ತೆಲುಗು ಚಿತ್ರ ನಿರ್ಮಾಪಕ ನೂತನ್ ನಾಯ್ಡು ಉಡುಪಿಯಲ್ಲಿ ಬಂಧನ
ಉಡುಪಿ, ಸೆಪ್ಟೆಂಬರ್ 6: ಪ್ರಕರಣವೊಂದಕ್ಕೆ ಸಂಬಂಧಿಸಿ ತೆಲುಗು ಚಿತ್ರ ನಿರ್ಮಾಪಕನನ್ನು ಉಡುಪಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ತೆಲುಗು ನಿರ್ಮಾಪಕ ನೂತನ್ ನಾಯ್ಡುನನ್ನು ಉಡುಪಿ ರೈಲ್ವೆ ನಿಲ್ದಾಣದಲ್ಲಿ ಬಂಧನ ಮಾಡಲಾಗಿದ್ದು, ಬಳಿಕ ಸ್ಥಳೀಯ ಪೊಲೀಸರು ಆತನನ್ನು ಆಂಧ್ರಪ್ರದೇಶ ಪೊಲೀಸರಿಗೆ ಹಸ್ತಾಂತರಿಸಿದರು.
ಆಂಧ್ರಪ್ರದೇಶದ ದಲಿತ ಯುವಕನ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈತ ಅಲ್ಲಿಯ ಪೊಲೀಸರಿಗೆ ಬೇಕಾಗಿದ್ದ. ಆಂಧ್ರಪ್ರದೇಶದ ವಿಶಾಖಪಟ್ಟಣ ಪೊಲೀಸರಿಂದ ಶನಿವಾರ ಬೆಳಿಗ್ಗೆ ಖಚಿತ ಮಾಹಿತಿ ಪಡೆದಿದ್ದ ಉಡುಪಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದರು.
ಆರೋಪಿ ಮಂಗಳೂರಿನಿಂದ ಮುಂಬೈಗೆ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ. ಉಡುಪಿ ಮತ್ತು ಮಣಿಪಾಲ ಠಾಣೆ ಪಿಎಸ್ಐ ನೇತೃತ್ವದ ಪೊಲೀಸರು ಸುತ್ತುವರಿದಾಗ ತನ್ನ ಬಳಿಯಿದ್ದ ಒಂದು ಮೊಬೈಲ್ ನ್ನು ಎಸೆಯಲು ಆರೋಪಿ ಮುಂದಾಗಿದ್ದ ಎನ್ನಲಾಗಿದೆ.

ಆರೋಪಿ ನೂತನ್ ನನ್ನು ನಗರದ ಇಂದ್ರಾಳಿ ರೈಲ್ವೆ ಸ್ಟೇಷನ್ ನಲ್ಲಿ ಬಂಧಿಸಿರುವ ಪೊಲೀಸರು, ನಾಲ್ಕು ಮೊಬೈಲ್ ಫೋನ್‌ಗಳನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ. ಬಳಿಕ ಆರೋಪಿ ನೂತನ್‌ನ್ನು ವಿಶಾಖಪಟ್ಟಣ ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.












Click it and Unblock the Notifications