ಶ್ರೀ ಕೃಷ್ಣಮಠದಲ್ಲಿ ಪರ್ಯಾಯ ಶ್ರೀಗಳಿಂದ ಭಕ್ತರಿಗೆ ತಪ್ತಮುದ್ರಾಧಾರಣೆ

ಉಡುಪಿ, ನವೆಂಬರ್ 26: ಉಡುಪಿಯ ಕೃಷ್ಣಮಠದಲ್ಲಿ ಚಾತುರ್ಮಾಸ್ಯ ಸಮಾಪ್ತಿ ದಿನವಾದ ದೇವಪ್ರಬೋಧಿನಿ ಏಕಾದಶಿ ದಿನದಂದು ತಪ್ತ ಮುದ್ರಾಧಾರಣೆ ನಡೆಯಿತು.

ಮಹಾವಿಷ್ಣುವಿನ ಚಿಹ್ನೆಗಳಾದ ಶಂಖ, ಚಕ್ರವನ್ನು ಪಂಚಗವ್ಯ ಪ್ರಾಶನ ಪೂರ್ವಕವಾಗಿ ಸುದರ್ಶನದ ಹೋಮದ ಕೆಂಡದಲ್ಲಿ ಕಾಯಿಸಿ ಶರೀರದಲ್ಲಿ ಧಾರಣೆ ಮಾಡಿಕೊಳ್ಳುವ ಸಂಪ್ರದಾಯ ಅಷ್ಟಮಠಗಳಲ್ಲಿದೆ. ಅದರಂತೆ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಅದಮಾರು ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದಲ್ಲಿ ತಪ್ತಮುದ್ರಾಧಾರಣೆ ನಡೆಯಿತು.

ಪರ್ಯಾಯ ಮಠದ ಪುರೋಹಿತರಾದ ಮುದರಂಗಡಿ ಲಕ್ಷ್ಮೀಶ ಆಚಾರ್ಯರು ಸುದರ್ಶನ ಹೋಮದ ಪೂರ್ಣಾಹುತಿಯನ್ನು ನಡೆಸಿದರು. ಪೇಜಾವರ ಶ್ರೀಪಾದರು ತಾವೇ ಮುದ್ರಾಧಾರಣೆ ಮಾಡಿಕೊಂಡು ಪರ್ಯಾಯ ಶ್ರೀಪಾದರಿಗೆ ಮುದ್ರಾಧಾರಣೆ ಮಾಡಿದರು. ನಂತರ ಪರ್ಯಾಯ ಅದಮಾರು ಈಶಪ್ರಿಯತೀರ್ಥ ಶ್ರೀಪಾದರು ಭಕ್ತಾದಿಗಳಿಗೆ ತಪ್ತ ಮುದ್ರಾಧಾರಣೆ ನಡೆಸಿದರು.

Udupi: Taptha Mudradharana At Krishna Math By Paryaya Sri

ಮಳೆಗಾಲದಲ್ಲಿ ಸೊಳ್ಳೆ, ಕ್ರಿಮಿ ಕೀಟಗಳಿಂದ ಎದುರಾಗುವ ರೋಗ ರುಜಿನಗಳನ್ನು ಎದುರಿಸಲು ಬೇಕಾದ ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೂ ತಪ್ತ ಮುದ್ರಾಧಾರಣೆ ಪೂರಕ ಎಂಬ ನಂಬಿಕೆ ಭಕ್ತರದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+