ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ #ShobhaGoBack ಅಭಿಯಾನ

ಉಡುಪಿ, ಫೆಬ್ರವರಿ 21 : ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕೆಲವು ಜನರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಆರಂಭಿಸಿದ್ದಾರೆ. ಸಂಸದರು ಕ್ಷೇತ್ರದ ಕಾರ್ಯ ಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ #ShobhaGoBack ಎಂಬ ಅಭಿಯಾನವನ್ನು ಟ್ವಿಟರ್‌ನಲ್ಲಿ ಆರಂಭಿಸಲಾಗಿದೆ. ಕರ್ನಾಟಕದ ಬಿಜೆಪಿ ನಾಯಕರು ಇದಕ್ಕೆ ಯಾವ ಉತ್ತರ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಈ ಬಾರಿಯೂ ಶೋಭಾ ಕರಂದ್ಲಾಜೆ ಅವರು ಅಭ್ಯರ್ಥಿಯಾಗುವ ಸಂಭವವಿದೆ ಎಂಬ ಸುದ್ದಿ ಬುಧವಾರ ಹಬ್ಬಿತ್ತು. ಗುರುವಾರ ಶೋಭಾ ಗೋ ಬ್ಯಾಕ್ ಎಂಬ ಟ್ವಿಟರ್ ಅಭಿಯಾನ ಸದ್ದು ಮಾಡುತ್ತಿದೆ.

ಈ ಬಾರಿ ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು. ಸ್ಥಳೀಯ ಅಭ್ಯರ್ಥಿ ಯಾರೇ ಆದರೂ ತೊಂದರೆಯಿಲ್ಲ‌ ಅವರಿಗೆ ಬೆಂಬಲವಿದೆ, ಶೋಭಾ ಕರಂದ್ಲಾಜೆ ಅವರು ಅಭ್ಯರ್ಥಿಯಾದರೆ ಖಂಡಿತ ಬೆಂಬಲ ನೀಡುವುದಿಲ್ಲ ಎಂದು ಅಭಿಯಾನದ ಮೂಲಕ ಸಂದೇಶ ರವಾನಿಸಲಾಗುತ್ತಿದೆ.

ಸಂಸದರ ವಿರುದ್ಧ ಆಕ್ರೋಶ

ಸಂಸದರ ವಿರುದ್ಧ ಆಕ್ರೋಶ

ಸ್ಥಳೀಯರು ಸಂಸದರು ಆದರೆ ಮಾತ್ರ ನಮ್ಮ ಸಮಸ್ಯೆಗಳಿಗೆ ಧ್ವನಿಯಾಗುತ್ತಾರೆ. ಕಳೆದ 5 ವರ್ಷ ನಾವು ಸಂಸದರು ಇದ್ದು ಇಲ್ಲದಂತೆ ನಿರ್ಜೀವವಾಗಿ ಇರುವುದು ಕಂಡಿದ್ದೇವೆ ಎಂದು ಆರೋಪಿಸಲಾಗುತ್ತಿದೆ. ಬಿಜೆಪಿ ಈ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಲಿದೆಯೇ? ಎಂದು ಕಾದು ನೋಡಬೇಕು.

ಸ್ಥಳೀಯ ಅಭ್ಯರ್ಥಿ ಆಯ್ಕೆ ಮಾಡಿ

ದಯವಿಟ್ಟು ಉಡುಪಿಗೆ ಸ್ಥಳೀಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಇಲ್ಲವಾದಲ್ಲಿ ನಾವು ಶಿವಮೊಗ್ಗ ಕ್ಷೇತ್ರವನ್ನು ಕಳೆದುಕೊಳ್ಳಬಹುದು ಎಂದು ಟ್ವೀಟ್ ಮಾಡಲಾಗಿದೆ.

ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ

ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಸ್ಥಳೀಯ ಹೊಸ ಮುಖ ಅಗತ್ಯ. ಕಾರ್ಯಕರ್ತರನ್ನು ಕಡೆಗಣಿಸುವ ಸಂಸದರು ಬೇಡ ಎಂಬ ಕೂಗು ಎದ್ದಿದೆ.

ಜಯಪ್ರಕಾಶ ಹೆಗ್ಡೆ ಪರ ಬ್ಯಾಟಿಂಗ್

ಉಡುಪಿಗೆ ಶೋಭಾ ಶೋಭೆ ತರುವುದಿಲ್ಲ. ಜಯಪ್ರಕಾಶ ಹೆಗ್ಡೆ (ಜಯ) ಎಂದು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

ಶೋಭಾ ಕರಂದ್ಲಾಜೆ ಅವರಿಗೆ ಜಾಗವಿಲ್ಲ

ನೋ ವರ್ಕ್ ನೋ ಸೀಟ್...NaMo there is no place for Shobha karandaje ಎಂದು ಟ್ವೀಟ್ ಮಾಡಲಾಗಿದೆ.

ಶೋಭಾಗೆ ಮತ ನೀಡಬೇಡಿ

ಉಡುಪಿ-ಚಿಕ್ಕಮಗಳೂರಿಗೆ ಶೋಭಾ ಕರಂದ್ಲಾಜೆ ಆಯ್ಕೆ ಮಾಡಬೇಡಿ. ಬಿಜೆಪಿಯ ಮತಗಳು ನೋಟಾಕ್ಕೆ ಹೋಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+