ಶೆಲ್ವ ಪಿಳ್ಳೆ ಓರ್ವ ಪ್ರಚಾರ ಪ್ರೇಮಿ ಸ್ವಾಮೀಜಿ - ಪೇಜಾವರ ಶ್ರೀ
ಉಡುಪಿ ಶ್ರೀಕೃಷ್ಣ ಮಠದ ಕನಕ ಕಿಂಡಿ ಹಾಗೂ ಕನಕದಾಸರದ ವಿಚಾರದಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಶೆಲ್ವ ಪಿಳ್ಳೆ ಒಬ್ಬ ಪ್ರಚಾರ ಪ್ರೇಮಿ ಸ್ವಾಮೀಜಿ ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ, ಮೇ 3: ಕನಕದಾಸರು ಉಡುಪಿಗೆ ಬಂದೇ ಇಲ್ಲ ಎಂದು ಮೇಲುಕೋಟೆಯಲ್ಲಿ ಅರ್ಚಕ ಶೆಲ್ವ ಪಿಳ್ಳೆ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಶೆಲ್ವ ಪಿಳ್ಳೆ ಓರ್ವ ಪ್ರಚಾರ ಪ್ರಿಯ ಸ್ವಾಮೀಜಿ ಎಂದು ಹೇಳಿದ್ದಾರೆ.
"ಬುದ್ಧಿಜೀವಿಗಳು ಕನಕನ ಕಿಂಡಿಯನ್ನು ಕಲ್ಪನೆ ಎಂಬುದಾಗಿ ಹೇಳಿದರೆ, ಪಂಡಿತರು ನವಗ್ರಹ ಕಿಂಡಿ ಎಂದು ಕರೆಯುತ್ತಾರೆ. ಕನಕದಾಸರು ಉಡುಪಿಗೆ ಬಂದ ಬಗ್ಗೆ ದಾಖಲೆಗಳಿವೆ. ಈ ಸಂಬಂಧ ವಾದಿರಾಜರು ರಚಿಸಿದ ಹಾಡುಗಳಿವೆ. ಇನ್ನೂ ಒಪ್ಪದಿದ್ದರೆ ನಾವೇನು ಮಾಡಲು ಆಗುವುದಿಲ್ಲ ಎಂದು," ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಎಲ್ಲರ ಬಗ್ಗೆ ಪವಾಡದ ಕಥೆಗಳು ಇವೆ. ಪುರಂದರದಾಸ, ಶಂಕರಾಚಾರ್ಯ, ರಾಮಾನುಜಾಚಾರ್ಯರ ಪವಾಡವಿದೆ. ಆದರೆ ಕನಕದಾಸರ ಬಗ್ಗೆ ಮಾತ್ರ ಆಕ್ಷೇಪ ಎತ್ತಲಾಗುತ್ತದೆ. ಕನಕದಾಸರು ಹಿಂದುಳಿದವರೆಂದು ಅವರನ್ನು ಕೀಳಾಗಿ ಕಾಣುತ್ತೀರಾ? ಕುರುಬರ ಭಾವನೆಗೆ ಧಕ್ಕೆಯಾಗುವಂತೆ ಬುದ್ಧಿಜೀವಿಗಳು ಪ್ರಶ್ನಿ ಸುತ್ತಿರುವುದು ಯಾಕೆ ಎಂದು ಅವರು ಪ್ರಶ್ನಿಸಿದರು.
ಉಡುಪಿ ಶ್ರೀಕೃಷ್ಣ ಮಠದ ಕನಕ ಕಿಂಡಿ ಹಾಗೂ ಕನಕದಾಸರದ ವಿಚಾರದಲ್ಲಿ ಅನಾವಶ್ಯಕ ಗೊಂದಲ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಶೆಲ್ವ ಪಿಳ್ಳೆ ಒಬ್ಬ ಪ್ರಚಾರ ಪ್ರೇಮಿ ಸ್ವಾಮೀಜಿ ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

Click it and Unblock the Notifications