ಉಡುಪಿಯಲ್ಲಿ ಅಂಗಡಿ ಬಂದ್ ಮಾಡಿಸಲು ಹೋದವರೇ ಆ ಸ್ಥಳದಿಂದ ಕಾಲ್ಕಿತ್ತರು!

ಉಡುಪಿ, ಜನವರಿ 08: ಭಾರತ್ ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲು ಮುಂದಾದವರಿಗೆ ಅಂಗಡಿ ಮಾಲಿಕನೋರ್ವ ತರಾಟೆಗೆ ತೆಗೆದುಕೊಂಡು ಓಡಿಸಿದ ಪ್ರಸಂಗ ಬೆಳಕಿಗೆ ಬಂದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗುಜ್ಜಾಡಿ ಎಂಬಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಅಂಗಡಿ ಮಾಲೀಕ ಮೋಹನ್ ಗುಜ್ಜಾಡಿ ಎಂಬುವವರು ಇಂದು ಮುಂಜಾನೆ ಅಂಗಡಿ ಬಂದ್ ಮಾಡಲು ಬಂದವರ ಪುಂಗಿ ಬಂದ್ ಮಾಡಿಸಿದ್ದಾರೆ. ಸದ್ಯ ಬಂದ್ ಮಾಡಲು ಬಂದವರ ಮತ್ತು ಮಾಲೀಕರ ನಡುವಿನ ಮಾತಿನ ಚಕಮಕಿಯ ವಿಡಿಯೋ ವೈರಲ್ ಆಗಿದೆ. ಬಹುತೇಕ ರಾಜ್ಯದ ಎಲ್ಲಾ ಬಿಜೆಪಿ ನಾಯಕರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.

"ಮೋದಿ ಪ್ರಧಾನಿಯಾಗಿ ಬಂದ್ರು, ನಾನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತ ನಿಮ್ಮ ಬಂದ್ ಗೆ ನನ್ನ ಸಪೋರ್ಟ್ ಇಲ್ಲ ಎಂದು ಅಂಗಡಿ ಮಾಲಿಕ ಕಮ್ಯುನಿಸ್ಟ್ ಕಾರ್ಯಕರ್ತರಿಗೆ ಆವಾಜ್ ಹಾಕಿದ್ದಾರೆ. ನೀವು ಒಳ್ಳೆಯ ವಿಚಾರ ಹಿಡಿದು ಬನ್ನಿ ಅದಕ್ಕೆ ಸಪೋರ್ಟ್ ಮಾಡ್ತೇನೆ. ಹೋರಾಟ ಮಾಡುವುದಿದ್ದರೆ ಶಬರಿಮಲೆ ವಿಚಾರವಾಗಿ ಹೋರಾಟ ಮಾಡಿ, ಅಲ್ಲಿ ಸಾವಿರ ವರ್ಷ ನೀತಿ ನಿಯಮ ಹಾಳಾಗಿದೆ.

Shopkeeper slams protesters in Baindur

ಇದಕ್ಕೆ ನಿಮ್ಮ ಬಳಿ ಉತ್ತರ ಇಲ್ಲ, ಸಾವಿರಾರು ವರ್ಷದಿಂದ ಶಬರಿಮಲೆಯಲ್ಲಿ ಪುಣ್ಯದ ಕೆಲಸ ನಡಿತಾ ಇತ್ತು. ಗಲೀಜು ತಿನ್ನುವವರು, ಕಚಡಾ ತಿನ್ನುವವರು,ಮುಖ್ಯಮಂತ್ರಿ ಮಾಂಸ ತಿಂದು ಹೋಗ್ತೇನೆ ದೇವಸ್ಥಾನಕ್ಕೆ ಅಂದರೆ ಕಮ್ಯುನಿಸ್ಟ್ ನವರದ್ದು ಬಂದ್ ಇಲ್ಲ" ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಅಂಗಡಿ ಬಂದ್ ಮಾಡಿಸಲು ಬಂದವರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+