ಸಿದ್ದರಾಮಯ್ಯ ಹೊಗಳಿಕೆ; ಈಗ ಸಂಸದೆ ಶೋಭಾ ಕರಂದ್ಲಾಜೆ ಸರದಿ

Recommended Video

      ಮಾಜಿ ಸಿ ಎಂ ಸಿದ್ದರಾಮಯ್ಯನವರನ್ನ ಹೊಗಳಿದ ಶೋಭಾ ಕರಂದ್ಲಾಜೆ | Oneindia Kannada

      ಉಡುಪಿ, ಮೇ 27: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ವೇಳೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ವಾಚಾಮಗೋಚರ ಹೊಗಳಲು ಆರಂಭಿಸಿದ್ದರು.

      ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಮೂಲೆಗುಂಪು ಮಾಡುತ್ತಿದೆ ಎಂದು ಸಿದ್ದರಾಮಯ್ಯ ಅವರ ಬಗ್ಗೆ ಕನಿಕರ ತೋರಿದ್ದರು.

      ಈಗ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರೂ ಸಿದ್ದರಾಮಯ್ಯ ಅವರನ್ನು ಕೊಂಡಾಡಿದ್ದಾರೆ.

      shobha-karandlaje-praised-farmer-chief-minister-siddaramaiah

      ಕಾಂಗ್ರೆಸ್ 78 ಸೀಟುಗಳನ್ನು ಗೆಲ್ಲಲು ಸಿದ್ದರಾಮಯ್ಯ ಅವರೇ ಕಾರಣ. ಕುರುಬರು, ಅಲ್ಪಸಂಖ್ಯಾತರ ಮತಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ನೆರವಾಗಿದ್ದಾರೆ.

      ಆಗ ಸಿದ್ದರಾಮಯ್ಯ ಅವರನ್ನು ತಲೆಯ ಮೇಲೆ ಹೊತ್ತು ತಿರುಗುತ್ತಿದ್ದ ಕಾಂಗ್ರೆಸ್, ಈಗ ಅವರನ್ನು ದೊಪ್ಪನೆ ಕೆಳಗೆ ಹಾಕಿದೆ.

      ಮಾಡಿದ ತಪ್ಪಿಗೆ ಸಿದ್ದರಾಮಯ್ಯ ಅವರು ಪ್ರಾಯಶ್ಚಿತ್ತ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್‌ನದ್ದು ಯೂಸ್ ಆಂಡ್ ಥ್ರೋ ಮನಸ್ಥಿತಿ. ರಾಜ್ಯದಲ್ಲಿ ಕಾಂಗ್ರೆಸ್ ನಾಯಕರಿಗೆ ಬೆಲೆ ಇಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.

      ದೆಹಲಿಯ ನಾಯಕರಿಗೆ ಸಿದ್ದರಾಮಯ್ಯ ಅವರಿಗಿಂತ ಕುಮಾರಸ್ವಾಮಿ ಹತ್ತಿರದವರಾಗಿದ್ದಾರೆ. ಸಿದ್ದರಾಮಯ್ಯ ಅವರು ರಾಹುಲ್, ಸೋನಿಯಾಗೆ ಬೇಡವಾಗಿದ್ದಾರೆ, ಜೆಡಿಎಸ್‌ಗೂ ಬೇಡವಾಗಿದ್ದಾರೆ.

      ರಾಜ್ಯ ಸರ್ಕಾರಕ್ಕೆ ಈಗ ಎರಡೆರಡು ಹೈಕಮಾಂಡ್‌ಗಳಿವೆ. ಒಂದು ಬೆಂಗಳೂರಿನ ಪದ್ಮನಾಭನಗರದಲ್ಲಿದ್ದರೆ, ಇನ್ನೊಂದು ದೆಹಲಿಯಲ್ಲಿದೆ.

      ಸಾಲಮನ್ನಾಗೆ ಕಾಂಗ್ರೆಸ್ ವಿರೋಧವಿದ್ದರೆ ಸ್ಪಷ್ಟಪಡಿಸಲಿ. ಅಧಿಕಾರ ಅನುಭವಿಸಿದರೆ ಸಾಲದು, ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+