ಮಲ್ಪೆಯ ಸುಂದರ ಕಡಲ ತೀರದಲ್ಲಿ ಕೆಜಿಎಫ್-2 ಚಿತ್ರೀಕರಣ: ಯಶ್ ನೋಡಲು ನೂರಾರು ಅಭಿಮಾನಿಗಳು
ಉಡುಪಿ, ಅಕ್ಟೋಬರ್ 8: ಉಡುಪಿ ಜಿಲ್ಲೆ ಮಲ್ಪೆಯ ಸುಂದರ ಕಡಲ ತೀರದಲ್ಲಿ ಕನ್ನಡದ ಬಹುನಿರೀಕ್ಷೆಯ ಕೆಜಿಎಫ್-2 ಚಿತ್ರೀಕರಣ ನಡೆಯುತ್ತಿದೆ. ಉಡುಪಿಯ ಮಲ್ಪೆ, ಪಡುಕೆರೆ ಭಾಗದಲ್ಲಿ ಚಿತ್ರೀಕರಣವು ಆರಂಭಗೊಂಡಿದ್ದು, ಇನ್ನೂ ಎರಡು ದಿನಗಳ ಕಾಲ ಉಡುಪಿಯಲ್ಲಿ ಚಿತ್ರೀಕರಣ ನಡೆಯಲಿದೆ.
ಚಿತ್ರೀಕರಣದಲ್ಲಿ ನಾಯಕ ನಟ ಯಶ್, ನಟಿ ಶ್ರೀನಿಧಿ ಶೆಟ್ಟಿ ಹಾಗೂ ಇತರರು ಭಾಗಿಯಾಗಿದ್ದಾರೆ. ಸಹಜವಾಗಿಯೇ ತಮ್ಮ ಫೇವರಿಟ್ ನಟನನ್ನು ನೋಡಲು ಪಡುಕೆರೆಯಲ್ಲಿ ಇಂದು ನೂರಾರು ಯಶ್ ಅಭಿಮಾನಿಗಳು ಸೇರಿದ್ದರು.

ಆದರೆ ಅಭಿಮಾನಿಗಳಿಗಾಗಲೀ, ಮಾಧ್ಯಮದವರಿಗಾಗಲೀ ಚಿತ್ರೀಕರಣ ಮತ್ತು ಫೋಟೋ ತೆಗೆಯಲು ಚಿತ್ರತಂಡ ಅವಕಾಶ ನೀಡಲಿಲ್ಲ. ಚಿತ್ರೀಕರಣದ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಯಶ್, Waves cant be stopped but you can learn to sail... After a long break.. Rocky sets sail from today. ಎಂದು ಬರೆದುಕೊಂಡಿದ್ದಾರೆ.

ವರದಿಗಾಗಿ ಬಂದಿದ್ದ ಪತ್ರಕರ್ತರು ಮತ್ತು ಸ್ಥಳದಲ್ಲಿದ್ದ ಬೌನ್ಸರ್ ಗಳ ನಡುವೆ ಶೂಟಿಂಗ್ ವಿಚಾರದಲ್ಲಿ ಮಾತಿನ ಚಕಮಕಿ ನಡೆಯಿತು. ಬಳಿಕ ಸ್ಪಷ್ಟೀಕರಣ ನೀಡಿದ ಚಿತ್ರತಂಡ, ಹೆಚ್ಚಿನ ನಿರೀಕ್ಷೆ ಇರುವ ಚಿತ್ರ ಇದು. ಮಾಧ್ಯಮಗಳಿಗೆ ಬೇಕಾದ ಮಾಹಿತಿಯನ್ನು ಮುಂದೆ ಚಿತ್ರತಂಡವೇ ಮಾಹಿತಿ ನೀಡಲಿದೆ ಎಂದು ಹೇಳಿತು.

Recommended Video
ಸ್ಥಳದಲ್ಲಿ ಸೇರಿರುವ ಅಭಿಮಾನಿಗಳಿಗೂ, ಬೌನ್ಸರ್ ಗಳು ಫೋಟೋ, ವಿಡಿಯೋ ತೆಗೆಯಲು ಅವಕಾಶ ನೀಡುತ್ತಿರಲಿಲ್ಲ. ಮಲ್ಪೆಯ ಸಮುದ್ರತೀರ, ಕಡಲದಂಡೆಯ ಕಲ್ಲು ಬಂಡೆಗಳ ಬಳಿ ಚಿತ್ರೀಕರಣ ನಡೆಯುತ್ತಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications