ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲ್ಪೆ ಬಂದರಿನಲ್ಲಿ ಹಗ್ಗ ಕಡಿದು ಜಾರಿದ ಬೋಟ್: ಟೆಂಪೋ ಸಮುದ್ರಕ್ಕೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಸೆಪ್ಟೆಂಬರ್ 1: ಮಲ್ಪೆ ಬಂದರಿನಲ್ಲಿ ಮೀನು ಲೋಡ್ ಮಾಡುವಾಗ ಟೆಂಪೋವೊಂದು ಸಮುದ್ರಕ್ಕೆ ಬಿದ್ದ ಘಟನೆ ನಡೆದಿದ್ದು, ಓರ್ವ ವ್ಯಕ್ತಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ನಡೆದಿದೆ.

Recommended Video

1000 ಚದರ ಕಿಲೋಮೀಟರ್ Indiaದ ಗಡಿಯನ್ನು ಆಕ್ರಮಿಸಿಕೊಂಡ China | Oneindia Kannada

ಮೀನುಗಾರರು ಅರಬ್ಬಿ ಸಮುದ್ರದಲ್ಲಿ ಹಿಡಿದ ತಂದ ಮೀನುಗಳನ್ನು ಮಲ್ಪೆ ಬಂದರಿನಲ್ಲಿ ಲೋಡ್ ಮಾಡಲಾಗುತ್ತದೆ. ಬೋಟ್ ಗಳು ಲಂಗರು ಹಾಕುವ ಪಕ್ಕದಲ್ಲೇ ಗೂಡ್ಸ್ ಟೆಂಪೋ ತಂದು ನಿಲ್ಲಿಸಿ ಮೀನು ಲೋಡ್ ಮಾಡುತ್ತಾರೆ. ಎಂದಿನಂತೆ ಈ ಪ್ರಕ್ರಿಯೆ ನಡೆಯುತ್ತಿದ್ದಾಗ ದಡದಲ್ಲಿದ್ದ ಬೋಟು ನಿಧಾನಕ್ಕೆ ಹಿಂದಕ್ಕೆ ಸರಿದಿದೆ.

ಕೋವಿಡ್-19 ನಿಯಮ ಪಾಲನೆಯೊಂದಿಗೆ ಆಳಸಮುದ್ರ ಮೀನುಗಾರಿಕೆ ಪ್ರಾರಂಭಕೋವಿಡ್-19 ನಿಯಮ ಪಾಲನೆಯೊಂದಿಗೆ ಆಳಸಮುದ್ರ ಮೀನುಗಾರಿಕೆ ಪ್ರಾರಂಭ

ಮೀನು ಲೋಡ್ ಮಾಡುವ ಸಂದರ್ಭದಲ್ಲಿ ಗೂಡ್ಸ್ ಟೆಂಪೋವನ್ನು ಬೋಟಿಗೆ ತಾಗಿಸಿ ನಿಲ್ಲಿಸಲಾಗಿತ್ತು. ಟೆಂಪೋ ಹಿಂದಕ್ಕೆ ಹೋಗಿ, ನೀರಿಗೆ ಬಿದ್ದಿದೆ. ಅಲ್ಲದೇ ಟೆಂಪೋ ಸಂಪೂರ್ಣವಾಗಿ ಮುಳುಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಂತರ ಮುಳುಗಿದ್ದ ಟೆಂಪೋವನ್ನು ಕ್ರೇನ್‌ಗೆ ಸರಪಳಿಯಲ್ಲಿ ಕಟ್ಟಿ ಮೇಲಕ್ಕೆತ್ತಲಾಯಿತು.

Udupi: Tempo Drowned At Sea While Loading Fish

ವಿಠ್ಠಲ ಪೂಜಾರಿ ಎಂಬುವವರಿಗೆ ಸೇರಿದ ಟೆಂಪೋ ಇದಾಗಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟೆಂಪೋದ ಎಂಜಿನ್ ಒಳಗೆ ನೀರು ಹೋಗಿದ್ದು, ಸಾವಿರಾರು ರುಪಾಯಿ ನಷ್ಟವಾಗಿದೆ. ಟೆಂಪೋ ನೀರಿಗೆ ಉರುಳುತ್ತಿದ್ದಂತೆ ಅದರಲ್ಲಿದ್ದ ವಿಠಲ ಪೂಜಾರಿ ಜಿಗಿದು, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

English summary
An incident occurred when a Tempo fell into the sea while a fish loading at Malpe Harbor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X