್ರಮೋದ್ ಮುತಾಲಿಕ್ ಹೇಳಿಕೆಯನ್ನು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕುಡ್ಲಿಪೇಟೆ ಖಂಡಿಸಿದ್ದಾರೆ. ಕೋಮುವಾದಿ ಕ್ರಿಮಿ ಪ್ರಮೋದ್ ಮುತಾಲಿಕ್ ಅನ್ನು ಯಾಕೆ ಹೈಲೈಟ್ ಮಾಡಲಾಗುತ್ತಿದೆ ಎಂದು ಗೊತ್ತಿಲ್ಲ. ಆತ ಜನ ವಿರೋಧಿ, ದೇಶ ವಿರೋಧಿ, ಮನುಷ್ಯ ವಿರೋಧಿ. ತಕ್ಷಣ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅರಾಜಕತೆ ಸೃಷ್ಟಿ ಮಾಡುವವರನ್ನು ರಾಜ್ಯ ಸರಕಾರ ಕಂಟ್ರೋಲ್ ಮಾಡುತ್ತಿಲ್ಲ. ಭಾತೃತ್ವಕ್ಕೆ ವಿರೋಧವಾಗಿ ಹೇಳಿಕೆ ನೀಡುವ ಕೋಮು ಕ್ರಿಮಿಗಳನ್ನು ತಡೆಯಬೇಕಾಗಿದೆ. ಪ್ರಮೋದ್ ಮುತಾಲಿಕ್ ಹೇಳಿಕೆಗಳಿಗೆ ಮಾಧ್ಯಮಗಳು ಹೆಚ್ಚು ಪ್ರಕಾರಗಳನ್ನು ಕೊಡುತ್ತಿದೆ. ಆದ್ದರಿಂದ ಮಾಧ್ಯಮಗಳು ಪ್ರಮೋದ್ ಮುತಾಲಿಕ್‌ಗೆ ಪ್ರೋತ್ಸಾಹ ಕೊಡಬಾರದು. ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಈ ರೀತಿಯ ಹೇಳಿಕೆಗಳನ್ನು ನೀಡಲಾಗುತ್ತದೆ ಎಂದು ಅಬ್ದುಲ್ ಮಜೀದ್ ಹೇಳಿದ್ದಾರೆ.

Recommended Video

      ಮೋದಿಗೆ ಪತ್ರ ಬರೆದ ಬೋಸ್ ಮೊಮ್ಮಗ! | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+