ಶೀರೂರು ಶ್ರೀ ಹುಟ್ಟುಹಬ್ಬದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾದ ಶಿವಮಣಿ
ಉಡುಪಿ, ಜೂನ್.08 : ಶೀರೂರು ಶ್ರೀ ಹುಟ್ಟುಹಬ್ಬವನ್ನು ಇಂದು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಉಡುಪಿಯ ಹಿರಿಯಡ್ಕದ ಮೂಲಮಠದಲ್ಲಿ ಅಂತಾರಾಷ್ಟ್ರೀಯ ಡ್ರಮ್ಮರ್ ಶಿವಮಣಿ ಕಾರ್ಯಕ್ರಮ ನೀಡುವ ಮೂಲಕ ಸ್ವಾಮೀಜಿಗಳ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಶೀರೂರು ಮೂಲಮಠದ ಆಂಜನೇಯ ಸನ್ನಿಧಿಯಲ್ಲಿ ಡ್ರಮ್ಸ್ ಸೇವೆ ಮಾಡುವ ಮೂಲಕ ಶಿವಮಣಿ ಸಂಗೀತ ರಸಿಕರನ್ನು ರಂಜಿಸಿದರು. ವಿಶ್ವದ ಪ್ರಮುಖ ಡ್ರಮ್ಮರ್ ಗಳ ಸಾಲಿನಲ್ಲಿ ಶಿವಮಣಿ ಪ್ರಮುಖರು. ಶಿವಮಣಿ ಕಾರ್ಯಕ್ರಮ ಆಯೋಜನೆ ಮಾಡಬೇಕಂದ್ರೆ ವರ್ಷಗಟ್ಟಲೆ ಕಾಯಬೇಕು.
ಅಷ್ಟು ಸುಲಭದಲ್ಲಿ ಡ್ರಮ್ಮರ್ ಶಿವಮಣಿ ಯಾರ ಕೈಗೂ ಸಿಗೋದಿಲ್ಲ. ಆದರೆ ಶಿವಮಣಿ ಮನಸ್ಸು ಮಾಡಿದರೆ ಉಚಿತವಾಗಿ ಕಾರ್ಯಕ್ರಮ ಕೊಡ್ತಾರೆ. ಮುಂದೆ ಓದಿ...

ಮಂತ್ರಮುಗ್ಧರಾದ ಸಂಗೀತ ಪ್ರೇಮಿಗಳು
ಉಡುಪಿಯ ಶ್ರೀಕೃಷ್ಣನ ಭಕ್ತ ಈ ಡ್ರಮ್ಮರ್. ಹೀಗಾಗಿ ಉಡುಪಿಗೆ ಭೇಟಿ ಕೊಡುತ್ತಲೇ ಇರುತ್ತಾರೆ. ಅದರಲ್ಲೂ ಸಂಗೀತ ಪ್ರೇಮಿ ಶೀರೂರು ಶ್ರೀ ಮತ್ತು ಶಿವಮಣಿ ಆತ್ಮೀಯರು.ಆಗಾಗ ಶೀರೂರು ಮಠಕ್ಕೆ ಬಂದು ಕಾರ್ಯಕ್ರಮ ನೀಡುತ್ತಿರುತ್ತಾರೆ. ಇವತ್ತು ಶೀರೂರು ಶ್ರೀಗಳ ಜನ್ಮನಕ್ಷತ್ರ.
ಈ ಪ್ರಯುಕ್ತ ಶೀರೂರು ಮೂಲಮಠಕ್ಕೆ ಆಗಮಿಸಿದ ಶಿವಮಣಿ ಅರ್ಧ ತಾಸು ಡ್ರಮ್ ಬಾರಿಸುವ ಮೂಲಕ ಸಂಗೀತ ಪ್ರೇಮಿಗಳನ್ನು ಮಂತ್ರಮುಗ್ಧರನ್ನಾಗಿಸಿದ್ರು.

ಖುಷಿಪಟ್ಟರು ಶ್ರೀಗಳು
ಶೀರೂರು ಶ್ರೀಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸದಾ ಮುಂದು. ಸ್ವತಃ ಡ್ರಮ್ಮರ್ ಆಗಿರೋ ಶ್ರೀಗಳು, ಶಿವಮಣಿ ಡ್ರಮ್ಸ್ ಬಾರಿಸುವಾಗ ತಾವೂ ಜೊತೆಯಾದ್ರು. ತಮ್ಮ ಇಷ್ಟದ ಶೈಲಿಯನ್ನು ಶಿವಮಣಿಯವರಿಗೆ ಹೇಳಿ ಬಾರಿಸಿ ಖುಷಿಪಟ್ರು.

ಸಂಗೀತ ಶಾಲೆಯ ಶಂಕು ಸ್ಥಾಪನೆ
ಇದಕ್ಕೂ ಮುನ್ನ ಶಿವಮಣಿಯವರು ಶೀರೂರು ಮಠದ ವತಿಯಿಂದ ಸ್ಥಾಪನೆಗೊಳ್ಳುವ ಶಾಲೆಯ ಶಿಲಾನ್ಯಾಸದಲ್ಲಿ ಪಾಲ್ಗೊಂಡ್ರು. ಜೊತೆಗೆ ಶಿವಮಣಿ ಇಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸಂಗೀತ ಶಾಲೆಯ ಶಂಕುಸ್ಥಾಪನೆಯೂ ಇವತ್ತು ನೆರವೇರಿತು.

ಆಕರ್ಷಣೆಯ ಕೇಂದ್ರ ಬಿಂದು ಶಿವಮಣಿ
ಶೀರೂರು ಶ್ರೀಗಳ ಜನ್ಮನಕ್ಷತ್ರದ ಪ್ರಯುಕ್ತ ಇಂದು ಮಠಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಆದರೆ. ಅಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು ಮಾತ್ರ ಶಿವಮಣಿ. ಬೇರೆ ಬೇರೆ ರಾಜ್ಯದ ಡ್ರಮ್ ಶೈಲಿಯನ್ನು ತಮ್ಮ ಕೈಚಳಕದ ಮೂಲಕ ಪ್ರದರ್ಶಿಸಿದ ಶಿವಮಣಿ , ನೆರೆದ ಭಕ್ತಾದಿಗಳ ಮೆಚ್ಚುಗೆಗೆ ಪಾತ್ರರಾದರು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications