ಉಡುಪಿ; ಪಿಯುಸಿ ದಾಖಲಾತಿಗೆ ಬಂದ ವಿದ್ಯಾರ್ಥಿ ದಾರುಣ ಸಾವು
ಉಡುಪಿ, ಆಗಸ್ಟ್ 17: ದ್ವಿತೀಯ ಪಿಯುಸಿ ದಾಖಲಾತಿಯನ್ನು ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವಿದ್ಯಾರ್ಥಿಯೊಬ್ಬ ರಸ್ತೆ ದಾಟುವ ಸಂದರ್ಭ ಅಪಘಾತ ಸಂಭವಿಸಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೈಂದೂರು ತಾಲೂಕಿನ ನಾವುಂದದಲ್ಲಿ ಇಂದು ನಡೆದಿದೆ.
Recommended Video
Samsung , Apple ಕಂಪನಿಗಳ ಫೋನ್ ಇನ್ಮುಂದೆ ಭಾರತದಲ್ಲೇ ತಯಾರು | Oneindia Kannada
ಮರವಂತೆ ನಿವಾಸಿ ಕಿಶನ್ ಖಾರ್ವಿ (17) ಮೃತ ವಿದ್ಯಾರ್ಥಿ. ಈ ವಿದ್ಯಾರ್ಥಿಯು ಇಂದು ನಾವುಂದದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಪಿಯುಸಿ ದಾಖಲಾತಿಗಾಗಿ ಬಂದಿದ್ದ. ದಾಖಲಾತಿ ಮುಗಿಸಿ ಜೆರಾಕ್ಸ್ ಮಾಡಿಸಿಕೊಂಡು ಮನೆಗೆ ಹೋಗಲು ಕಾಲೇಜು ಎದುರಿನ ರಸ್ತೆ ದಾಟುವಾಗ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದು ಆತನ ಮೇಲೇ ಲಾರಿ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಬೈಂದೂರು ಪೊಲೀಸ್ ಸಿಪಿಐ ಸುರೇಶ್ ನಾಯಕ್, ಎಸ್ ಐ ಸಂಗೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿಯ ಮೃತದೇಹವನ್ನು ಬೈಂದೂರು ಶವಾಗಾರಕ್ಕೆ ರವಾನಿಸಲಾಗಿದೆ.












Click it and Unblock the Notifications