6 ತಿಂಗಳ ಹಿಂದೆ ಎಬಿವಿಪಿ ಧ್ವಜ ಹಿಡಿದಿದ್ದ ಹಿಜಾಬ್ ವಿದ್ಯಾರ್ಥಿನಿಯರು!

ಉಡುಪಿ, ಫೆಬ್ರವರಿ 10; ಹಿಜಾಬ್ ವಿವಾದ ದಿನಕ್ಕೊಂದು ಬಣ್ಣ ಪಡೆಯುತ್ತಿದೆ. ಧಿಡೀರ್ ಆಗಿ ಹಿಜಾಬ್ ವಿವಾದ ಭುಗಿಲೇಳುವ ಹಿಂದೆ ಸೇಡಿನ ಕಿಚ್ಚಿರುವ ಬಗ್ಗೆ ಅನುಮಾನ ಮೂಡಿದೆ. ಆರು ಮಂದಿ ಹಿಜಾಬ್ ವಿದ್ಯಾರ್ಥಿನಿಯರು ಎಬಿವಿಪಿ ಧ್ವಜ ಹಿಡಿದಿರೋದೇ ಈಗ ವಿವಾದಕ್ಕೂ ಮೂಲ ಅಂತಾ ಹೇಳಲಾಗಿದೆ.

ಹಿಜಾಬ್ ವಿವಾದದ ಕಿಚ್ಚು ಸದ್ಯ ಆರುವ ಲಕ್ಷಣಗಳು ಕಾಣುತ್ತಿಲ್ಲ. ಒಂದೆಡೆ ಹಿಜಾಬ್ ಧಾರಿ ವಿದ್ಯಾರ್ಥಿನಿಯರು ಶಾಸಕ ರಘಪತಿ ಭಟ್ ವಿರುದ್ಧ ಕಿಡಿಕಾರಿದಾರೆ, ಬಿಜೆಪಿ ಇವೆಲ್ಲಾ ಸಿಎಫ್ಐನ ಮಾಸ್ಟರ್ ಗೇಮ್ ಅಂತಾ ಹೇಳುತ್ತಿದೆ.

ಇದೆಲ್ಲದರ ನಡುವೆ ಬಿಜೆಪಿ ಹೊಸ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಎಬಿವಿಪಿ ಪ್ರತಿಭಟನೆಯಲ್ಲಿ ಈ ವಿದ್ಯಾರ್ಥಿನಿಯರು ಪಾಲ್ಗೊಂಡಿರೋದೇ ಈ ವಿವಾದಕ್ಕೆ ಮೂಲ. ಈ ಆರು ಮಂದಿ ವಿದ್ಯಾರ್ಥಿನಿಯರನ್ನು ಬಳಸಿಯೇ ಸಿಎಫ್ಐ ವಿವಾದ ಸೃಷ್ಠಿಸಿದೆ ಅಂತಾ ಬಿಜೆಪಿ ಆರೋಪ ಮಾಡಿದೆ.

Students Demanding For Hijab Took Part In ABVP Protest

"ಮಣಿಪಾಲ ವಿದ್ಯಾರ್ಥಿ ಅತ್ಯಾಚಾರ ವಿರೋಧಿಸಿ ಅಕ್ಟೋಬರ್ ತಿಂಗಳಿನಲ್ಲಿ ಎಬಿವಿಪಿ ಮಣಿಪಾಲದಲ್ಲಿ ಬೃಹತ್ ಪ್ರತಿಭಟನಾ ಆಯೋಜಿಸಿತ್ತು. ಈ ಪ್ರತಿಭಟನೆಯಲ್ಲಿ ಸದ್ಯ ಹಿಜಾಬ್ ಪ್ರತಿಭಟನಾಧಾರಿ ವಿದ್ಯಾರ್ಥಿನಿಯರು ಮುಂಚೂಣಿಯಲ್ಲಿ ಭಾಗವಹಿಸಿದ್ದು, ಆ ಸಂಧರ್ಭದಲ್ಲಿ ಸಿಎಫ್‌ಐ ಇವರನ್ನು ಟಾರ್ಗೆಟ್ ಮಾಡಿತ್ತು. ಇದೇ ವಿದ್ಯಾರ್ಥಿಯರನ್ನು ಬಳಸಿ ಸಿಎಫ್ಐ ಅವರ ಬ್ರೈನ್ ವಾಶ್ ಮಾಡಿ ಹಿಜಾಬ್ ವಿವಾದನ್ನು ಮುನ್ನಲೆಗೆ ತರಲು ಪ್ರೇರೇಪಣೆ ನೀಡಿದೆ" ಎಂದು ಉಡುಪಿ ಬಾಲಕಿಯರ ಸರ್ಕಾರಿ ಕಾಲೇಜಿನ ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಆರೋಪಿಸಿದ್ದಾರೆ.

"ಆದರೆ ಈ ಆರೋಪವನ್ನು ಹಿಜಾಬ್ ಹೋರಾಟಗಾರ್ತಿ ಆಲಿತಾ ಅಸದಿ ಅಲ್ಲಗಳೆದಿದ್ದಾರೆ. ನಾವು ಎಬಿವಿಪಿ ಪ್ರತಿಭಟನೆಯಲ್ಲಿ ಭಾಗವಹಿಸಿರೋದು ಹೌದು. ಆದರೆ ಪ್ರತಿಭಟನೆಯ ಸಂದರ್ಭದಲ್ಲಿ ನಮಗೆ ಬೇರೆ ಕಾಲೇಜಿನವರೂ ಬರುತ್ತಾರೆ. ಇದು ವಿದ್ಯಾರ್ಥಿನಿ ಮೇಲಾದ ಅನ್ಯಾಯದ ಕುರಿತಾದ ಹೋರಾಟ ಅಂತಾ ಹೇಳಿದ್ದರು. ವಿದ್ಯಾರ್ಥಿಗಳು ಒಂದೆಡೆ ಸೇರಿದಾಗ ಎಬಿವಿಪಿಯ ಧ್ವಜಗಳನ್ನು ನೀಡಿದ್ದರು" ಎಂದು ಸ್ಪಷ್ಟನೆ ನೀಡಿದ್ದಾರೆ.

Students Demanding For Hijab Took Part In ABVP Protest

ಇನ್ನು ಈ ಬಗ್ಗೆ ಮಾತನಾಡಿರುವ ಉಡುಪಿ ಶಾಸಕ ರಘಪತಿ ಭಟ್, "ಕೋರ್ಟ್ ವಿಚಾರಣೆಯಲ್ಲಿ ನಾನು ಪ್ರತಿವಾದಿಯಾದ ಕಾರಣ ಬೇಕಾದ ದಾಖಲೆ ಸಲ್ಲಿಸಿದ್ದೇನೆ. ತೀರ್ಪು ನಮ್ಮ ಪರವಾಗಿಯೇ ಬರುತ್ತದೆ‌‌. ಕಾಲೇಜು ನಿಯಮಾವಳಿಯಲ್ಲಿ ಶಿರವಸ್ತ್ರ ಕಡ್ಡಾಯ ಇಲ್ಲ. ವಸ್ತ್ರಸಂಹಿತೆಯಲ್ಲಿ ಶಿರವಸ್ತ್ರ ‌ನಿಯಮ ನಮೂದಿಸದಿದ್ದರೂ ಅದು ವಸ್ತ್ರಸಂಹಿತೆ ಅಲ್ಲಿ ಬರುವುದಿಲ್ಲ. ಹಿಜಾಬ್ ಈ ಮಟ್ಟಿಗೆ ವಿವಾದ ಆಗುವುದು ಗೊತ್ತಿರಲಿಲ್ಲ" ಹೇಳಿದ್ದಾರೆ.

ಇನ್ನು ಎಬಿವಿಪಿಯಲ್ಲಿ ರಿಟ್ ಅರ್ಜಿ ಸಲ್ಲಿಸಿದ ವಿದ್ಯಾರ್ಥಿನಿಯರು ಇರುವ ಬಗ್ಗೆ ಮಾತನಾಡಿದ ಭಟ್, "ಹಿಂದು ಮುಸ್ಲಿಂ ಎಲ್ಲರಿಗೂ ಪ್ರತಿಭಟನೆಗೆ ಹೋಗಬಾರದಾಗಿ ತಿಳಿಸಿದ್ದೆವು. ಪ್ರತಿಭಟನೆಗೆ ಹೋಗಿರುವ ಎಲ್ಲರ ಹಾಜರಾತಿಯನ್ನು ತೆಗೆಯಲಾಗಿದೆ. ಈ‌ ಪ್ರತಿಭಟನೆಯೇ ಈ ವಿವಾದಕ್ಕೆ ಮೂಲ ಕಾರಣವಾಗಿದೆ" ಎಂದು ರಘುಪತಿ ಭಟ್ ತಿಳಿಸಿದ್ದಾರೆ.

ಒಟ್ಟಿನ್ನಲ್ಲಿ ಉಡುಪಿಯ ಹಿಜಾಬ್ ಪ್ರಕರಣ ಹೈಕೋರ್ಟ್ ಅಂಗಳದಲ್ಲಿ ತೀರ್ಪು ಬರುವ ಮುನ್ನವೇ ಹಲವು ಆಯಾಮಗಳನ್ನು ಪಡೆಯುತ್ತಿದೆ. ತೀರ್ಪು ಯಾರ ಪರವೇ ಬರಲಿ, ಕರಾವಳಿಯ ಸಾಮರಸ್ಯ ನೆಲೆವೂರಲಿ ಅನ್ನೋದು ಎಲ್ಲರ ಆಶಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+