ಪೇಜಾವರ ಶ್ರೀಗಳ ಪುಟ್ಟ ಗಾಯಕ್ಕೆ ಸಿಕ್ಕಿತು ಬೆಟ್ಟದಷ್ಟು ಪ್ರಚಾರ
ಉಡುಪಿ, ಜೂನ್ 28: ಉಡುಪಿ ಕೃಷ್ಣ ಮಠದಲ್ಲಿ ಪರ್ಯಾಯಕ್ಕೆ ಕೂತಿರುವ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರಿಗೆ ಬುಧವಾರ ಬೆಳಗ್ಗೆ ಸಣ್ಣ ತರಚು ಗಾಯದಂಥದ್ದು ಆಗಿದ್ದು, ಈ ಸುದ್ದಿ ದೊಡ್ಡ ಸ್ವರೂಪ ಪಡೆದು ಜಾರಿ ಬಿದ್ದಿದ್ದಾರೆ, ಅದರಿಂದ ಶ್ರೀಗಳಿಗೆ ಗಾಯವಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ.
ಆದರೆ, ಈ ಬಗ್ಗೆ ಒನ್ ಇಂಡಿಯಾ ಕನ್ನಡವು ಮಠದಲ್ಲಿರುವವರನ್ನೇ ವಿಚಾರಿಸಿದ್ದು, ಮಾಹಿತಿ ದೊರಕಿದೆ. ಬುಧವಾರ ಬೆಳಗ್ಗೆ ಗರ್ಭಗುಡಿಯಲ್ಲಿ ಪೂಜೆ ಮುಗಿಸಿದ ನಂತರ ಎಣ್ಣೆ ಪಸೆ ಇದ್ದದ್ದರಿಂದ ಅದರ ಮೇಲೆ ಕಾಲಿರಿಸಿ, ಗೋಡೆಗೆ ಭುಜ ತರಚಿದ್ದರಿಂದ ಆಗಿರುವ ಸಣ್ಣ ಪ್ರಮಾಣದ ಗಾಯ ಅದು.

ಗರ್ಭಗುಡಿಯಲ್ಲಿ ದೇವರಿಗೆ ಹಚ್ಚಿದ ದೀಪವನ್ನು ಹೊರತುಪಡಿಸಿ ಇನ್ಯಾವುದೇ ಬೆಳಕು ಇರುವುದಿಲ್ಲ. ಆ ಕತ್ತಲಲ್ಲಿ ಎಣ್ಣೆ ಬಿದ್ದಿದ್ದು ಗಮನಕ್ಕೆ ಬರದೆ ಸ್ವಾಮೀಜಿ ಅವರು ಮೇಲಕ್ಕೆ ಏಳುವ ವೇಳೆ ಸ್ವಲ್ಪ ಮಟ್ಟಿಗೆ ಆಯ ತಪ್ಪಿ ಭುಜವು ಗೋಡೆಗೆ ತಾಕಿದೆ. ಆ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ಗಾಯವಾಗಿದೆ ವಿನಾ ಅದು ತೀರಾ ಗಂಭೀರ ಸ್ವರೂಪದ್ದಲ್ಲ. ಅದಕ್ಕೆ ಹೆಚ್ಚಿನ ಪ್ರಾಮುಖ್ಯ ಕೊಡುವ ಅಗತ್ಯವೂ ಇಲ್ಲ ಎಂದು ಮಠದ ಮೂಲಗಳು ತಿಳಿಸಿವೆ.












Click it and Unblock the Notifications